ಚಿಕ್ಕ ಕುಟುಂಬ ಚೊಕ್ಕ ಕುಟುಂಬ: ಡಾ.ಮಹೇಶ್ ಉಮಚಗಿ

Get real time updates directly on you device, subscribe now.

ಎನ್.ಎಸ್.ವಿ ಪಾಕ್ಷಿಕ, ನವಜಾತ ಶಿಶು ಸಪ್ತಾಹ ಕಾರ್ಯಕ್ರಮ
: ಹೆಣ್ಣಾಗಲಿ ಗಂಡಾಗಲಿ ಎರಡೇ ಮಕ್ಕಳು ಸಾಕು. ಚಿಕ್ಕ ಕುಟುಂಬ ಚೊಕ್ಕ ಕುಟುಂಬವಾಗಿದೆ ಎಂದು ಕೊಪ್ಪಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಮಹೇಶ ಉಮಚಗಿ ಅವರು ಹೇಳಿದರು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರದಂದು ಕೊಪ್ಪಳ ನಗರದ ಗವಿಮಠ ಹಿಂದುಗಡೆಯ ಕುವೆಂಪು ನಗರದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಎನ್.ಎಸ್.ವಿ ಪಾಕ್ಷಿಕ” ಹಾಗೂ ನವಜಾತ ಶಿಶು ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ನವಂಬರ್ 21 ರಿಂದ ಡಿಸೆಂಬರ್ 05 ರವರೆಗೆ ಎನ್.ಎಸ್.ವಿ ಪಾಕ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮದ ಉದ್ದೇಶ ಸಂತಾನ ನಿರೋಧ ಶಸ್ತ್ರಚಿಕಿತ್ಸೆಯಲ್ಲಿ ಪುರುಷರ ಸಹಭಾಗಿತ್ವದ ಬಗ್ಗೆ ಅರಿವು ಮೂಡಿಸಿ ಸೇವೆ ನೀಡುವುದಾಗಿದೆ. ತಾಯಿ ಮರಣ ಮತ್ತು ಶಿಶುಮರಣ ತಡೆಗಟ್ಟಲು, ಜನಸಂಖ್ಯಾ ನಿಯಂತ್ರಣದಲ್ಲಿ ತರಲು ಪುರುಷರ ಸಂತಾನ ನಿರೋಧ ಶಸ್ತçಚಿಕಿತ್ಸೆ ಪ್ರಮುಖವಾಗಿದೆ. ಯಾವ ಹೆಣ್ಣು ಮಕ್ಕಳಿಗೆ ಹೃದಯ ತೊಂದರೆ, ಕ್ಯಾನ್ಸರ್ ಖಾಯಿಲೆ ಹಾಗೂ ಇತರೆ ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದರೆ, ಅಂತವರ ಪತಿಯಂದಿರರಿಗೆ ಎನ್.ಎಸ್.ವಿ ಶಸ್ತçಚಿಕಿತ್ಸೆ ಮಾಡಬಹುದು. ಇದು ಸರಳ ಹಾಗೂ ಸುರಕ್ಷಿತ ವಿಧಾನವಾಗಿದೆ. ಗಾಯ ಇಲ್ಲ, ಹೊಲಿಗೆ ಇಲ್ಲ, ಚಿಕಿತ್ಸಾ ವಿಧಾನ ಕೆವಲ 05 ರಿಂದ 10 ನಿಮಿಷಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಲಾಗುವುದು. ಈ ಶಸ್ತçಚಿಕಿತ್ಸೆಯ ನಂತರ ಸಾಧರಣವಾಗಿ ಎಲ್ಲಾ ಕೆಲಸ-ಕಾರ್ಯಗಳನ್ನು ಮಾಡಬಹುದು. ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ, ತಕ್ಷಣ ಮನೆಗೆ ಹೋಗಬಹುದು. ಈ ಶಸ್ತ್ರಚಿಕಿತ್ಸೆ ನಂತರ 03 ತಿಂಗಳವರೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ಕಡ್ಡಾಯವಾಗಿ ನಿರೋಧ್ ಬಳಸಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತವೆ. ಪ್ರತಿ ಕುಟುಂಬಕ್ಕೆ ಹೆಣ್ಣಾಗಲಿ ಗಂಡಾಗಲಿ ಎರಡೇ ಮಕ್ಕಳು ಸಾಕು. ಚಿಕ್ಕ ಕುಟುಂಬ ಚೊಕ್ಕ ಕುಟುಂಬ. ಚಿಕ್ಕ ಕುಟುಂಬ ಸುಖಿ ಕುಟುಂಬ. ಎನ್.