ಅವೈಜ್ಞಾನಿಕ ಬಿಪಿಎಲ್ ಕಾರ್ಡ ರದ್ದು- ಡಾ. ಬಸವರಾಜ್ ಕ್ಯಾವಟರ್ ಖಂಡನೆ
ದಿವಾಳಿತನ, ಹಗರಣಗಳ ಮುಚ್ಚಿಹಾಕಲು ಸರ್ಕಸ್
* ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ ಎಂದು ಸುಳ್ಳು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿರುವ ಈ ಸರಕಾರಕ್ಕೆ ಜನರು ಮುಂದಿನ ದಿನ ತಕ್ಕ ಪಾಠ ಕಲಿಸುತ್ತಾರೆ.
* ಅರ್ಥಿಕವಾಗಿ ದಿವಾಳಿಯಾಗಿರುವ ಸರಕಾರ ದಿನಕೊಂದು ನೆಪ ಹೇಳಿ ಬಡವರ ಹೊಟ್ಟೆ ಮೇಲೆ ಬರಿ ಹಾಕುವ ಕೆಲಸ ಮಾಡುತ್ತಿದೆ.
* ರಾಜ್ಯ ಸರಕಾರವು ಹಗರಣಗಳು ಮತ್ತು ದಿವಾಳಿತನದಿಂದ ಕೂಡಿದೆ.
ಕೊಪ್ಪಳ: ಬಿಪಿಎಲ್ ಕಾರ್ಡ್ ರದ್ದತಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಅವೈಜ್ಞಾನಿಕ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಕಾಂಗ್ರೆಸ್ ಸರಕಾರವು ಜನತೆಗೆ ಗ್ಯಾರಂಟಿಗಳ ಆಸೆ ತೋರಿಸಿ ಗೆದ್ದ ನಂತರ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ.ಜನರನ್ನು ಉದ್ದಾರ ಮಾಡೋದು ಬಿಟ್ಟು ಹಗರಣದಲ್ಲಿ ಮುಳುಗಿ ಹೋಗಿದೆ. ತಮ್ಮ ಅಧಿಕಾರದ ಆಸೆಗೆ ರಾಜ್ಯದ ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೇ, ಭ್ರಷ್ಟಾಚಾರದಲ್ಲಿ ಮುಳುಗಿ ಬೊಕ್ಕಸ ಬರಿದಾಗಿರುವ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ 11 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನೇ ಅನಾವಶ್ಯಕವಾಗಿ ವೈಜ್ಞಾನಿಕ ಮಾನದಂಡ ಅನುಸರಿಸದೇ ರದ್ದು ಮಾಡಿದೆ.
ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಹೋಗಿ ನಾವು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಹೇಳುವ ಸಿದ್ದರಾಮಯ್ಯ ನವರು, ಪ್ರಚಾರ ಭಾಷಣ ಮುಗಿಸಿ ಮರಳುವ ಹೊತ್ತಿಗೆ ಅನರ್ಹ ಮಾನದಂಡ ಮುಂದಿಟ್ಟು 11 ಲಕ್ಷ ಜನರ ಬಿಪಿಎಲ್ ಕಾರ್ಡ್ ರದ್ದು ಮಾಡಿರುವ ಕ್ರಮದ ತಂತ್ರ-ಕುತಂತ್ರಗಳು ದೇಶದ ಮುಂದೆ ತಮ್ಮ ನಾಟಕವನ್ನು ಬಯಲು ಮಾಡಿವೆ. ಅನರ್ಹತೆ ಹೆಸರಿನಲ್ಲಿ ನಿಜವಾದ ಬಿಪಿಎಲ್ ಕಾರ್ಡುದಾರರ ಹಕ್ಕನ್ನು ಕಿತ್ತುಕೊಳ್ಳುವುದನ್ನು ನಾನು ಮತ್ತು ನಮ್ಮ ಪಕ್ಷವು ಖಂಡಿಸುತ್ತದೆ. ಅನರ್ಹರನ್ನು ತಡೆಯುವ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ದಾರರನ್ನು ಇಳಿಮುಖಗೊಳಿಸಿ ಭಾಗ್ಯ ಯೋಜನೆಗಳಿಗೆ ಹಣ ಹೊಂದಿಸುವ ದುರುದ್ದೇಶ ಈ ಬಿಪಿಎಲ್ ಕಾರ್ಡುದಾರರ ರದ್ದತಿಯ ಹಿಂದೆ ಅಡಗಿದೆ ಎಂಬುದು ರಾಜ್ಯ ಸರಕಾರದ ನೀತಿ ನಿಲುವುಗಳಿಂದ ತಿಳಿಯುತ್ತಿದೆ.
ಚುನಾವಣಾ ಸಂಧರ್ಭದಲ್ಲಿ ಎಲ್ಲರಿಗೂ ಪ್ರೀ, ಹೆಂಡತಿಗು ಪ್ರೀ, ಕಾಕ ನಿಗು ಪ್ರೀ, ನಿನಗು ಪ್ರೀ ಅವರಿಗೂ ಪ್ರೀ ಎಂದು ಇಷ್ಟುದ್ದ ಭಾಷಣ ಮಾಡುವಾಗ…? ಎಲ್ಲಿತ್ತು ನಿಮ್ಮ ಷರತ್ತುಗಳು…? ಸಿದ್ದರಾಮಯ್ಯನವರೇ…? ಗೆದ್ದಮೇಲೆ ದಿನಕೊಂದು ಕುಂಟು ನೆಪ ಹೇಳಿ ಬಡವರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವ ನಿಮ್ಮ ನಡೆ ಖಂಡನೀಯ.ಅನ್ನಭಾಗ್ಯದ ಹೊರೆ-ಹೊರಲಾಗದೆ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ತೆರಿಗೆದಾರರಿಗೆ, ಸರಕಾರಿ ನೌಕರರಿಗೆ ಉಚಿತ ಅಕ್ಕಿ ಕೊಡಬೇಕಾ ಎಂದು ಈ ರಾಜ್ಯ ಕಂಡ ಆಡಳಿತಗಾರರ ರೀತಿ ಹೇಳಿಕೆ ಕೊಟ್ಟಿದ್ದಾರೆ. ಹಾಗಾದರೆ ಶಕ್ತಿ ಗ್ಯಾರೆಂಟಿ ಅಡಿಯಲ್ಲಿ ತೆರಿಗೆದಾರರು, ಸರಕಾರಿ ನೌಕರರು ಉಚಿತ ಬಸ್ಸು ಸೇವೆ ಬಳಸುತ್ತಿಲ್ಲವೇ..?ಹಾಗಾದರೆ ಗೃಹಜ್ಯೋತಿ ಗ್ಯಾರೆಂಟಿ ಯೋಜನೆಯಡಿ ತೆರಿಗೆದಾರರು, ಸರಕಾರಿ ನೌಕರರು 200 ಯೂನಿಟ್ ವರೆಗೂ ಉಚಿತ ಕರೆಂಟ್ ಪಡೆಯುತ್ತಿಲ್ಲವೇ…? ಅಥವಾ ಈ ಹೇಳಿಕೆ ಶಕ್ತಿ ಯೋಜನೆ ಮತ್ತು ಗೃಹಜ್ಯೋತಿ ಯೋಜನೆಗಳಲ್ಲೂ ಶೀಘ್ರದಲ್ಲೇ ಫಲಾನುಭವಿಗಳಿಗೆ ಕೊಕ್ ನೀಡಲಾಗುತ್ತದೆ ಎಂಬ ಮುನ್ಸೂಚನೆಯೇ ಇದೇಯ ಎಂದು ಹಲವು ಅನುಮಾನಗಳು ಗೋಚರಿಸುತ್ತಿವೆ.ಸರಕಾರಕ್ಕೆ ಒಂದು ದೂರದೃಷ್ಟಿ, ಪೂರ್ವಸಿದ್ಧತೆ, ಯೋಜನೆ ಇವ್ಯಾವುದೂ ಇಲ್ಲ. ಕೇವಲ ಚುನಾವಣೆಗೆ ಗೆಲ್ಲಲು ಮನಸ್ಸಿಗೆ ಬಂದ ಹಾಗೆ ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ ಎಂದು ಸುಳ್ಳು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿರುವ ಈ ಕಾಂಗ್ರೆಸ್ ಸರಮಾರಕ್ಕೆ, ಈಗ ಗ್ಯಾರೆಂಟಿಗಳು ನುಂಗಲಾರದ, ಉಗಿಯಲಾರದ ಬಿಸಿ ತುಪ್ಪವಾಗಿದೆ.
