ಕಿಮ್ಸ್ ಆಡಳಿತ ಪರಿಷತ್‌ಗೆ ಸಲೀಂ ಅಳವಂಡಿ ಪದಗ್ರಹಣ – ಸನ್ಮಾನ
ಕೊಪ್ಪಳ: ಜಿಲ್ಲೆಯ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾದ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಿಮ್ಸ್‌ಗೆ ಅಧಿಕಾರೇತರ ಆಡಳಿತ ಪರಿಷತ್‌ಗೆ ಸದಸ್ಯರನ್ನಾಗಿ ನಗರದ ಕಾಂಗ್ರೆಸ್ ಯುವ ಮುಖಂಡ ಸಲೀಂ ಅಳವಂಡಿ ಅವರನ್ನು ನೇಮಿಸಿದ್ದು, ಅವರು ಅಧಿಕೃತವಾಗಿ ಪದಗ್ರಹಣ ಮಾಡಿದ ನಿಮಿತ್ಯ ಸನ್ಮಾನಿಸಲಾಯಿತು.
ನಗರದ ಕಿಡದಾಳ ರಸ್ತೆಯಲ್ಲಿರುವ ಕಿಮ್ಸ್ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪದಗ್ರಹಣ ಮಾಡಿದ ಸಲೀಂ ಅಳವಂಡಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಿಮ್ಸ್ ನಿರ್ದೇಶಕ ಡಾ. ವಿಜಯನಾಥ್ ಇಟಗಿ ಅವರು, ಸಮಾಜ ಸೇವೆಯಲ್ಲಿ ವಿಶೇಷವಾಗಿ ಜಿಲ್ಲಾಸ್ಪತ್ರೆಗೆ ಸಂಬಂಧಿಸಿದ ಕೆಲಸಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದ ಹೊಂದಿದ್ದ ಸಲೀಂ ಅವರು ಪರಿಷತ್ ಸದಸ್ಯರಾಗಿದ್ದು ಸಂತೋಷ ತಂದಿದೆ, ಅವರು ನಾವು ಸೇರಿ ಇನ್ನಷ್ಟು ಉತ್ತಮ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವದಾಗಿ ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರು, ಗ್ಯಾರಂಟಿ ಸಮಿತಿ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಅವರು, ಸದಾ ಸಮಾಜಮುಖಿ ಆಲೋಚನೆಯಲ್ಲಿರುವ ಸಲೀಂ ಅಳವಂಡಿ ಅವರು ಸಮಾಜಕ್ಕೆ ವಿಶೇಷವಾದ ಸೇವೆ ನೀಡುತ್ತಿದ್ದು, ಸರಕಾರ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಮತ್ತು ಸಚಿವರಾದ ಶಿವರಾಜ ತಂಗಡಗಿ ಅವರು ವಿಶ್ವಾಸವಿರಿಸಿ ಉತ್ತಮವಾದ ಹುದ್ದೆಯನ್ನು ಒದಗಿಸಿಕೊಟ್ಟಿದ್ದು, ಇದನ್ನು ಬಳಸಿಕೊಂಡು ಪಕ್ಷಕ್ಕೆ ಮತ್ತು ಸಾರ್ವಜನಿಕರಿಗೆ ವಿಶೇಷವಾಗಿ ಬಡವರಿಗೆ ಒಳ್ಳೆಯ ಸೇವೆ ನೀಡುವಂತಾಗಲಿ, ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜು ಮತ್ತು ಹೊಸ ೪೫೦ ಬೆಡ್ ಆಸ್ಪತ್ರೆಯ ವ್ಯಾಪ್ತಿ ಇದ್ದು ಅವುಗಳಲ್ಲಿ ಉತ್ತಮ ಸೇವೆ ಸಿಗುವಂತಾಗಲಿ, ಮೂಲಸೌಕರ್ಯ ಮತ್ತು ಸ್ವಚ್ಛತೆ ಜೊತೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯಲಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ಶಸ್ತ್ರ ಚಿಕಿತ್ಸಕರಾದ ಡಾ. ಓಂಕಾರ, ಮುಖಂಡರುಗಳಾದ ಮಂಜುನಾಥ ಜಿ. ಗೊಂಡಬಾಳ, ಕುಬೇರ ಮಜ್ಜಿಗಿ, ಗುರುರಾಜ ಹಳ್ಳಿಕೇರಿ, ಸುಮಂಗಲಾ ನಾಯಕ, ರಿಯಾಜ್ ಮಂಗಳಾಪೂರ, ಚಿಕನ್ ಪೀರಾ ಇತರರು ಇದ್ದರು.
Comments are closed.