ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ: ನ.15 ರಿಂದ ರೈತರ ನೋಂದಣಿ ಕಾರ್ಯ ಆರಂಭ
): 2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಗಾಗಿ ನವೆಂಬರ್ 15 ರಿಂದ ರೈತರ ನೋಂದಣಿ ಕಾರ್ಯ ಆರಂಭವಾಗಲಿದೆ.
ಪ್ರಸಕ್ತ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತಕ್ಕೆ ರೂ. 2300, ಗ್ರೇಡ್-ಎ ಭತ್ತಕ್ಕೆ ರೂ. 2320 ರಂತೆ ದರ ನಿಗದಿಪಡಿಸಿದ್ದು, ರೈತರಿಂದ ಭತ್ತ ಖರೀದಿ ಮಾಡುವ ಸಂಬAಧ ಸರ್ಕಾರದ ಆದೇಶದಂತೆ ಕೊಪ್ಪಳ ಜಿಲ್ಲೆಯ ಕಾರಟಗಿ, ಗಂಗಾವತಿ ಹಾಗೂ ಕೊಪ್ಪಳ ಎಪಿಎಂಸಿ ಪ್ರಾಂಗಣದಲ್ಲಿ ಖರೀದಿ ಕೇಂದ್ರ ತೆರೆಯಲಾಗಿರುತ್ತದೆ. ನ.15 ರಿಂದ ಡಿಸೆಂಬರ್ 31ರ ವರೆಗೆ ರೈತರ ನೋಂದಣಿ ಕಾರ್ಯ ನಡೆಯಲಿದೆ. ರೈತರು ಬೆಳೆದಿರುವ ಧಾನ್ಯಗಳಿಗೆ ಸಂಬಂದಿಸಿದಂತೆ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ “ಫ್ರೂಟ್ಸ್” ಐಡಿಯೊಂದಿಗೆ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಖರೀದಿ ಕೇಂದ್ರದ ಖರೀದಿ ಅಧಿಕಾರಿ ಮೃತ್ಯುಂಜಯ ಕೊನಾಪುರ ಮೊ.ಸಂ: 9739228720 ಹಾಗೂ ಉಸ್ತುವಾರಿ ಅಧಿಕಾರಿ ಚನ್ನಬಸಪ್ಪ ಮೊ.ಸಂ: 9449464125, ಗಂಗಾವತಿ ಮತ್ತು ಕಾರಟಗಿಯ ಖರೀದಿ ಕೇಂದ್ರಗಳ ಖರೀದಿ ಅಧಿಕಾರಿ ಸೋಮಶೇಖರ ಮೊ.ಸಂ: 6361289585 ಹಾಗೂ ಉಸ್ತುವಾರಿ ಅಧಿಕಾರಿ ಗಂಗಾವತಿಯ ಸುಹಾಸ ಮೊ.ಸಂ: 9886320360 ಮತ್ತು ಕಾರಟಗಿಯ ನವೀನ್ ಮಠದ ಮೊ.ಸಂ: 8123453419 ಗೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.