ಕೊಪ್ಪಳ ಜಿಲ್ಲೆಯ ಗ್ರಾ.ಪಂ ವಿವಿಧ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ
ಕೊಪ್ಪಳ ಜಿಲ್ಲೆಯ ವಿವಿಧ ಕಾರಣಗಳಿಂದ ತೆರವಾದ ಗ್ರಾ.ಪಂ ಸದಸ್ಯ ಸ್ಥಾನಗಳ ತುಂಬಲು ಉಪ ಚುನಾವಣೆಯನ್ನು ನಡೆಸಲು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ವೇಳಾಪಟ್ಟಿಯನ್ನು ನಿಗದಿಪಡಿಸಿದ್ದಾರೆ.
1993ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ವಿವಿಧ ಕಾರಣಗಳಿಂದ ತೆರವಾದ ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಗಳನ್ನು ತುಂಬಲು ಚುನಾವಣೆಗಳನ್ನು ನಡೆಸಬೇಕಾಗಿರುವುದರಿಂದ ಕರ್ನಾಟಕ ಪಂಚಾಯತ್‌ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು 1993ರ 12ನೇ ನಿಯಮಕ್ಕನುಸಾರವಾಗಿ ವಿವಿಧ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳ ಚುನಾವಣೆಗೆ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಲಾಗಿದೆ.
ಚುನಾವಣಾ ವೇಳಾಪಟ್ಟಿ: ಕೊಪ್ಪಳ ಜಿಲ್ಲೆಯ ವಿವಿಧ ಕಾರಣಗಳಿಂದ ತೆರವಾದ ಗ್ರಾ.ಪಂ ಸದಸ್ಯ ಸ್ಥಾನಗಳನ್ನು ತುಂಬಲು ನಡೆಯುವ ಉಪ ಚುನಾವಣೆಯ ವೇಳಾಪಟ್ಟಿಯಂತೆ ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 12 ಕೊನೆಯ ದಿನವಾಗಿದೆ. ನ.13ಕ್ಕೆ ನಾಮಪತ್ರಗಳನ್ನು ಪರಿಶೀಲನೆ, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ನ.15 ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ, ನ.23ಕ್ಕೆ ಮತದಾನವನ್ನು ನಡೆಸಲಾಗುವುದು ಹಾಗೂ ನ.26ರಂದು ಚುನಾವಣೆ ಮುಕ್ತಾಯಗೊಳ್ಳಲಿದೆ.
ಗ್ರಾ.ಪಂ ಕ್ಷೇತ್ರಗಳ ವಿವರ: ಕುಷ್ಟಗಿ ತಾಲ್ಲೂಕಿನ 5-ಜಾಗೀರಗುಡದೂರ ಗ್ರಾಮ ಪಂಚಾಯತಿಯ ಜಾಗೀರಗುಡದೂರ-1 ಕ್ಷೇತ್ರ ಹಾಗೂ 34-ತುಮರಿಕೊಪ್ಪ ಗ್ರಾಮ ಪಂಚಾಯತಿಯ ಗೊರೆಬಿಹಾಳ ಕ್ಷೇತ್ರ, ಕನಕಗಿರಿ ತಾಲ್ಲೂಕಿನ 6-ಹುಲಿಹೈದರ ಗ್ರಾ.ಪಂ.ನ ಹುಲಿಹೈದರ-1 ಕ್ಷೇತ್ರ, ಯಲಬುರ್ಗಾ ತಾಲ್ಲೂಕಿನ 9-ಮಾಟಲದಿನ್ನಿ ಗ್ರಾಮ ಪಂಚಾಯತಿಯ ಯಡ್ಡೋಣಿ-1 ಕ್ಷೇತ್ರ, 12-ಗಾಣದಾಳ ಗ್ರಾ.ಪಂ.ನ 1-ಗಾಣದಾಳ ಕ್ಷೇತ್ರ ಹಾಗೂ 10-ಹಿರೇವಂಕಲಕುಂಟಾ ಗ್ರಾ.ಪಂ.ನ ಚಿಕ್ಕವಂಕಲಕುಂಟಾ ಕ್ಷೇತ್ರ, ಕೊಪ್ಪಳ ತಾಲ್ಲೂಕಿನ 11-ಹಲಗೇರಾ ಗ್ರಾ.ಪಂ.ನ 4-ವದಗನಾಳ-1 ಕ್ಷೇತ್ರ, 16-ಇರಕಲ್ಲಗಡ ಗ್ರಾ.ಪಂ.ನ 8-ಇರಕಲ್ಲಗಡ-2 ಕ್ಷೇತ್ರ, 19-ಕಲ್‌ತಾವರಗೇರಾ ಗ್ರಾ.ಪಂ.ನ 2-ಕೂಕನಪಳ್ಳಿ-1 ಕ್ಷೇತ್ರ, 23-ಶಿವಪುರ ಗ್ರಾ.ಪಂ.ನ 4-ಶಿವಪುರ-3 ಕ್ಷೇತ್ರ, 22-ಬಂಡಿಹರ್ಲಾಪುರ ಗ್ರಾ.ಪಂ.ನ 6-ಬಸಾಪೂರ-2 ಕ್ಷೇತ್ರ, 5-ಬೆಟಗೇರಾ ಗ್ರಾ.ಪಂ.ನ 4-ಬೆಟಗೇರಾ-4 ಕ್ಷೇತ್ರ ಹಾಗೂ 14-ಕಿನ್ನಾಳ ಗ್ರಾ.ಪಂ.ನ 6-ಕಿನ್ನಾಳ-6 ಕ್ಷೇತ್ರ, ಕುಕನೂರು ತಾಲ್ಲೂಕಿನ 5-ಶಿರೂರ ಗ್ರಾಪಂ.ನ 1-ಯಡಿಯಾಪೂರ ಕ್ಷೇತ್ರ ಹಾಗೂ 1-ಕುದರಿಮೋತಿ ಗ್ರಾ.ಪಂ.ನ ಕುದರಿಮೋತಿ-3 ಕ್ಷೇತ್ರ, ಗಂಗಾವತಿ ತಾಲ್ಲೂಕಿನ 5-ಚಿಕ್ಕಜಂತಕಲ್ ಗ್ರಾ.ಪಂ.ನ ಹೊಸಳ್ಳಿ-3 ಕ್ಷೇತ್ರ ಹಾಗೂ 9-ಮರಳಿ ಗ್ರಾ.ಪಂ.ನ ಮರಳಿ-4 ಕ್ಷೇತ್ರ, ಕಾರಟಗಿ ತಾಲ್ಲೂಕಿನ 13-ಸಿದ್ದಾಪೂರ ಗ್ರಾ.ಪಂ.ನ 2-ಸಿದ್ದಾಪೂರ ಕ್ಷೇತ್ರ ಹಾಗೂ 2-ಬೆನ್ನೂರು ಗ್ರಾ.ಪಂ.ನ 5-ಕಕ್ಕರಗೋಳ-2 ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.