ಸಂಧಿವಾತಕ್ಕೆ ” ವಾಕ್ ಥಾನ “

0

Get real time updates directly on you device, subscribe now.


ಕೊಪ್ಪಳ :ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸಂಧಿವಾತಕ್ಕೆ ಒಳಗಾದ ವ್ಯಕ್ತಿಗಳಿಂದ ” ವಾಕ್ ಥಾನ ” ಕೆಎಸ್ ಆಸ್ಪತ್ರೆಯಿಂದ ಹಮ್ಮಿಕೊಳ್ಳಲಾಗಿತ್ತು.
ಸಂಧಿವಾತ ದಿನದ ಪ್ರಯುಕ್ತ ಕೊಪ್ಪಳದ ಕೆ ಎಸ್ ಆಸ್ಪತ್ರೆಯ ವತಿಯಿಂದ ” ವಾಕ್ ಥಾನ” ಸಂಧಿವಾತದಿಂದ ಗುಣಮುಖವಾದ ವ್ಯಕ್ತಿಗಳಿಂದ ಜಾಗೃತಿ ನಡಿಗೆ ಕಾರ್ಯಕ್ರಮವನ್ನು ಕೊಪ್ಪಳದ ಕೇಂದ್ರ ಬಸ್ ನಿಲ್ದಾಣದಿಂದ, ಅಶೋಕ್ ಸರ್ಕಲ್, ಬಸವೇಶ್ವರ ಸರ್ಕಲ್ (ಗಂಜ ಸರ್ಕಲ್ ) ಮೂಲಕ ಕೆ ಎಸ್ ಆಸ್ಪತ್ರೆಯವರೆಗೆ ಹಮ್ಮಿಕೊಳ್ಳಲಾಗಿತ್ತು. ನಡಿಗೆ ಕಾರ್ಯಕ್ರಮದಲ್ಲಿ ಡಾ ಬಸವರಾಜ ಅವರ ಚಿಕಿತ್ಸೆಯಿಂದ ನೂರಕ್ಕೂ ಹೆಚ್ಚು ಗುಣಮುಖವಾದ ವ್ಯಕ್ತಿಗಳು ಒಂದುವರೆ ಕಿಲೋಮೀಟರ್ ನಡಿಗೆಯನ್ನು ಮಾಡಿ ಸಂಧಿವಾತ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.”
ವಾಕ್ ಥಾನ್ ” ನಲ್ಲಿ ಕೊಪ್ಪಳದ ಹಿರಿಯ ನಾಗರಿಕರು, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕೊಪ್ಪಳ ನಗರದ ಖ್ಯಾತ ವೈದ್ಯರು, ಅರೆ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 1,500ಕ್ಕೂ ಹೆಚ್ಚು ” ವಾಕ್ ಥಾನ್ ” ಜಾತದಲ್ಲಿ ಪಾಲ್ಗೊಂಡರು.

ಕೊಪ್ಪಳ ನಗರದ ಕೇಂದ್ರದ ಬಸ್ ನಿಲ್ದಾಣದಲ್ಲಿ ಶ್ರೀ ವೀರಯ್ಯಸ್ವಾಮಿ ಗಂಗಾವತಿ ಬಾವುಟ ತೋರಿಸುವುದರ ಮೂಲಕ ನಡಿಗೆಗೆ ಚಾಲನೆ ನೀಡಿದರು. 1,500 ಜನರನ್ನ ಒಳಗೊಂಡ ನಡಿಗೆ ಕಾರ್ಯಕ್ರಮ ಕೆ ಎಸ್ ಆಸ್ಪತ್ರೆಯಲ್ಲಿ ಪೂರ್ಣಗೊಂಡು ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಧಿವಾತದಿಂದ ಗುಣಮುಖವಾದ ಹಿರಿಯರಾದ ವೀರಯ್ಯಸ್ವಾಮಿ ಗಂಗಾವತಿ, ಕಾರ್ಯಕ್ರಮಕ್ಕೆ ಸಹಕರಿಸಿದ ವೀರೇಶ್ ಮುಖ್ಯಸ್ಥರು ಎಂ ಎಸ್ ಪಿ ಎಲ್ ಬಲ್ದೊಟ ಕೊಪ್ಪಳ, ಉದ್ಯಮಿಗಳಾದ ಪ್ರಭು ಹೆಬ್ಬಾಳ್, ಹಿರಿಯ ವಕೀಲರಾದ ಭೂಸನೂರುಮಠ, ನರರೋಗ ತಜ್ಞರಾದ ಡಾ ಕೃಷ್ಣಮೂರ್ತಿ, ಡಾ ಶಿವನಗೌಡ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ಬಸವರಾಜ್ ಕ್ಯಾವಟರ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವಾರು ಗುಣಮುಖವಾದ ರೋಗಿಗಳು ಮಾತನಾಡಿ, ಸಂಧಿವಾತ ರೋಗ ಮನುಷ್ಯನ ದೈನಂದಿಕ ಚಟುವಟಿಕೆಗಳಿಗೆ ತೊಂದರೆ ಹೇಗೆ ಕೊಡುತ್ತದೆ, ಅದರ ನೋವನ್ನು ತಡೆದುಕೊಳ್ಳುವುದು ಹೇಗೆ, ಡಾ ಬಸವರಾಜ್ ಅವರು ಚಿಕಿತ್ಸೆ ಕಾರಣದಿಂದ ಉತ್ತರ ಕರ್ನಾಟಕದಲ್ಲಿಯೇ ಅದು ಕೊಪ್ಪಳ ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಕೆ ಎಸ್ ಆಸ್ಪತ್ರೆಯಲ್ಲಿ ಸಂಧಿವಾತ ರೋಗಿಗಳಿಗೆ ಸಂಪೂರ್ಣ ಗುಣಮುಖವಾಗುವಂತೆ ದೇವರ ಸ್ವರೂಪದಲ್ಲಿ ನಮಗೆ ಚಿಕಿತ್ಸೆಯನ್ನು ನೀಡಿದರು ಎಂದು ಹಲವಾರು ರೋಗಿಗಳು ಭಾವನಾತ್ಮಕವಾಗಿ ವಿಷಯಗಳನ್ನು ಹಂಚಿಕೊಂಡರು.

ವೀರಯ್ಯಸ್ವಾಮಿ ಗಂಗಾವತಿ ಮಾತನಾಡಿ ನಾನು ಮಲಗಿದ್ದಲ್ಲಿ ಮಲಗಿ ಏಳುವದು ಸಾಧ್ಯವಿಲ್ಲ, ನಡಿಗೆ ಮಾಡಲು ