ಶಾಲಾ ಕಾಲೇಜುಗಳ ಗೋಡೆಗಳ ಮೇಲೆ ಅಶ್ಲೀಲ ಬರಹ ಆರೋಪಿ ಬಂಧನ

Get real time updates directly on you device, subscribe now.

ಕನಕಗಿರಿ ಪಟ್ಟಣದ ಸಾರ್ವಜನಿಕ ಸ್ಥಳಗಳ ಗೋಡೆಗಳ ಮೇಲೆ ಶಾಲಾ ಕಾಲೇಜುಗಳ ಗೋಡೆಗಳ ಮೇಲೆ ಅಶ್ಲೀಲವಾಗಿ ಹೆಣ್ಣು ಮಕ್ಕಳ ಮಾನಕ್ಕೆ ಕುಂದುಂಟಾಗುವ ರೀತಿಯಲ್ಲಿ ಬರೆದಿರುವನ ಬಂಧನ ಮಾಡಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಶ್ರೀಮತಿ ಯಶೋದಾ ವಂಟಿಗೋಡಿ ಮಾಹಿತಿ ನೀಡಿದರು.

ಪ್ರಕರಣ ಅತೀ ಸೂಕ್ಷ್ಮತೆಯಿಂದ ಕೂಡಿದ್ದರಿಂದ ಮತ್ತು ಪ್ರಕರಣವನ್ನು ಪತ್ತೆ ಮಾಡುವದು ದೊಡ್ಡ ಸವಾಲಿನ ಕೆಲಸವಾಗಿ ಮಾರ್ಪಟ್ಟಿದ್ದರಿಂದ ಈ ಎರಡೂ ಪ್ರಕರಣಗಳ ಆರೋಪಿತನ ಪತ್ತೆ ಕುರಿತಂತೆ ಶ್ರೀಮತಿ ಯಶೋಧ ವಂಟಿಗೋಡಿ ಐ.ಪಿ.ಎಸ್ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಪ್ಪಳ ರವರ ಮಾರ್ಗದರ್ಶನದಲ್ಲಿ,  ರುದ್ರೇಶ ಉಜ್ಜನಕೊಪ್ಪ ಡಿ.ಎಸ್.ಪಿ ಗಂಗಾವತಿ, ಉಪ ವಿಭಾಗ ರವರ ನೇತೃತ್ವದಲ್ಲಿ ಜಗದೀಶ ಕೆ.ಜಿ ಪಿ.ಐ ಕನಕಗಿರಿ ಹಾಗೂ ಗವಿಸಿದ್ದಯ್ಯ, ಸಿಪಿಸಿ 450, ಗವಿಕುಮಾರ ಸಿಪಿಸಿ-201, ಬಸವರಾಜ ಸಿಪಿಸಿ-128 ರವರನ್ನು ಒಳಗೊಂಡ ಹಾಗೂ ಅಮರೇಶ ಹುಬ್ಬಳ್ಳಿ ಪಿ.ಐ ಸೆನ್ ಪೊಲೀಸ್ ಠಾಣೆ ಕೊಪ್ಪಳ ಹಾಗೂ ದಸ್ತಗಿರಿ ಸಿ.ಪಿ.ಸಿ-251, ಬಸವರಾಜ ಅಂಗಡಿ: ಹೆಚ್.ಸಿ-264, ಶ್ರೀಮತಿ ಸವಿತಾ ಸಜ್ಜನ್, ಮಪಿಸಿ-259, ಕೋಟೆ‌ ಹೆಚ್ಸಿ 36 ಮತ್ತು ಪ್ರಸಾದ ಎಪಿಸಿ-166 ರವರನ್ನು ಒಳಗೊಂಡ ಎರಡು ತಂಡಗಳನ್ನು ರಚನೆ ಮಾಡಲಾಗಿತ್ತು.

