ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ
Koppal ಕೊಪ್ಪಳದ ಶ್ರೀ ಮತಿ ಇಂದಿರಾಗಾಂಧಿ ವಸತಿಶಾಲೆಯಲ್ಲಿ ಸ್ಪಂದನ ಸಂಸ್ಥೆಯು ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕುಸುಮಾ ಕುಮಾರಿ ಇವರು ವಹಿಸಿಕೊಂಡಿದ್ದರು.ಮುಖ್ಯ ಅತಿಥಿಯಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಾಂತೇಶ ಎಸ್ ದರಗದ ಅವರು ವಹಿಸಿದ್ದರು.ಮತ್ತೊರ್ವ ಅತಿಥಿಯಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿಯಾದ ಮಾಂತೇಶ ಪೂಜಾರ ಅವರು ವಹಿಸಿಕೊಂಡರು.
ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನು ಯೋಜನಾ ಸಂಯೋಜಕರಾದ ಶಂಕರ್ ಸುರಳ್ ಇವರು ಮಾತನಾಡುತ್ತಾ ಸ್ಪಂಧನ ಸಂಸ್ಥೆಯು ಕಳೆದ ಮೂರು ತಿಂಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕರು ಮತ್ತು ಮಕ್ಕಳ ಕಳ್ಳಸಾಗಾಣಿಕೆಯ ವಿರುದ್ದ ತಡೆಗಟ್ಟುವಲ್ಲಿ ನೇರವಾಗಿ “ನ್ಯಾಯಕ್ಕಾಗಿ ಪ್ರವೇಶ ಎಂಬ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸುತ್ತಿದೆ.(Access to Justice) ಇಂದು ಕೊಪ್ಪಳದಲ್ಲಿ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನವನ್ನು ಹಮ್ಮಿಕೊಂಡು ಈ ಒಂದು ಕಾರ್ಯಕ್ರಮ ಅಷ್ಟೆ ಅಲ್ಲದೆ ಸಾಯಂಕಾಲ ಹಳ್ಳಿಗಳಲ್ಲಿ ಸಹ ಕಾಂಡಲ್ ಮಾರ್ಚ್ ಕಾರ್ಯಕ್ರಮ ಸಹ ಜರಗುತ್ತದೆ ವಿವಿಧ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.ನಂತರ ಕಾರ್ಯಕ್ರಮದ ಉದ್ದೇಶಿಸಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗೌರವಾನ್ವಿತ ಮಾಂತೇಶ ಎಸ್ ದರಗದ ಅವರು ಮಾತನಾಡಿ ಬಾಲ್ಯ ವಿವಾಹದ ಕುರಿತು ಮತ್ತು ಮಕ್ಕಳ ಮೇಲೆ ಬೀರುವ ಪರಿಣಾಮದ ಬಗ್ಗೆ ತಿಳಿಸಿ ಮಕ್ಕಳ ಲೈಂಗಿಕ ಕಿರುಕುಳದಿಂದ ಮಕ್ಕಳ ರಕ್ಷಣಾ ಕಾಯ್ದೆ ಕುರಿತು ಮಾತನಾಡುತ್ತಾ ಜೊತೆಗೆ ಮಕ್ಕಳನ್ನು ಸಂವಾದಕ್ಕೆ ಸೆಳೆಯುತ್ತಾ ಮಕ್ಕಳಿಂದ ಪ್ರಶ್ನೆಗಳನ್ನು ಪಡೆದು ಅದಕ್ಕೆ ಉತ್ತರಿಸುತ್ತಾ ಕಾನೂನು ಅಂದ್ರೆ ಏನು ದೌರ್ಜನ್ಯ ಎಂದರೆ ಏನು ಎನ್ನುವ ಕುರಿತು ಮಕ್ಕಳಿಗೆ ತಿಳಿಸಿದರು.ಅಭಿಯಾನದಲ್ಲಿ ಭಾಗಿಯಾಗಿ ಅವರ ಒಂದು ಜವ್ಹಾಬ್ದಾರಿ ಹೇಗಿರುತ್ತದೆ.ಎಂಬುದರ ಕುರಿತು ಕಾನೂನಿನ ನ್ಯಾಯ ಪಡೆಯುವಲ್ಲಿ ಹೇಗೆ ನ್ಯಾಯ ಒದಗಿಸಬಹುದು ಎಂದು ಮಕ್ಕಳ ಪ್ರಶ್ನೆಗೆ
Comments are closed.