ಮಕ್ಕಳು ಪ್ರಶ್ನಿಸುವುದನ್ನು ಪ್ರೋತ್ಸಾಹಿಸಿ ಕಲಿಕೆಗೆ ನೆರವಾಗಿ-ದೇವೇಂದ್ರ ಜಿರ್ಲಿ
ಬಾಲ್ಯದಲ್ಲಿ ಮಕ್ಕಳು ಸದಾಕಾಲವೂ ಕುತೂಹಲಕಾರಿ ಪ್ರವೃತ್ತಿಯವರಾಗಿರುತ್ತಾರೆ.ಕಂಡದ್ದನ್ನು ತೋಚಿದ್ದನ್ನು ಪ್ರಶ್ನೆ ಕೇಳುತ್ತಲೇ ಕಲಿಯುತ್ತಿರುತ್ತಾರೆ.ಅವರ ಪ್ರಶ್ನೆಗಳಿಗೆ ಪಾಲಕರು ಮತ್ತು ಶಿಕ್ಷಕರು ನಗುತ್ತಲೇ ಶಾಂತಚಿತ್ತರಾಗಿ ಉತ್ತರಿಸಬೇಕು.ಪ್ರಶ್ನೆಗಳೇ ಕಲಿಕೆಯ ಕೀಲಿಕೈ.ವಿಜ್ಞಾನ ಕಲಿಕೆಗೆ ಪ್ರಶ್ನಾಮನೋಭಾವವೇ ಮುಖ್ಯ. ಯಾವುದೇ ಕಾರಣಕ್ಕೂ ಮಕ್ಕಳಿಗೆ ಗದರಿಸಿ ಬೆದರಿಸಿ ಅವರ ಬಾಯಿ ಮುಚ್ಚಿಸುವ ಕೆಲಸ ಮಾಡಬಾರದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕೊಪ್ಪಳ ಜಿಲ್ಲಾ ಪ್ರದಾನ ಕಾರ್ಯದರ್ಶಿ ದೇವೇಂದ್ರ ಜಿರ್ಲಿ ಕಿವಿಮಾತು ಹೇಳಿದರು..
ಕೊಪ್ಪಳದ ಎಸ್ ಎಫ್ ಎಸ್ ಐಸಿಎಸ್ಇ ಶಾಲೆಯಲ್ಲಿ ನಡೆದ ವಿಜ್ಞಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಾವೀಗವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿದ್ದೇವೆ.ವಿಜ್ಞಾನ ನಾಗಲೋಟದಿಂದ ಬೆಳೆಯುತ್ತಿದೆ.ವಿಜ್ಞಾನದ ಎಲ್ಲಾ ಕ್ಷೇತ್ರಗಳೂ ಕವಲೊಡೆದು ಶರವೇಗದಲ್ಲಿ ಬೆಳೆಯುತ್ತಿವೆ .ಆ ಹಿನ್ನೆಲೆಯಲ್ಲಿ ನಮ್ಮ ಮಕ್ಕಳಿಗೆ ವೈಜ್ಞಾನಿಕ ಶಿಕ್ಷಣ ನೀಡಬೇಕು.ಎಸ್ ಎಫ್ ಎಸ್ ಶಾಲೆಯ ಆಡಳಿತ ಮಂಡಳಿಯವರು ಕಿಂಡರಗಾರ್ಟನ್ ಹಂತದಲ್ಲಿ ವಿಜ್ಞಾನೋತ್ಸವ ಹಮ್ಮಿಕೊಂಡು ಎಳೆಯ ವಯಸ್ಸಿನಲ್ಲಿಯೇ ವೈಜ್ಞಾನಿಕ ಮನೋಭಾವ ಮೂಡಿಸುತ್ತ ವಿಜ್ಞಾನ ಕ್ಷೇತ್ರಕ್ಕೆ ಮಕ್ಕಳನ್ನು ಸಿದ್ಧಗೊಳಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯ ಕಾರ್ಯ.ಪ್ರಾಚಾರ್ಯರು ಮತ್ತು ಸಿಬ್ಬಂದಿ ಅತ್ಯಂತ ಶ್ರಮವಹಿಸಿ ವಿಜ್ಞಾನೋತ್ಸವ ಹಮ್ಮಿಕೊಂಡಿದ್ದು ಮೆಚ್ಚುವಂತದ್ದು.ಇಂತಹ ಕಾರ್ಯಕ್ರಮಗಳು ಮಕ್ಕಳ ಕಲಿಕೆಯನ್ನು ಉದ್ದೀಪನಗೊಳಿಸುತ್ತವೆ.ಹಾಗಾಗಿ ತರಗತಿ ಕೋಣೆಗಳಾಚೆ ಇಂತಹ ಕಲಿಕಾ ಅವಶಗಳು ಮಕ್ಕಳಿಗೆ ಲಭ್ಯವಾಗಬೇಕು.ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಆಗಬೇಕು ಎಂದರು.
ಪ್ರಾಚಾರ್ಯರಾದ ಫಾದರ್ ಜಬಬಲೈ ಮಾತನಾಡಿ ಶಾಲೆಯಲ್ಲಿ ಬುನಾದಿ ಹಂತದಲ್ಲೇ ವಿಜ್ಞಾನ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಲಾಗುತ್ತಿದೆ.ಆ ಹಿನ್ನೆಲೆಯಲ್ಲಿ ಅತ್ಯಂತ ಶ್ರಮವಹಿಸಿ ವಿಜ್ಞಾನ ತಂತ್ರಜ್ಞಾನ ಇಂಜಿನಿಯರಿಂಗ್ ಗಣಿತ (STEM)ವಿಭಾಗವೂ ಸೇರಿದಂತೆ ಎಲ್ಲಾ ವಿಭಾಗಗಳ ಗ್ಯಾಲರಿಯಲ್ಲಿ ನೂರಾರು ಮಾದರಿಗಳನ್ನು ಮಕ್ಕಳು ತಯಾರಿಸಿದ್ದು ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಕರೆ ನೀಡಿದರು.ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಫಾದರ್ ಮ್ಯಾಥ್ಯೂ ಮಾಮ್ಲ ಕಾರ್ಯಕ್ರಮದ ಕುರಿತು ಮಾತನಾಡಿದರು.ಶಾಲೆಯ ಶಿಕ್ಷಕ-ಶಿಕ್ಷಕಿಯರು ಪಾಲಕ ಪೋಷಕರು ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕಿಂಡರಗಾರ್ಟನ್ ವಿಭಾಗದ ಮುದ್ದು ಮಕ್ಕಳು ಕಾರ್ಯಕ್ರಮ ನಿರೂಪಣೆ ಮಾಡಿದರು.
Comments are closed.