ಯಲಬುರ್ಗಾ ತಾಲೂಕಿನಲ್ಲಿರುವ ಕೂಸಿನ ಮನೆಗಳು ಉತ್ತಮವಾಗಿ ಕಾರ್ಯನಿರ್ವಹಿಸಲಿ: ಜಗದೀಶ

Get real time updates directly on you device, subscribe now.

ಯಲಬುರ್ಗಾ ತಾಲೂಕಿನ ಕೂಸಿನ ಮನೆಗೆ ರಾಜ್ಯ ತಂಡ ಭೇಟಿ ಪರಿಶೀಲನೆ

ಯಲಬುರ್ಗಾ: ತಾಲೂಕಿನ 22 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಅಕುಶಲ ಕೂಲಿಕಾರರ ಮಕ್ಕಳಿಗಾಗಿ ತೆರೆದಿರುವ ಕೂಸಿನ ಮನೆಗಳನ್ನು ಕ್ರೆಚ್ಛಸ್ ಸಂಸ್ಥೆ, ಬೆಂಗಳೂರು ರಾಜ್ಯ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ವೇಳೆ ಆಹಾರದ ಗುಣಮಟ್ಟ, ಮಕ್ಕಳ ಲಾಲನೆ ಪಾಲನೆ ಮಾಡುತ್ತಿತುವುದು, ಅದರ ನಿರ್ವಹಣೆ ಬಗ್ಗೆ ಕ್ರೆಚ್ಛಸ್ ಸಂಸ್ಥೆ ಬೆಂಗಳೂರು ತಂಡದ ಜಗದೀಶ ಎಂ. ವಿ ಅವರು ಮಾಹಿತಿ ಪಡೆದರು.
ಕೂಸಿನ ಮನೆಗೆ ಸಂಬಂಧಿಸಿದ ಮಕ್ಕಳ ಹಾಜರಾತಿ, ಕೇರ್ ಟೇಕರ್ ಹಾಜರಾತಿ, ಗುಣಮಟ್ಟದ ಪೌಷ್ಟಿಕ ಆಹಾರ, ಉತ್ತಮ ಕಲಿಕಾ ವಾತಾವರಣ ಇತ್ಯಾದಿಗಳ ಮಾಹಿತಿ ಪಡೆದರು.
ಕ್ರೆಚ್ಛಸ್ ಸಂಸ್ಥೆ ಬೆಂಗಳೂರು ತಂಡದ ಜಗದೀಶ ಎಂ. ವಿ ಮಾತನಾಡಿ, ಯಲಬುರ್ಗಾ ತಾಲೂಕಿನಲ್ಲಿರುವ ಕೂಸಿನ ಮನೆಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಿದೆ. ಇನ್ನಷ್ಟು ಮಕ್ಕಳನ್ನು ಕರೆದುಕೊಂಡು ಬಂದು ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ಅದಕ್ಕೆ ಗ್ರಾಪಂ ಪಿಡಿಒರವರು ಹಾಗೂ ಕೆರ್ ಟೇಕರ್ ಅವರು ಉತ್ತಮವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ಫಕೀರಪ್ಪ ಕಟ್ಟಿಮನಿ, ಆರ್ ಜಿಎಫ್ ಪಿ ಸಂಯೋಜಕರಾದ ನವೀನ್ ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ಗೆದಗೇರಿ, ಚಿಕ್ಕಮ್ಯಾಗೇರಿ, ವಣಗೇರಿ ಹಾಗೂ ಸಂಗನಹಾಳ ಗ್ರಾಮ ಪಂಚಾಯತಿ ಪಿಡಿಒರಾದ ದೊಡ್ಡಪ್ಪ ನಾಯಕ, ವೆಂಕಟೇಶ ನಾಯಕ, ನಾಗರಾಜ್, ಸರ್ವಮಂಗಳ ಹಾಗೂ ಗ್ರಾ.ಪಂ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!