ಎಸ್.ವಿ ಮಾಡಿಸಿಕೊಳ್ಳಿ ಉತ್ತಮ ಪತಿ ಅನಿಸಿಕೊಳ್ಳಿ. ಜನಸಂಖ್ಯೆ ಹೆಚ್ಚಳದಿಂದ ನಮ್ಮ ದೇಶದಲ್ಲಿ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತವೆ. ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ಹಮ್ಮಿಕೊಂಡ ಇಂತಹ ಕಾರ್ಯಕ್ರಮಗಳಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ ಅವರು ಮಾತನಾಡಿ, ಹುಟ್ಟಿದ 28 ದಿನದೊಳಗಿನ ಶಿಶುವಿನ ಮರಣವನ್ನು ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. ನವಜಾತ ಶಿಶುವನ್ನು ಕಾಂಗರೂ ಮಾದರಿಯಲ್ಲಿ ಬೆಚ್ಚಗಿಡುವುದು, ಗಂಟೆಗೊಂದು ಬಾರಿ ತಾಯಿಯ ಎದೆಹಾಲು ನೀಡುವುದು, ಹೆರಿಗೆಯಾದ ಶಿಶುವಿಗೆ ಸೋಂಕು ಉಂಟಾಗದಂತೆ ನೋಡಿಕೊಳ್ಳುವುದಲ್ಲದೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಮಗುವನ್ನು ತಾಯಿಯ ಪಕ್ಕದಲ್ಲಿಯೇ ಮಲಗಿಸಿಕೊಳ್ಳಬೇಕು. ಮಗುವಿಗೆ ಒಕ್ಕಳಬಳ್ಳಿಗೆ ಏನನ್ನೂ ಹಚ್ಚಬಾರದು ಮತ್ತು ಮಗುವಿಗೆ ಚರ್ಮದ ಮೇಲೆ ಯಾವುದೇ ರೀತಿಯ ಬರೆ ಹಾಕಬಾರದು. ಹುಟ್ಟಿದ ಅರ್ಧಗಂಟೆಯೊಳಗೆ ಮಗುವಿಗೆ ತಾಯಿಯ ಎದೆಹಾಲು ನೀಡಬೇಕು. 06 ತಿಂಗಳವರೆಗೆ ಕೇವಲ ತಾಯಿಯ ಎದೆಹಾಲನ್ನು ಮಾತ್ರ ನೀಡಬೇಕು. ಇದರ ಬದಲಿಗೆ ಬೇರೇನೂ ನೀಡಬಾರದು. ಮಗುವಿಗೆ ನೀಡುವ ಎಲ್ಲಾ ಲಸಿಕೆಗಳನ್ನು ತಪ್ಪದೇ ಸರಿಯಾದ ಸಮಯಕ್ಕೆ ಹಾಕಿಸಬೇಕು. ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 03 ವರ್ಷ ಅಂತರ ಕಾಪಾಡಲು ಕುಟುಂಬ ಕಲ್ಯಾಣ ಯೋಜನೆಯ ತಾತ್ಕಾಲಿಕ ವಿಧಾನಗಳನ್ನು ಅಳವಡಿಸಿಕೊಂಡು, ಮಕ್ಕಳ ಆರೋಗ್ಯವನ್ನು ಕಾಪಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಲೇರಿಯಾ ಲಿಂಕ್‌ವರ್ಕರ್ ಶ್ರೀನಿವಾಸ, ಉದಯ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜಯಲಕ್ಷಿö್ಮÃ, ಆಶಾ ಕಾರ್ಯಕರ್ತೆ ಪೂರ್ಣಿಮಾ, ಅಂಗನವಾಡಿ ಕಾರ್ಯಾಕರ್ತೆ ಮಂಜುಳಾ ಸೇರಿದಂತೆ ಗರ್ಭೀಣಿಯರು, ಬಾಣಂತಿಯರು, ತಾಯಂದಿರು, ಕಿಶೋರಿಯರು, ನಾಗರಿಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!