ನಿಮ್ಮ ಅಧಿಕಾರ ಆಸೆಗೆ ಗ್ಯಾರಂಟಿಗಳ ಯೋಜನೆಯನ್ನು ಮುಂದಿನ ಬಸ್ಸಿನ ಬಾಗಿಲಿಂದ ಬಿಟ್ಟು ಇಂದಿನ ಬಾಗಿಲಿನಿಂದ ಜನರಿಗೆ ಬೆಲೆ ಹೇರಿಕೆಯ ಬಿಸಿಯನ್ನು ತಟ್ಟಿಸುತ್ತಿದ್ದಿರಿ.ಇದರಿಂದಾಗಿ ಜನರಿಗೆ ದಿನ ನಿತ್ಯ ಸಾಮಗ್ರಿಗಳ ಬೆಲೆ ಗಗನಕ್ಕೆರಿದೆ.
ಬಿಪಿಎಲ್ ಕಾರ್ಡು ರದ್ದು ಮಾಡಲು ಹಲವಾರು ದಾರಿ ಹುಡುಕುತ್ತಿರುವ ರಾಜ್ಯ ಸರಕಾರ.ಸಣ್ಣ ರೈತರು ಸಹ ಮನೆ ನಿರ್ಮಾಣಕ್ಕೆ ಅಥವಾ ಹೈನುಗಾರಿಕೆಗೆ ಬ್ಯಾಂಕ್ ಅಲ್ಲಿ ಸಾಲ ಸೌಲಭ್ಯ ಪಡೆಯಲು ತೆರಳಿದಾಗ ಬ್ಯಾಂಕ್ ಅಧಿಕಾರಿಗಳು ನೀವು ಅಂದಾಜು ಮೂರು ವರ್ಷಗಳ ತೆರಿಗೆ ಸಂಗ್ರಹ ಮಾಡಿರಬೇಕು ಎಂದು ಹೇಳಿರುತ್ತಾರೆ. ಅದರಂತೆ ಮುಗ್ಧ ಜನರು ಸಾಲ ಪಡೆಯವ ಉದ್ದೇಶದಿಂದ ತೆರಿಗೆಯನ್ನು ಕಟ್ಟಿರುತ್ತಾರೆ.
ಆದರೆ, ಅದನ್ನೇ ನೆಪ ಮಾಡಿಕೊಂಡು ಇವರು ತೆರಿಗೆ ಕಟ್ಟುತ್ತಿದ್ದಾರೆ ಅದಕ್ಕೆ ಇವರ ಬಿಪಿಎಲ್ ಕಾರ್ಡ ರದ್ದು ಮಾಡಲಾಗುತ್ತಿದೆ ಎಂದು ಜಾವಬು ನೀಡುತ್ತಾರೆ. ಆದರೆ, ಬಡವರು ಮಧ್ಯಮ ವರ್ಗದವರು ಸಾಲ ಪಡೆಯುವದೆ ತಪ್ಪಾ…? ಇತರ ಹಲವರು ಕುಂಟು ನೆಪ ಹೇಳಿ ಬಡ ವರ್ಗದ ಜನತೆಗೆ ಸಿಕ್ಕ ಬಿಪಿಎಲ್ ಕಾರ್ಡನ್ನು ರದ್ದು ಮಾಡುತ್ತಿದ್ದಾರೆ. ಇದನ್ನು ಸರಿಪಡಿಸಿ ಮತ್ತು ಬಡವರಿಗೆ ಬಿಪಿಎಲ್ ಕಾರ್ಡ ಮತ್ತೆ ದೊರಕಿಸಿಕೊಡುವ ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡಲಾಗುತ್ತದೆ ಎಚ್ಚರಿಕೆ ಎಂದು ಪ್ರಕಟಣೆಯ ಮೂಲಕ ವೈದ್ಯ ಬಸವರಾಜ ಕ್ಯಾವಟರ್ ಅವರು ತಿಳಿಸಿದ್ದಾರೆ.
Comments are closed.