ಕನ್ನಡಿಗರಿಗೆ ಆದ್ಯತೆ ನೀಡುವುದು ಸಹಜವಾಗಬೇಕು-  ಡಾ. ವಿಜಯ ತಂಬಂಡ ಪೂಣಚ್ಚ

Get real time updates directly on you device, subscribe now.

ಕೊಪ್ಪಳ :  ನಮ್ಮಲ್ಲಿರುವ ಮನುಷ್ಯ ಸಂವೇದನೆಗಳು ಕಣ್ಮರೆಯಾಗುತ್ತಿವೆ. ನಾವು ಕೇವಲ  ಇತಿಹಾಸವನ್ನೇ ಹೇಳುತ್ತಾ ಕುಳಿತರೇ ಆಗುವುದಿಲ್ಲ. ಇಂದಿನ ವರ್ತಮಾನದ ಬಗ್ಗೆ ಅರಿವು ಬೇಕು. ನಾವು ಹೇಗಿದ್ದೇವೆ ಎನ್ನುವುದು ಮುಖ್ಯ, ನಾವು ಜೀವಸೆಲೆಗಳನ್ನು ಕಳೆದುಕೊಂಡಿದ್ದೇವೆ. ಕನ್ನಡಿಗರಿಗೆ ಆದ್ಯತೆ ನೀಡಬೇಕು ಎನ್ನುವುದು ಯಾವುದೋ ವರದಿಯಲ್ಲಿ ಬಂದಿದೆ ಎನ್ನುವ ಕಾರಣಕ್ಕೊ ಅಥವಾ ಹೇರಿಕೆಯ ಕಾರಣಕ್ಕೋ ಆಗಬಾರದು ಅದು ತನ್ನಿಂದ ತಾನಾಗಿಯೇ ಸಹಜವಾಗಿಯೇ ಬರಬೇಕು ಎಂದು   ಹಂಪಿ ವಿವಿ ಕುಲಪತಿ  ಡಾ. ವಿಜಯ ತಂಬಂಡ ಪೂಣಚ್ಚ ಹೇಳಿದರು.
ಅವರು ಇಂದು ಬೇವಿನಹಳ್ಳಿಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ನಲ್ಲಿ ರಾಜ್ಯೋತ್ಸವ ಕಾಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾತನಾಡುತ್ತಿದ್ದರು. ಅನ್ಯ ಪುಟ್ಟ ಪುಟ್ಟ ದೇಶಗಳು ಕಂಡಿರುವ ಪ್ರಗತಿ ನಮಗೆಲ್ಲಾ ಮಾದರಿಯಾಗಬೇಕು.  ಈ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ನೀಡಿರುವ ಅದ್ಯತೆ ನಿಜಕ್ಕೂ ಶ್ಲಾಘನೀಯ. ಎಲ್ಲ ಹಂತಗಳಲ್ಲಿ ಕನ್ನಡಿಗರು ಇರುವುದು ನಿಜಕ್ಕೂ ಬಹಳ ಮುಖ್ಯವಾದದ್ದು. ಆದರೆ ಇದೇ ರೀತಿ ವರದಿಯನ್ವಯ ಉದ್ಯೋಗ ನೀಡಿರುವ ಕಾರ್ಖಾನೆಗಳು ಎಷ್ಟು ?  ಕೇವಲ ನವಂಬರ್ ನಲ್ಲಿ ಒಂದು ದಿನ ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸುವುದಲ್ಲ. ಅದು ದಿನನಿತ್ಯದ ಭಾಗವವಾಗಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು   ಆರ್.ವಿ.ಗುಮಾಸ್ತೆ ಮಾತನಾಡಿ ಕನ್ನಡಿಗರಿಗೆ ಬೇರೆ ಬೇರೆ ರಾಜ್ಯಗಳಲ್ಲಿ ಸಿಗುತ್ತಿರುವ ಸ್ಥಾನಮಾನಗಳು ಹಾಗೂ ಅದ್ಯತೆ ಕುರಿತು ಹಾಗೂ ಕಾರ್ಖಾನೆಯ ಆರಂಭದ ದಿನಗಳ ತಮ್ಮ ಅನುಭವವನ್ನು ಹಂಚಿಕೊಂಡರು.    ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಜ್ ನ  ಕಾರ್ಯನಿರ್ವಾಹಕ ಉಪಾಧ್ಯಕ್ಷ, ಮಾನವ ಸಂಪನ್ಮೂಲ & ಸಾಮಾನ್ಯ ಆಡಳಿತ ವಿಭಾಗದ ಮುಖ್ಯಸ್ಥ ಪಿ.ನಾರಾಯಣ,  ಉದವ್ ಕುಲಕರ್ಣಿ,  ಕಂಪನಿಯ ಹಿರಿಯ ಅಧಿಕಾರಿಗಳು, ಆಫೀಸರ‍್ಸ ಲೇಡಿಸ್ ಕ್ಲಬ್ ನ ಅಧ್ಯಕ್ಷರು ಮತ್ತು ಸದಸ್ಯರು, ಸೇರಿದಂತೆ ಇತರರು ಉಪಸ್ಥಿತರಿದ್ದರು. ನಿರೂಪಣೆಯನ್ನು ಎಂ.ಎಂ.ನಾಡಿಗರ್, ವಂದನಾರ್ಪಣೆಯನ್ನು ಬಿ.ಚಂದ್ರಶೇಖರ್ ನೆರವೇರಿಸಿದರು.  ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಹುಮಾನ ವಿತರಣೆ ಕಾರ್ಯಕ್ರಮವನ್ನು ಜಯಶ್ರೀಯವರು ನಡೆಸಿಕೊಟ್ಟರು.

Get real time updates directly on you device, subscribe now.

Comments are closed.

error: Content is protected !!