ಆಯುಷ್ಮಾನ ಆರೋಗ್ಯ ಮಂದಿರಗಳ ರಾಜ್ಯ ಮಟ್ಟದ ಮೌಲ್ಯಮಾಪನ: ಕೊಪ್ಪಳ ಜಿಲ್ಲೆ ಉತ್ತಮ ಪ್ರಗತಿ
ಅದರನ್ವಯ ಅಕ್ಟೋಬರ್-2024ರ ಮಾಹೆಯ ರ‍್ಯಾಂಕಿಂಗ್‌ನಲ್ಲಿ ಕೊಪ್ಪಳ ಜಿಲ್ಲೆಯ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಟಾಪ್ 10 ಬೆಸ್ಟ್ ರ‍್ಯಾಂಕಿಂಗ್ ಪಡೆದುಕೊಂಡಿದ್ದು, ಅದರಲ್ಲಿ ಗೊಂಡಬಾಳ, ಕುಕನಪಳ್ಳಿ ಹಾಗೂ ಬೆಣಕಲ್ ಗ್ರಾಮದ ಆಯುಷ್ಮಾನ ಆರೋಗ್ಯ ಮಂದಿರಗಳು ಎಲ್ಲಾ ಆರೋಗ್ಯ ಕಾರ್ಯಕ್ರಮಗಳಲ್ಲಿ ಪ್ರತಿಶತ 100 ಗುರಿ ಸಾಧಿಸಿ ರಾಜ್ಯದಲ್ಲಿ ಮೊದಲನೆ ಎರಡನೆ ಹಾಗೂ 3ನೇ ಸ್ಥಾನ ಪಡೆದಿವೆ. ನವಲಿ ಹಾಗೂ ಹೂಲಗೇರ ಆಯುಷ್ಮಾನ ಆರೋಗ್ಯ ಮಂದಿರ ಪ್ರತಿಶತ 98 ಗುರಿ ಸಾಧಿಸಿ ರಾಜ್ಯದಲ್ಲಿ 4 ಮತ್ತು 5ನೇ ಸ್ಥಾನ ಪಡೆದಿರುತ್ತದೆ. ಚಿಕೇನಕೊಪ್ಪ ಆಯುಷ್ಮಾನ ಆರೋಗ್ಯ ಮಂದಿರ ಪ್ರತಿಶತ 97 ಗುರಿ ಸಾಧಿಸಿ 10 ಸ್ಥಾನ ಪಡೆದಿರುತ್ತದೆ.
ಅದೇ ರೀತಿ ರಾಜ್ಯದ ಜಿಲ್ಲಾವಾರು ರಾಂಕಿಂಗ್‌ನಲ್ಲಿ ಕೊಪ್ಪಳ ಜಿಲ್ಲೆಯು ಒಟ್ಟಾರೆಯಾಗಿ 3ನೇ ಸ್ಥಾನ ಪಡೆದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.