.
ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಲಹೆ.
ಗಂಗಾವತಿ: ವಿಶ್ವಚೇತನ ಮಹಾ ಮಾನವತವಾಗಿ ಶ್ರೀ ಕನಕದಾಸರ ಜಯಂತಿಯನ್ನು ನ.18 ರಂದು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಕನಕದಾಸರ ಸಂದೇಶಗಳನ್ನು ಜನಸಾಮಾನ್ಯರಿಗೆ ತಿಳಿಸಲು ಸರ್ವ ಸಮಾಜದವರು ಸಹಕಾರ ನೀಡುವಂತೆ ತಹಸಿಲ್ದಾರ್ ಯು.ನಾಗರಾಜ ಮನವಿ ಮಾಡಿದರು.
ಅವರು ತಹಸೀಲ್ದಾರ್ ಕಚೇರಿಯಲ್ಲಿ ಕನಕದಾಸರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿವರ್ಷ ನಗರದ ಕನಕದಾಸ ರೂಪದಲ್ಲಿ ಕನಕದಾಸ ಮೂರ್ತಿಗೆ ವಿಶೇಷ ಅಲಂಕಾರ ಸೇರಿದಂತೆ ವೇದಿಕೆ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗುತ್ತದೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು ಸಮಾಜದವರ ಸಲಹೆ ಸೂಚನೆಯಂತೆ ಕಾರ್ಯಕ್ರಮ ನಿರ್ವಹಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಕನಕದಾಸ ತಾಲೂಕ ಕುರುಬರ ಸಂಘದ ಅಧ್ಯಕ್ಷ ವಿಠಲಾಪೂರ ಯಮನಪ್ಪ ಮಾತನಾಡಿ, ಶ್ರೀ ಕನಕದಾಸರ ಸಂದೇಶಗಳನ್ನು ಜನಸಾಮಾನ್ಯರಿಗೆ ತಿಳಿಸಲು ಉಪನ್ಯಾಸ ಮತ್ತು ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಏರ್ಪಡಿಸುವ ಕುರಿತು ತಾಲೂಕ ಆಡಳಿತ ವ್ಯವಸ್ಥೆ ಮಾಡಬೇಕು ಎಂದರು.
ಪೂರ್ವಭಾವಿ ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಸಂತೋಷ್ ಪಟ್ಟದಕಲ್ ,ಸಮಾಜ ಕಲ್ಯಾಣ ಅಧಿಕಾರಿ ಸಂಗಪ್ಪ ಜೈರಾಪುರ್ ,ನಗರಸಭೆಯ ವ್ಯವಸ್ಥಾಪಕ ಷಣ್ಮುಖಪ್ಪ ಸಮಾಜದ ಮುಖಂಡರಾದ ಕೆ.ನಾಗೇಶಪ್ಪ,ಅಶೋಕ ಗೌಡ,ಹನುಮೇಶ ಡ್ಯಾಗಿ,
ತಿರುಕಪ್ಪ,ವಿರೂಪಾಕ್ಷಪ್ಪ,ರುದ್ರೇಶ್ ಡ್ಯಾಗಿ, ಗೀತಾ ವಿಕ್ರಂ,ಅಡ್ಡಿ ಶಾಮಣ್ಣ, ಕೆ.ನಾಗೇಶಪ್ಪ ಬೆಟ್ಟಪ್ಪ ಬೆಣಕಲ್,ನೀಲಕಂಠಪ್ಪ ಹೊಸಳ್ಳಿ, ಸಿದ್ದಲಿಂಗನಗೌಡ,ಶರಣಪ್ಪ ಇದ್ದರು.
Sign in
Sign in
Recover your password.
A password will be e-mailed to you.
Get real time updates directly on you device, subscribe now.
Prev Post
Comments are closed.