ಪ್ರತಿಯೊಬ್ಬರ ಬದುಕನ್ನು ರೂಪಿಸುವ ಶಕ್ತಿ ಮಹಿಳೆಗಿದೆ| ಬದುಕು ಉದಯವಾಗುವುದು ಮಹಿಳೆಯರಿಂದಲೇ|| ಬಿ.ಗಿರೀಶಾನಂದ

Get real time updates directly on you device, subscribe now.

 

ಕೊಪ್ಪಳ,ನ.೦೮: ಮಹಿಳೆಯರಿಲ್ಲದೇ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಮಹಿಳೆ ಸೃಷ್ಟಿಕರ್ತೆಯಾಗಿದ್ದು, ಜೀವ ನೀಡುವುದರಿಂದ ಹಿಡಿದು ಜೀವನಕ್ಕೆ ಶಕ್ತಿ ತುಂಬುವಲ್ಲಿ ಹೆಣ್ತನ ಎಂಬುವುದು ದೊಡ್ಡ ಶಕ್ತಿಯಾಗಿದೆ. ಪ್ರತಿಯೊಬ್ಬರ ಬದುಕನ್ನು ರೂಪಿಸುವ ಶಕ್ತಿ ಮಹಿಳೆಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಹೇಳಿದರು.
ಅವರು ಶುಕ್ರವಾರದಂದು ಭಾಗ್ಯನಗರದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆಗೆ ಮಹಿಳಾ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
ಸಮಾಜದಲ್ಲಿ ಹಲವು ಪಾತ್ರಗಳನ್ನು ನಿಭಾಯಿಸಿ ಕುಟುಂಬವನ್ನು ಮುನ್ನೆಡೆಸುವ ಶಕ್ತಿ ಮಹಿಳೆಗಿದೆ. ದೇಶವನ್ನು ಸ್ವಾತಂತ್ರ್ಯಗೊಳಿಸುವಲ್ಲಿಯೂ ಹಲವಾರು ಮಹನೀಯ ಮಹಿಳೆಯರ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರ ಬದುಕು ಉದಯವಾಗುವುದು ಮಹಿಳೆಯರಿಂದಲೇ, ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದ್ದಾರೆ. ಸಾಧನೆಯ ಹಾದಿಯಲ್ಲಿ ಛಲದಿಂದ ಸಾಗುತಿರುವ ಉತ್ಸಾಹಿಗಳಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಕರವೇ ತತ್ವ ಸಿದಾಂತಗಳನ್ನು ಮೆಚ್ಚಿ ಬಂದಂತಹ ಮಹಿಳಾ ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಅವರು ಕನ್ನಡದ ಶಾಲು ನೀಡಿ ಬಾವುಟ ನೀಡುವ ಮುಖಾಂತರ ಸೆರ್ಪಡೆಗೊಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ನಗರ ಘಟಕದ ಅಧ್ಯಕ್ಷ ಪ್ರಫುಲ್‌ಕುಮಾರ ಪಾಟೀಲ, ಭಾಗ್ಯನಗರ ಘಟಕ ಅಧ್ಯಕ್ಷ ವಿರೇಶ ಮುಂಡಾಸದ, ಪ್ರಧಾನಕಾರ್ಯದರ್ಶಿ ಪ್ರಕಾಶ ಜೋಷಿ, ಗೊಂಡಬಾಳ ಹೋಬಳಿ ಅಧ್ಯಕ್ಷ ಕುಮಾರಸ್ವಾಮಿ ನಾಗರಳ್ಳಿ ಹಾಗೂ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!