ಟಿಪ್ಪು ಸುಲ್ತಾನ್ ಜಯಂತ್ಯೋತ್ಸವ ಕಾರ್ಯಕ್ರಮ
Koppal : ಷೇರ್ ಎ ಮೈಸೂರ್ ಹ. ಟಿಪ್ಪು ಸುಲ್ತಾನ್ ಜಯಂತ್ಯೋತ್ಸವ ಕಾರ್ಯಕ್ರಮ ಶನಿವಾರ ಮಧ್ಯಾಹ್ನ 12 ಗಂಟೆಗೆ ನಗರಸಭೆ ಎದುರಿನ ಶಾದಿಮಹಲ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಅಲ್ಪಸಂಖ್ಯಾತರ ಹಾಗೂ ವಕ್ಫ ಮತ್ತು ಹಜ್ ಸಚಿವರಾದ ಜಮೀರ್ ಅಹ್ಮದ ಖಾನ್ ಉದ್ಘಾಟಿಸಲಿದ್ದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ ಜ್ಯೋತಿ ಬೆಳಗಿಸಲಿದ್ದಾರೆ. ದಿವ್ಯ ಸಾನಿಧ್ಯ ಯೂಸುಫೀಯಾ ಮಸ್ಜೀದ್ ಇಮಾಮ್ ಹ. ಮುಫ್ತಿ ನಜೀರ್ ಅಹ್ಮದ್ ಖಾದ್ರಿ ತಸ್ಕೀನ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹುನಗುಂದ ಶಾಸಕರಾದ ವಿಜಯಾನಂದ ಕಾಶಪ್ಪನವರ ಆಗಮಿಸಲಿದ್ದು ಶಾಸಕರಾದ ರಾಘವೇಂದ್ರ ಹಿಟ್ನಾಳ, ನಗರಸಭೆ ಅಧ್ಯಕ್ಷರು ಅಮ್ಜದ್ ಪಟೇಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಸಂಸದ ಸಂಗಣ್ಣ ಕರಡಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದು ಪುಸ್ತಕ ಮೇಳವನ್ನು ರಾಜ್ಯ ವಕ್ಫ ಬೋರ್ಡ್ ಸದಸ್ಯರು ಆಸೀಫ್ ಅಲಿ, ಉಡಾನ್ ಡೆವಲಪರ್ಸ್ ನ ಸಾದಿಕ್ ಅತ್ತಾರ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಾಲಿ ಮಾಜಿ ಜನಪ್ರತಿನಿಧಿಗಳು, ನಗರಸಭೆ ಸದಸ್ಯರುಗಳು, ಸಾಹಿತಿಗಳು ಹೋರಾಟಗಾರರು ಆಗಮಿಸಲಿದ್ದಾರೆ.
ಹಗರಿಬೊಮ್ಮನಹಳ್ಳಿ ಡಿಗ್ರಿ ಕಾಲೇಜ್ ಉಪನ್ಯಾಸಕರಾದ ಡಾ. ಅಕ್ಕಿ ಬಸವೇಶ ಅವರು ಉಪನ್ಯಾಸ ನೀಡಲಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹುಚ್ಚಮ್ಮ ಚೌದ್ರಿ ಸೇರಿ ಐವರಿಗೆ ಸನ್ಮಾನ ಜರುಗಲಿದೆ ಎಂದು ಹಜರತ್ ಟಿಪ್ಪು ಸುಲ್ತಾನ್ ಜಯಂತ್ಯೋತ್ಸವ ಆಚರಣಾ ಸಮಿತಿ ತಿಳಿಸಿದೆ.