World Diabetes Day banner or flyer with diabetes symbol - blue round frame and map. 14th November. Concept of awareness diabetes and fight against diabetes
Get real time updates directly on you device, subscribe now.
ಮಧುಮೇಹ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ನವೆಂಬರ್-೧೪ ನ್ನು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ.
ಅಂತರಾಷ್ಟ್ರೀಯ ಮಧುಮೇಹ ಒಕ್ಕೂಟ(IDF-International Diabetes Federation) ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ (Wಊಔ-Woಡಿಟಜ ಊeಚಿಟಣh ಔಡಿgಚಿಟಿizಚಿಣioಟಿ) ಸಹಯೋಗದಲ್ಲಿ ೧೯೯೧ ರಲ್ಲಿ ವಿಶ್ವ ಮಧುಮೇಹ ದಿನವನ್ನು ಪರಿಚಯಿಸಲಾಯಿತು.
೧೯ನೇ ಶತಮಾನದವರೆಗೆ ಮಧುಮೇಹ ಕಾಯಿಲೆಯು ವಿಶ್ವದಾದ್ಯಂತ ನಾಗಾಲೋಟದಿಂದ ವ್ಯಾಪಿಸಿ, ಸಾಕಷ್ಟು ಸಾವುನೋವುಗಳನ್ನು ತಂದಿತ್ತು. ಈ ಕಾಯಿಲೆಯ ನಿಯಂತ್ರಣಕ್ಕಾಗಿ ಕೆನಡಾದ ವಿಜ್ಞಾನಿ ಸರ್. ಫೆಡ್ರಿಕ್ ಬೆಂಟಿಂಗ್‌ರವರು ಪ್ರಪ್ರಥಮ ಬಾರಿಗೆ ಮಧುಮೇಹ ಕಾಯಿಲೆಗೆ ನೀಡುವ ’ಇನ್ಸುಲಿನ್’ ಸಂಶೋಧಿಸಿ, ಜಗತ್ತಿಗೆ ಪರಿಚಯಿಸಿದರು. ಈ ಇನ್ಸುಲಿನ್ ಥೆರಪಿ ಚಿಕಿತ್ಸೆಯು ಡಯಾಬಿಟೀಸ್ ರೋಗಿಗಳಿಗೆ ಸಂಜೀವಿನಿಯಾಯಿತು. ಡಯಾಬಿಟೀಸ್ ರೋಗದ ನಿಯಂತ್ರಣದಲ್ಲಿ ಸಂಚಲನವುಂಟು ಮಾಡಿ ಡಯಾಬಿಟೀಸ್ ವಿರುದ್ಧ ಕ್ರಾಂತಿಯಾಗಿ ಹೊರಹೊಮ್ಮಿತು.
ಈ ಇನ್ಸುಲಿನ್ ಥೆರಪಿಯನ್ನು ಸಂಶೋಧಿಸಿದ ಸರ್ ಫೆಡ್ರಿಕ್ ಬೆಂಟಿಂಗ್‌ರವರ ಸವಿನೆನಪಿಗಾಗಿ ಅವರ ಹುಟ್ಟುಹಬ್ಬದ ದಿನವಾದ ನವೆಂಬರ್-೧೪ ನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತಿದೆ.
ಪ್ರತಿ ವರ್ಷ ವಿಶ್ವ ಮಧುಮೇಹ ದಿನವನ್ನು ಒಂದು ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು, ಪ್ರಸ್ತುತ ವರ್ಷ-೨೦೨೪ ರ ಧ್ಯೇಯವಾಕ್ಯ ಡಯಾಬಿಟೀಸ್ ಮತ್ತು ಯೋಗಕ್ಷೇಮವಾಗಿದೆ. ಈ ಧ್ಯೇಯವಾಕ್ಯವು ಡಯಾಬಿಟೀಸ್ ರೋಗಿಗಳು ಯಾವುದೇ ಮಾನಸಿಕ ಖಿನ್ನತೆಗೆ ಒಳಗಾಗದೇ ಎಲ್ಲರಂತೆ ಸಂತೋಷ, ತೃಪ್ತಿ, ಉತ್ಸಾಹ, ಶಾಂತತೆಯಿಂದ ಸಕಾರಾತ್ಮಕ ಭಾವನೆಗಳೊಂದಿಗೆ ಉತ್ತಮ ದೈಹಿಕ ಆರೋಗ್ಯ ಮತ್ತು ಸಾಮಾಜಿಕ ಸಂಬಂಧಗಳೊಂದಿಗೆ ಬದುಕಬಹುದಾಗಿದೆ. ಈ ಧ್ಯೇಯವಾಕ್ಯದೊಂದಿಗೆ ಪ್ರಸ್ತುತ ವರ್ಷ ವಿಶ್ವ ಮಧುಮೇಹ ದಿನಾಚರಣೆ ಆಚರಿಸುವ ಮೂಲಕ ವಿಶ್ವದಾಧ್ಯಂತ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಪ್ರಪಂಚದಾಧ್ಯಂತ ಲಕ್ಷಾಂತರ ಜನರು ಮಧುಮೇಹ ಕಾಯಿಲೆಗೆ ಬಲಿಯಾಗಿದ್ದಾರೆ, ಮಧುಮೇಹ ಕಾಯಿಲೆಯಿಂದ ದೇಹದಲ್ಲಿ ಅನೇಕ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಹಿತಕರ ಜೀವನಶೈಲಿ ಮತ್ತು ಅಹಿತಕರ ಆಹಾರ ಪದ್ಧತಿಯೇ ಈ ಕಾಯಿಲೆ ಉಂಟಾಗಲು ಮುಖ್ಯ ಕಾರಣ ಎಂದು ಹೇಳಬಹುದು.
