ಭಾಗ್ಯನಗರಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿ| ಬಿ.ಗಿರೀಶಾನಂದ
ಕೊಪ್ಪಳ,ನ.೨೨: ಕಳೆದ ೨೫ ವರ್ಷಗಳಿಂದ ನಾಡಿನ ಜಲ್ವಂತ ಸಮಸ್ಯೆಯಾದ ಕನ್ನಡ ನಾಡು, ನುಡಿ, ಜಲ, ಗಡಿ, ಭಾಷೆಗೆ ದಕ್ಕೆ ಉಂಟಾದಾಗ ಕರ್ನಾಟಕ ರಕ್ಷಣಾ ವೇದಿಕೆ ಬೀದಿಗಿಳಿದು ಪ್ರತಿಭಟಿಸುತ್ತಾ ಬಂದಿದ್ದು, ಭಾಗ್ಯನಗರ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕರವೇ ಪಣತೊಟ್ಟಿದೆ ಎಂದು ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಹೇಳಿದರು.
ಅವರು ಭಾಗ್ಯನಗರದ ಎಲ್ಲಾ ವಾರ್ಡಗಳಿಗೆ ಮೂಲಭೂತ ಸೌಕರ್ಯ ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಶುಕ್ರವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಭಾಗ್ಯನಗರ ಘಟಕವು ಪಟ್ಟಣದ ಶ್ರೀ ಆಂಜನೇಯ ದೇವಸ್ಥಾನದಿಂದ ಪಟ್ಟಣ ಪಂಚಾಯತವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಅಭಿವೃದ್ಧಿ ದೃಷ್ಠಿಯಿಂದ ಕೊಪ್ಪಳ-ಭಾಗ್ಯನಗರ ಮುಖ್ಯ ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು, ದುರಸ್ತಿಗೊಳಿಸಬೇಕು. ಪಟ್ಟಣ ಪಂಚಾಯತ ವ್ಯಾಪ್ತಿಯ ಹಲವು ವಾರ್ಡಗಳ ನಿವೇಶನಗಳಿಗೆ ಕಟ್ಟಡ ಪರವಾನಿಗೆ ನೀಡುವುದು, ಶಾಸ್ತ್ರೀ ಕಾಲೋನಿ ಹಾಗೂ ಭಾಗ್ಯನಗರದ ನೀರು ಶೇಖರಣೆಯಾಗುವ ಜಾಗದಲ್ಲಿ ಮೂಲಭೂತ ಸೌಕರ್ಯಗಳಾದ ಉತ್ತಮ ಚರಂಡಿ, ಸಿ.ಸಿ ರಸ್ತೆ ಬೀದಿ ದೀಪಗಳ ನಿರ್ವಹಣೆ ಮಾಡುವುದು, ಪಟ್ಟಣದ ಎಲ್ಲಾ ವಾರ್ಡಗಳಲ್ಲಿ ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ತಪ್ಪಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ತಮ್ಮ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಭಾಗ್ಯನಗರ ಘಟಕ ಅಧ್ಯಕ್ಷ ವಿರೇಶ ಮುಂಡಾಸದ, ಉಪಾಧ್ಯಕ್ಷರಾದ ದೇವೇಂದ್ರಪ್ಪ ಅಲಬಗಾನೂರು, ಸಂಘಟನಾ ಕಾರ್ಯದರ್ಶಿ ಪ್ರಕಾಶ ಜೋಷಿ, ಮುಖಂಡರಾದ ಸಂಜೀವಸಿಂಗ್ ಅಜಾರೆ, ಹನುಮಂತ ಜೀರಾಳ, ವೆಂಕಟೇಶ ತಟ್ಟಿ, ನೂರಬಾಷಾ, ರಾಜಾ ಹಚಾಡದ, ದೊಡ್ಡಬಸಪ್ಪ ನರೇಗಲ್ಲ, ರಾಘವೇಂದ್ರ ಕೋಣಿ, ಶೇಖಪ್ಪ, ಮುರಳಿಧರ ಜೋಷಿ, ಅಮೀನಸಾಬ ಸೂಡಿ, ಮಹಿಳಾ ಘಟಕ ಅಧ್ಯಕ್ಷೆ ರಮಾಬಾಯಿ ಪಟವಾರಿ, ಉಪಾಧ್ಯಕ್ಷೆ ನಿರ್ಮಲಾ ಪಾಟೀಲ, ಸರಸ್ವತಿ ಬಸಾಪೂರ, ಭಾಗ್ಯಶ್ರೀ ಹೊಸಮನಿ, ಮಂಜುಳಾ ಅಂಗಡಿ, ಆಶಾಬಾಯಿ ದೇಸಾಯಿ, ತುಂಗಾ ಕಂಪ್ಲೀಕರ, ಹಾಗೂ ಅನೇಕರು ಉಪಸ್ಥಿತರಿದ್ದರು.
Comments are closed.