Sign in
Sign in
Recover your password.
A password will be e-mailed to you.
ಕೊಪ್ಪಳ: ಐದು ಪ್ರಮುಖ ಸಮಾಜಮುಖಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಶಕ್ತಿ, ಯುವನಿಧಿ, ಅನ್ನಭಾಗ್ಯ ಮತ್ತು ಗೃಹಜ್ಯೋತಿ ಗಳ ಬಗ್ಗೆ ಮನೆ ಮನೆಗೆ ತೆರಳಿ ಜನರಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಿದ ಗ್ಯಾರಂಟಿ ಸಮಿತಿ ಸದಸ್ಯೆ, ಕಾಂಗ್ರೆಸ್ ನಾಯಕಿ ಜ್ಯೋತಿ ಎಂ. ಗೊಂಡಬಾಳ ಸಂಡೂರು ಉಪಚುನಾವಣೆಯಲ್ಲಿ ಅನ್ನಪೂರ್ಣ ತುಕಾರಾಂ ಅವರ ಗೆಲುವು ಶತಸಿದ್ಧ ಎಂದರು.
ಅವರು ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕೊನೆ ದಿನವಾದ ಇಂದು ಹೊಸ ದರೋಜಿ, ಮಾದಾಪುರ, ಹಳೆ ದರೋಜಿಗಳಲ್ಲಿ ಮನೆ ಮನೆಗಳಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರ ಪರವಾಗಿ ಪ್ರಚಾರ ಮಾಡಿದರು.
ದರೋಜಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯಲ್ಲಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಅವಿರತವಾಗಿ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸಗಳ ಜೊತೆಗೆ ಬಡವರು ಮತ್ತು ಶೋಷಿತರ ದೈನಂದಿನ ಕಲ್ಯಾಣಕ್ಕಾಗಿ ಗ್ಯಾರಂಟಿಗಳನ್ನು ಜಾರಿ ಮಾಡಿ ೬೦ ಸಾವಿರ ಕೋಟಿ ರುಪಾಯಿಗಳನ್ನು ಅವರಿಗಾಗಿ ಪ್ರತಿವರ್ಷ ಖರ್ಚು ಮಡುತ್ತಿದ್ದಾರೆ, ಇದು ಇಡೀ ದೇಶದಲ್ಲಿ ಇಂತಹ ಯೋಜನೆಗಳು ಇಲ್ಲ, ಮೋದಿ ಅವರು ನಮ್ಮ ಗ್ಯಾರಂಟಿಗಳನ್ನು ಬಯ್ಯುತ್ತಲೇ ತಮ್ಮ ಇಂತಹದ್ದೇ ಉಚಿತ ಕೊಡುಗೆಗಳನ್ನು ಘೋಷಿಸುವ ಎಡಬಿಡಂಗಿತನಕ್ಕೆ ಜನ ತಕ್ಕ ಉತ್ತರ ಕೊಡುತ್ತಾರೆ, ಆದರೆ ಜನರಿಗೆ ಅದು ಅರಿವಿಗೆ ಬರುತ್ತಿಲ್ಲ. ಒಮ್ಮೆ ಜನರು ತಿರುಗಿ ಬಿದ್ದರೆ ಇಡೀ ದೇಶದಲ್ಲಿ ಬಿಜೆಪಿ ಎಲ್ಲಿಯೂ ಇಲ್ಲದಂತೆ ಮಾಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಕಂಟ್ಲಿ, ಸುಮಂಗಲಾ ನಾಯಕ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರುಗಳಾದ ರಫಿ, ಜನಾರ್ಧನ,ಮಾಜಿ ತಾ.ಪಂ. ಅಧ್ಯಕ್ಷ ಮಾರೆಪ್ಪ, ನಗರಸಭೆ ಸದಸ್ಯ ಶಾಮೀದ್ ಮನಿಯಾರ, ರಿಯಾಜ್, ಮಲ್ಲೇಶಪ್ಪ, ಶಿವಮೂರ್ತೆಣ್ಣ, ಮುತ್ತಣ್ಣ ಇತರರು ಇದ್ದರು.
Get real time updates directly on you device, subscribe now.