೨೦ ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಯಶಸ್ವಿ
ಕೊಪ್ಪಳ : ನಗರದ ಸರದಾರ್ ಗಲ್ಲಿ ಮುಸ್ಲಿಂ ಪಂಚ ಕಮಿಟಿಯ ಪರವಾಗಿ ಹಜರತ್ ಮೆಹಬೂಬ್ ಸುಬ್ಲಾನಿ (ರ.ಅ.) ರವರ ಪವಿತ್ರ ಗ್ಯಾರವಿ ಶರೀಫ್ ಆಚರಣೆಯ ನಿಮಿತ್ತ ಹಮ್ಮಿಕೊಂಡಿದ್ದ ಸತತ 20 ನೇ ವರ್ಷದ ಮುಸ್ಲಿಂ ಜೋಡಿಗಳ ಉಚಿತ ಸಾಮೂಹಿಕ ಮದುವೆಗಳ ಕಾರ್ಯಕ್ರಮ ಅದ್ದೂರಿಯಾಗಿ ಯಶಸ್ವಿಯಾಗಿ ನಡೆಯಿತು.
ಸಾವಿರಾರು ಸಂಖ್ಯೆಯಲ್ಲಿ ಸಾಮೂಹಿಕ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿ, ನೂತನ ನವ ಜೋಡಿಗಳಿಗೆ ತುಂಬು ಹೃದಯದಿಂದ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಎಲ್ಲ ಸದಸ್ಯರು, ನೌಜವಾನ ಕಮೀಟಿ ಪದಾಧಿಕಾರಿಗಳು ಹಾಗೂ ಸದಸ್ಯರು ಮುಸ್ಲಿಮ್ ಪಂಚಕಮೀಟಿ ಸರದಾರ ಸೇರಿದಂತೆ ನಗರದ ಗಣ್ಯರು,
ಕಾರ್ಯಕ್ರಮದ ಧಿವ್ಯ ಸಾನಿಧ್ಯ ಮುಫ್ತಿ ನಜೀರ್ ಅಹ್ಮದ್ ಸಾಬ್ ಖುರಾನ್ ಪಠಣ ಮದೀನಾ ಮಸ್ಜಿದ್ ಹೈದರ್ ಅಲಿ ಮೌಲಾನಾ, ಮಾಜಿ ಶಾಸಕ ಕೆ ಬಸವರಾಜ ಹಿಟ್ನಾಳ, ಸಂಸದ ಕೆ ರಾಜಶೇಖರ್ ಹಿಟ್ನಾಳ, ದಮ೯ ಗುರುಗಳು ಅಬ್ಬಾಸ್ ಅಲಿ ಖಾಜಿಸಾಬ ಹಾಗೂ ಮೈನುದ್ದಿನ ಖಾಜಿಸಾಬ, ಶಬುದ್ದೀನಸಾಬ್, ಮಾನ್ವಿ ಪಾಷಾ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
Comments are closed.