ಮಧುಮೇಹ (ಆiಚಿbeಣes) ವು ದೇಹದಲ್ಲಿ ಅಸ್ವಸ್ಥತೆ ಉಂಟು ಮಾಡಿ, ರಕ್ತದಲ್ಲಿ ಗ್ಲೂಕೋಸ್ ಅಥವಾ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ನಮ್ಮ ದೇಹದ ಸಾಮರ್ಥ್ಯವನ್ನು ಹಾನಿಗೊಳಿಸುತ್ತದೆ. ಇದು ಸಾಮಾನ್ಯವಾಗಿ ಹೃದಯ ರೋಗಗಳು, ಅಂಧತೆ, ಮೂತ್ರಪಿಂಡ ವೈಫಲ್ಯ, ಇತ್ಯಾದಿ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು. ಮಧುಮೇಹವನ್ನು ನಿಯಮಿತ ಚಿಕಿತ್ಸೆ, ಆರೋಗ್ಯಕರ ಜೀವನಶೈಲಿ, ಆರೋಗ್ಯಕರ ಆಹಾರ ಪದ್ಧತಿಯ ಮೂಲಕ ಈ ಕಾಯಿಲೆಯನ್ನು ನಿಯಂತ್ರಿಸಬಹುದಾಗಿದೆ.
ಭಾರತದಲ್ಲಿ ಡಯಾಬಿಟೀಸ್:
ಭಾರತದಲ್ಲಿ ಪ್ರತಿ ಆರು ಜನರಲ್ಲಿ ಒಬ್ಬರು ಡಯಾಬಿಟೀಸ್ ಕಾಯಿಲೆಯಿಂದ ಬಳಲುತ್ತಿರುವುದು ಸಮೀಕ್ಷೆಯಿಂದ ದೃಢಪಟ್ಟಿರುತ್ತದೆ. ಇದರಿಂದ ಭಾರತದಲ್ಲಿ ಸರಿಸುಮಾರು ೭೭ ದಶಲಕ್ಷ ಮಧುಮೇಹ ರೋಗಿಗಳಿದ್ದು, ವಿಶ್ವದಲ್ಲಿಯೇ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿದ ಎರಡನೇ ರಾಷ್ಟ್ರವಾಗಿದೆ.
ಮಕ್ಕಳಲ್ಲಿ ಮಧುಮೇಹ:
ಮಧುಮೇಹವು ವಯಸ್ಕರಲ್ಲಿ ಮಾತ್ರ ಕಾಣುವ ಕಾಯಿಲೆ ಎಂದು ನಾವೆಲ್ಲ ಅಂದುಕೊಂಡಿದ್ದೇವೆ. ಆದರೆ ಅಘಾತಕಾರಿ ಎನ್ನುವಂತೆ ಮಕ್ಕಳಲ್ಲೂ ಸಹ ಟೈಪ್-೨ ಮಧುಮೇಹ ಕಂಡುಬರುತ್ತಿದೆ. ಇತ್ತೀಚಿನ ವರದಿಯ ಪ್ರಕಾರ ಮಕ್ಕಳಲ್ಲಿ ಟೈಪ್-೨ ಮಧುಮೇಹವು ಕಳೆದ ಎರಡು ದಶಕಗಳಲ್ಲಿ ಜಗತ್ತಿನಾದ್ಯಂತ ತೀವ್ರ ಏರಿಕೆ ಕಂಡಿದೆ.
ಮಕ್ಕಳಲ್ಲಿ ಮಧುಮೇಹದ ಲಕ್ಷಣಗಳು:
ಮಕ್ಕಳಲ್ಲಿ ಸಾಮಾನ್ಯವಾಗಿ ಗುರುತಿಸಲಾದ ಮಧುಮೇಹದ ಕೆಲವು ಲಕ್ಷಣಗಳೆಂದರೆ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ, ಹಸಿವು, ತೂಕ ನಷ್ಟ, ಆಲಸ್ಯ, ಕಿರಿಕಿರಿ ಅಥವಾ ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಗಳು ಕಂಡುಬರುತ್ತವೆ.
ಈ ಮೇಲಿನ ಲಕ್ಷಣಗಳು ಮಕ್ಕಳಲ್ಲಿ ಕಂಡುಬಂದರೆ ಆಗ ತಪ್ಪದೇ ಮಕ್ಕಳ ತಜ್ಞರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇನ್ಸುಲಿನ್ ಥೆರಪಿ, ಆಹಾರದಲ್ಲಿ ಬದಲಾವಣೆ, ನಿಯಮಿತ ವ್ಯಾಯಾಮ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಗಮನಿಸುತ್ತಾ ಜಾಗೃತಿ ವಹಿಸಬೇಕಿದೆ.
Comments are closed.