ಮಕ್ಕಳ ಆರೋಗ್ಯದ ದೃಷ್ಟಿಯಿಂದ ಬಾಲ್ಯವಿವಾಹ ಒಳ್ಳೆಯದಲ್ಲ : ಜಯಶ್ರೀ ಬಿ ದೇವರಾಜ್
ಗಂಗಾವತಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಗಂಗಾವತಿ ವೀರು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದ ವತಿಯಿಂದ ಎಂ. ಎನ್.ಎಂ. ಬಾಲಕಿಯರ ಪದವಿ ಪೂರ್ವ ಕಾಲೇಜುನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006, ಪೋಕ್ಸೋ 2012 ಕಾಯ್ದೆ, ವೈಯಕ್ತಿಕ ಸ್ವಚ್ಛತೆ, ಸಂಬಂಧಗಳ ಮೌಲ್ಯ,ಶಿಕ್ಷಣದ ಮಹತ್ವ ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕರಾದ ಜಯಶ್ರೀ ಬಿ ದೇವರಾಜ ರವರಿಂದ ಮಾಹಿತಿ ನೀಡಿ ಬಾಲ್ಯ ವಿವಾಹ ಸಮಾಜಕ್ಕೆ ಅಂಟಿದ ಪಿಡುಗಾಗಿದೆ. ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಬಾಲ್ಯವಿವಾಹ ಒಳ್ಳೆಯದಲ್ಲ. ಇದನ್ನು ದೂರ ಮಾಡುವ ಕೆಲಸ ಆಗಬೇಕಿದೆ,” ಎಂದರು. ”ಸಾರ್ವಜನಿಕರು ಬಾಲ್ಯವಿವಾಹ ಕಂಡು ಬಂದಲ್ಲಿ ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಬೇಕು. ಬಾಲ್ಯ ವಿವಾಹ ನಡೆಸುವುದು ಶಿಕ್ಷಾರ್ಹ ಅಪರಾಧವಾಗಿದೆ.ಮಕ್ಕಳಿಗೆ ಉನ್ನತ ಶಿಕ್ಷ ಣ ಕೊಡಿಸಲು ಪೋಷಕರು ಗಮನ ಹರಿಸಬೇಕು,” ಎಂದು ಹೇಳಿದರು ಲೈಂಗಿಕ ಅಪರಾಧಗಳಿಂದ ಮುಕ್ತಿ ಹೊಂದಲು ಮಕ್ಕಳ ರಕ್ಷಣೆ ಕಾಯ್ದೆ ( ಪೋಕ್ಸೋ ) ಹೇಗೆ ಕೆಲಸ ಮಾಡಲಿದೆ ಎಂಬುದನ್ನು ವಿವರಿಸಿದರು.
ಮಕ್ಕಳ ಮೇಲೆ ಎಸಗುವ ದೌರ್ಜನ್ಯದ ವಿರುದ್ಧ ರಕ್ಷಣೆ ನೀಡಲು ರಚಿಸಿರುವ ಸಮಗ್ರ ಮತ್ತು ಅತ್ಯಂತ ಕಠಿಣ ಕಾನೂನು ಇದಾಗಿದೆ. ಈ ಕಾಯ್ದೆ ಮಗು ಸ್ನೇಹಿಯಾಗಿದೆ.ಇದರಡಿ ಮಕ್ಕಳ ಗೌಪ್ಯತೆ ಮತ್ತು ಗೌರವವನ್ನು
ಕಾಯುವಂತೆ ಕಾನೂನುಗಳ ತಿದ್ದುಪಡಿ
ಮಾಡಲಾಗಿದೆ. ಸಮಾಜದಲ್ಲಿ ಮಕ್ಕಳ ಸಾಂಸ್ಥಿಕ ರಕ್ಷಣೆ ಮತ್ತು ಸಾಮಾಜಿಕ ನ್ಯಾಯ ಹೆಚ್ಚಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಎಮ್. ಏನ್. ಎಮ್ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು ಕುಮಾರಿ.ಗಂಗಮ್ಮ, ಸಾಂತ್ವನ ಕೇಂದ್ರದ ಸಿಬ್ಬಂದಿಯಾದ ಕಸ್ತೂರಿ, ಮಂಜುಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.