Sign in
Sign in
Recover your password.
A password will be e-mailed to you.
ಯಲಬುರ್ಗಾ08: ಇಂದಿನ ಯುವಕರು ಎಲ್ಲರೂ ದೇಶ ಪ್ರೇಮಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರಂತೆ ಹೋರಾಟದ ಮನೋಭಾವ.ದೇಶಪ್ರೇಮ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ಕೂಡಾ ಬೆಳಿಸಿಕೊಳ್ಳಬೇಕು ಸಂಗೋಳಿ ರಾಯಣ್ಣ ಹುಟ್ಟಿದ್ದು ಮತ್ತು ನಮ್ಮ ಭಾರತಕ್ಕೆ ಸ್ವಾತಂತ್ರ್ಯಾ ಅಗಷ್ಟ್ 15 ಕ್ಕೆ. ಗಲ್ಲಿಗೇರಿಸಿದ್ದು ಜನೇವರಿ 26 ಗಣರಾಜ್ಯೋತ್ಸವದ ದಿನ ವೀರ ಮರಣ ಹೊಂದಿರುವದು.ರಾಯಣ್ಣ ತನ್ನ ಕೊನೆಯ ಆಸೆ ಯಾವುದೆಂದು ಕೇಳಿದಾಗ ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ.ಈ ಪುಣ್ಯ ಭೂಮಿಯಿಂದ ಬ್ರಿಟೀಷರ ವಿರದ್ದು ಹೋರಾಟವನ್ನು ಮುಂದವರಿಸುತ್ತೆನೆಂದು ದೇಶ ಪ್ರೇಮ ಮೆರೆದು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆಂದು ಮಾಜಿ ತಾಲ್ಲೂಕ ಪಂಚಾಯತಿ ಅಧ್ಯಕ್ಷರು ಹಾಗೂ ಹಾಲಮತ ಸಮಾಜದ ಅಧ್ಯಕ್ಷರಾದ ವೀರನಗೌಡ ಪಾಟೀಲ ಮಾತನಾಡಿದರು.
ತಾಲೂಕಿನ ಬಸಪೂರ ಗ್ರಾಮದಲ್ಲಿ ಶ್ರೀ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ರುದ್ರಾಭಿಷೇಕ ನಂತರ ಕುಂಭ ಮೆರವಣಿಗೆ ನಂತರ ಶ್ರೀ ರಾಯಣ್ಣ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜರುಗಿತು ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಶ್ರೀ ಶ್ರೀ ಸಿದ್ಧರಾಮಾನಂದ ಪುರಿ ಮಹಾಸ್ವಾಮಿಗಳು ಕನಕಗುರುಪೀಠ ಕಾಗಿನೆಲೆ ಮಹಾಸಂಸ್ಥಾನ ಮಠದ.ಶ್ರೀ ಗಳು ಆರ್ಶಿವಚನದ ಮೂಲಕ ಮಾತನಾಡಿ ಸಂಗೊಳ್ಳಿ ರಾಯಣ್ಣ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ದೇಶಕ್ಕಾಗಿ ಮಡಿದ ಮಹನೀಯರಾಗಿದ್ದು ಎಲ್ಲಾ ಯುವಕರಿಗೆ ಇವರ ಹೋರಾಟದ ಕಿಚ್ಚು ಇಂದಿನ ಯುವಕರಿಗೆ ಆದರ್ಶವಾಗಿದೆ.
ಹಾಲುಮತ ಸಮಾಜದ ಸಂಸ್ಕೃತಿ ಆಚಾರ ವಿಚಾರ ಪರಂಪರೆ ಉಳಿಸಿ ಬೆಳೆಸುವ ಮೂಲಕ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಲ ಹಾಲುಮತ ಸಮಾಜದ ಬಾಂಧವರು ಮುಂದಾಗಬೇಕು ಎಂದು ಕಲಬುರಗಿ ವಿಭಾಗದ ತಿಂಥಣಿ ಬ್ರಿಡ್ ಕನಕ ಪೀಠ ಕಾಗಿನೆಲೆ ಮಹಾ ಸಂಸ್ಥಾನದ ಶ್ರೀ ಸಿದ್ಧರಾಮನಂದಾ ಮಹಾ ಸ್ವಾಮೀಜಿ ಹೇಳಿದರು. ವೇದಿಕೆಯಲ್ಲಿ ಶ್ರೀ ಮ. ನಿ. ಪ್ರ. ಜ. ವಿಜಯಮಹಾಂತ ಮಹಾಸ್ವಾಮಿಗಳು ಕುದರಿಮೋತಿ ಶ್ರೀ ಶ್ರೀ ಶ್ರೀ ಶಿವಶಿದ್ದೇಶ್ವರ ಮಹಾಸ್ವಾಮಿಗಳು ಬಾದಿಮನಾಳ ಹಾಲವರ್ತಿ.ಶ್ರೀ ಮಳಿಯಪ್ಪಯ್ಯ ಗುರುವಿನ ಕೊರಡಕೇರಾ. ಶ್ರೀ ಅರಳಯ್ಯ ಮ. ಹಿರೇಮಠ.ಜಿಲ್ಲಾ ಬಿ.ಜೆ.ಪಿ.ಅಧ್ಯಕ್ಷರಾದ ನವಿನ ಗುಳಗಣ್ಣವರ. ಮತ್ತು ತಾಲ್ಲೂಕು ಯುವ ಮುಖಂಡರಾದ ಈಶ್ವರ ಅಟಮಳಗಿ.ಶರಣಪ್ಪ ಮುಧೋಳ. ಸುಬ್ಬನಗೌಡ ಪೋಲಿಸ್ ಪಾಟೀಲ.ಗುತ್ತಿಗೆದಾರಾದ ಶೇಖಪ್ಪ ವಣಗೇರಿ.ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತ್ನಮ್ಮ. ಗ್ರಾಮಸ್ಥರಾದ ಮಹಮ್ಮದ್ ಸಾಬ ತಾಳಿಕೋಟಿ. ಬಸವರಾಜ್ ಹಾದಿಮನಿ.ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಅಂದಯ್ಯ ಕಳ್ಳಿಮಠ. ವಸಂತ ಭಾವಿಮನಿ.ದೊಡ್ಡಯ್ಯ ಗುರುವಿನ ಹಾಗೂ ಗ್ರಾಮದ ಸರ್ವ ಸಮಾಜದ ಮುಖಂಡರು ಯುವಕರು ಮಹಿಳೆಯರು ಭಾಗವಹಿಸಿದ್ದರು
Get real time updates directly on you device, subscribe now.
Comments are closed.