ಸದರಿ ಉಭಯ ತಂಡಗಳು ತನಿಖಾ ಕಾಲಕ್ಕೆ ಹಲವಾರು ಜನರನ್ನು ವಿಚಾರಣೆ ಮಾಡಿದ್ದು, ಈ ವೇಳೆ ಅನುಮಾನಾಸ್ಪದವಾಗಿ ಕಂಡು ಬಂದ ಮೆಹಬೂಬ ತಂದೆ ಹಸನ್‌ ಸಾಬ ಸಿಕಲಗಾರ ವಯ:27ವರ್ಷ ಸಾಕನಕಗಿರಿ ಈತನನ್ನು ಕೂಲಂಕುಷವಾಗಿ ವಿಚಾರಿಸಲು ಮೆಹಬೂಬ ಅಪ್ರಾಪ್ತ ಬಾಲಕಿಯನ್ನು ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದು, ಕೆಲವೊಮ್ಮೆ ಬಾಲಕಿಯು ಮೆಹಬೂಬನೊಂದಿಗೆ ಮಾತನಾಡಿಸುವುದನ್ನು ನಿಲ್ಲಿಸಿದಾಗ ಗೋಡೆಯ ಮೇಲೆ ಅಶ್ಲೀಲವಾಗಿ ಬರೆದಿದ್ದರಿಂದ ಆಕೆಯು ಮತ್ತೊಮ್ಮೆ ತನ್ನೊಂದಿಗೆ ಮೊಬೈಲದಲ್ಲಿ ಮೆಸೆಜ್ ಮಾಡುವುದು, ಮಾತನಾಡುವುದು ಪ್ರಾರಂಭಿಸಿದ್ದನ್ನು ನೋಡಿ ಅಪ್ರಾಪ್ತ ಬಾಲಕಿ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಾಗ ಹೀಗೆ ಗೋಡೆಯ ಮೇಲೆ ಹೆಚ್ಚು ಹೆಚ್ಚು ಬರೆಯಲು ಪ್ರಾಂಭಿಸಿದನು. ಈ ವರ್ಷದ ಜೂನ್ ತಿಂಗಳ ಪ್ರಾರಂಭದಲ್ಲಿ ಅಪ್ರಾಪ್ತ ಬಾಲಕಿಯು ಆಪಾದಿತನಿಗೆ ನೀವು ಬಡವರಿದ್ದೀರಿ ನಮ್ಮ ಮನೆಯಲ್ಲಿ ನನಗೆ ಸರಕಾರಿ ನೌಕರಿ ಇರುವ ಹುಡುಗನಿಗೆ ನೋಡಿ ಮದುವೆ ಮಾಡುತ್ತವೆ ಎಂದಿದ್ದಾರೆ ಆದ್ದರಿಂದ ನೀನು ಇನ್ನು ಮುಂದೆ ನನ್ನೊಂದಿಗೆ ಮಾತನಾಡುವುದು ಬೇಡ ಅಂತಾ ಹೇಳಿದ್ದರಿಂದ, ಆಪ್ರಾಪ್ತ ಬಾಲಕಿಯನ್ನು ಒಬ್ಬಂಟಿ ಮಾಡಬೇಕು, ಅವಳ ಜೊತೆಯಲ್ಲಿ ಯಾರೂ ಮಾತನಾಡಬಾರದು ಮತ್ತು ಓಡಾಡಬಾರದು ಎಂದು ಆಪಾಪ್ತ ಬಾಲಕಿಯ ಸ್ನೇಹಿತರ, ಅವರ ಅಕ್ಕಂದಿರ ಮತ್ತು ಈ ಹಿಂದೆ ಬಾಲಕಿಯೊಂದಿಗೆ ಓದಿದ್ದ ಹುಡುಗರ ಹೆಸರುಗಳಲ್ಲಿ ಗೋಡೆಯ ಮೇಲೆ ಬರೆದು ಇನಸ್ಟಾಗ್ರಾಂ ಮೂಲಕ ಆಶ್ಲೀಲ ಚಿತ್ರಗಳನ್ನು ಎಡಿಟ್ ಮಾಡಿ ಆಪಾಪ್ತ ಬಾಲಕಿಯ ಪಾಲಕರ ಮತ್ತು ಸ್ನೇಹಿತರ ಗುಂಪುಗಳಿಗೆ ಕಳಿಸಿದ್ದಾಗಿ ತನ್ನೊಪ್ಪಿಕೊಂಡಿರುತ್ತಾನೆ. ತನಿಖೆ ವೇಳೆ ಕೃತ್ಯಕ್ಕೆ ಉಪಯೊಗಿಸಿದ ಇನ್‌ಸ್ಟಾಗ್ರಾಂ ಖಾತೆಯು ಆಪಾದಿತ ಮೆಹಬೂಬ ತಂದೆ ಹಸನ್‌ ಸಾಬ ಈತನದ್ದೇ ಆಗಿದ್ದು, ನಕಲಿ ಇನ್‌ಸ್ಟಾಗ್ರಾಂ ಖಾತೆಯನ್ನು ಸೃಷ್ಟಿಸಿ ಕೃತ್ಯವೆಸಗಿದ್ದು, ಖಚಿತವಾಗಿದ್ದರಿಂದ ಆಪಾದಿತನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಲಾಗಿದೆ.

ಸಾಮಾಜಿಕ ಜಾಲತಾಣ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಗಂಭೀರ ಸ್ವರೂಪವನ್ನು ಪಡೆದಿದ್ದ ಕನಕಗಿರಿಯ ಶಾಲಾ ಗೋಡೆ ಬರಹ ವಿಷಯದ ಪ್ರಕರಣವನ್ನು ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಪ್ಪಳ ರವರು ಪ್ರಶಂಸೆ ವ್ಯಕ್ತಪಡಿಸಿ ಸೂಕ್ತ ನಗದು ಬಹುಮಾನ ಘೋಷಣೆ ಮಾಡಿರುತ್ತಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: