ಸರ್ಕಾರಿ ಎಸ್.ಸಿ-ಎಸ್.ಟಿ. ನೌಕರರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಯಜ್ರಯ್ಯ ಸರ್ಕಾರಿ ಎಸ್.ಸಿ-ಎಸ್.ಟಿ. ನೌಕರರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಯಜ್ರಯ್ಯ
, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಸರ್ಕಾರಿ ಎಸ್.ಸಿ-ಎಸ್.ಟಿ. ನೌಕರರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಯಜ್ರಯ್ಯ
ಕೊಪ್ಪಳ : ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ/ಎಸ್.ಟಿ. ನೌಕರರ ಸಮನ್ವಯ ಸಮಿತಿಯ ಕೇಂದ್ರ ಸಮಿತಿಯು ಕೊಪ್ಪಳ ಜಿಲ್ಲೆಯಲ್ಲಿ ಸಮನ್ವಯ ಸಮಿತಿಯನ್ನು ಸಂಘಟಿಸುವ ಸಲುವಾಗಿ ಈ ಕೆಳಕಂಡ ಪದಾಧಿಕಾರಿಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ.
ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಯಜ್ರಯ್ಯ ಕಛೇರಿ ಅಧೀಕ್ಷಕರು, ಆರೋಗ್ಯ ಇಲಾಖೆ, ಕೊಪ್ಪಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್, ಉಪಾಧ್ಯಕ್ಷರಾಗಿ ಬಸವಂತಪ್ಪ ಹನಕುಂಟಿ, ರೇಣುಕಾಬಾಯಿ ವೈ.ಎನ್, ಖಜಾಂಚಿಯಾಗಿ ರಂಗಸ್ವಾಮಿ ಎನ್,ಇವರನ್ನು ರಾಜ್ಯಾಧ್ಯಕ್ಷ ಡಿ.ಶಿವಶಂಕರ್, ಹಿರಿಯ ಉಪಾಧ್ಯಕ್ಷ ಆರ್.ಮೋಹನ್, ಪ್ರಧಾನ ಕಾರ್ಯದರ್ಶಿ ಡಾ.ವಿಜಯಕುಮಾರ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ,ಇವರಿಗೆ ಸಮಿತಿಗಳನ್ನು ರಚಿಸಲು ಪೂರ್ಣ ಜವಾಬ್ದಾರಿಯನ್ನು ನೀಡಲಾಗಿದ್ದು, ಮೂರು ತಿಂಗಳುಗಳಲ್ಲಿ ಪದಾಧಿಕಾರಿಗಳು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ, ತಾಲ್ಲೂಕು ಸಮಿತಿಗಳನ್ನು ಪೂರ್ಣ ಪ್ರಮಾಣದಲ್ಲಿ ರಚಿಸಲು ಹಾಗೂ ಜಿಲ್ಲಾ ಸಮಿತಿಯನ್ನು ಕೂಡ ರಚಿಸಲು ಅಧಿಕಾರ ನೀಡಲಾಗಿದೆ,ಈ ಸುತ್ತೋಲೆಯನ್ನು ಸಮನ್ವಯ ಸಮಿತಿಯ ಬೈಲಾದಲ್ಲಿನ ನಿಬಂಧನೆಗಳಿಗೆ ಒಳಪಟ್ಟು ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸುಧಾಕರ ಡಿ.ಜಿ ಉಪಸ್ಥಿತರಿದ್ದರು.
ಸರ್ಕಾರಿ ಎಸ್.ಸಿ/ಎಸ್.ಟಿ. ನೌಕರರ ಸಮನ್ವಯ ಸಮಿತಿಯ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಯಜ್ರಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್, ಉಪಾಧ್ಯಕ್ಷರಾಗಿ ಬಸವಂತಪ್ಪ ಹನಕುಂಟಿ, ರೇಣುಕಾಬಾಯಿ ವೈ.ಎನ್, ಖಜಾಂಚಿಯಾಗಿ ರಂಗಸ್ವಾಮಿ ಎನ್,ಇವರನ್ನು ನೇಮಕಕ್ಕೆ ಅನೇಕ ನೌಕರರ ವೃಂದ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
Comments are closed.