ಅರ್ಹರಿಗೆ ನಿವೇಶನ ಮತ್ತು ಮನೆಗಳನ್ನು ಒದಗಿಸಿಕೊಡಲು ಶಾಸಕ ಕೆ.ರಾಘವೇಂದ್ರ ಬಿ.ಹಿಟ್ನಾಳರಿಗೆ ಮನವಿ

Get real time updates directly on you device, subscribe now.

.

   ಕೊಪ್ಪಳ : ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ಮತ್ತು ವಸತಿ ರಹಿತರ ಸಮಗ್ರ ಸಮೀಕ್ಷೆ ನಡೆಸಿ ಅರ್ಹರಿಗೆ ನಿವೇಶನ ಮತ್ತು ಮನೆಗಳನ್ನು ಒದಗಿಸಲು ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ.ಗಫಾರ್, ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ ಹಾಗೂ ಕಾರ್ಯದರ್ಶಿ ತುಕಾರಾಮ್ ಬಿ, ಪಾತ್ರೋಟಿ, ಪ್ರಕಾಶ್ ದೇವರ ಮನಿ ಮುಂತಾದವರ ನೇತೃತ್ವದಲ್ಲಿ ಶಾಸಕ ಕೆ,ರಾಘವೇಂದ್ರ ಬಿ, ಹಿಟ್ನಾಳ ಅವರಿಗೆ ಅನೇಕರು ಗುರುವಾರ ಮನವಿ ಸಲ್ಲಿಸಿದರು,
     ಮನವಿಯಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ.ಉಣ್ಣಲು ಹೊಟ್ಟೆ ತುಂಬ ಊಟ. ನೆಮ್ಮದಿಯಿಂದ ನಿದ್ರಿಸಲು ಸ್ವಂತದ ಒಂದು ಸೂರು ಈ ದೇಶದ ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ಆದರೆ ನಮ್ಮ ದೇಶವನ್ನು ಮತ್ತು ನಮ್ಮನ್ನು ಆಳುತ್ತಿರುವ ಸರ್ಕಾರವು ದುಡಿಯುವ ಕೈಗಳಿಗೆ ಉದ್ಯೋಗವನ್ನು ನೀಡದೆ ಹೊಟ್ಟೆ ತುಂಬಾ ಅನ್ನ ಸಿಗದಂತೆ ಮಾಡಿ. ಹಸಿವಿನಿಂದ ನರಳುತ್ತಾ, ಮಲಗಲು ಕೂಡ ಸ್ವಂತ ಮನೆಯೂ ಇಲ್ಲದ ಸ್ಥಿತಿಗೆ ಜನರನ್ನು ದೂಡಿದೆ.ಆದ್ದರಿಂದ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿರುವ ಕೊಪ್ಪಳ ಹಾಗೂ ಭಾಗ್ಯನಗರ ಅವಳಿ ನಗರಗಳನ್ನು ಸೇರಿದಂತೆ ತಾಲೂಕಿನಾದ್ಯಂತ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು. ವಿವಿಧ ವೃತ್ತಿಗಳಲ್ಲಿ ದುಡಿಯುವ ಕಾರ್ಮಿಕರು, ಬಡ ರೈತ ಕಾರ್ಮಿಕರಿಗೆ ಇಂದಿಗೂ ನಿವೇಶನ ಇರುವುದಿಲ್ಲ.ತಾವು ನಮ್ಮ ಈ ಮನವಿಗೆ ಸ್ಪಂದಿಸಿ ನಿವೇಶನ ಸಹಿತ ಮನೆ ಮತ್ತು ಜಾಗ ಇದ್ದವರಿಗೆ ಮನೆಗಳನ್ನು ಮಂಜೂರು ಮಾಡಿಸಿ ಎಲ್ಲರಿಗೂ ಸೂರು ಒದಗಿಸಿಕೊಡುವಂತೆ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎ.ಗಫಾರ್,ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ. ಕಾರ್ಯದರ್ಶಿ ತುಕಾರಾಮ್ ಬಿ. ಪಾತ್ರೋಟಿ, ಪ್ರಕಾಶ್ ದೇವರಮನಿ, ಸುರೇಶ್ ಓಜನಹಳ್ಳಿ, ಶ್ರೀದೇವಿ, ಗೀತಾ ಮದಕಟ್ಟಿ, ಸಿದ್ದಮ್ಮ, ಸಾಧಿಕ್, ಧರ್ಮಣ್ಣ, ನಾಗರಾಜ ಮುಂತಾದ ಅನೇಕರು ಒತ್ತಾಯಿಸಿದರು.

Get real time updates directly on you device, subscribe now.

Comments are closed.

error: Content is protected !!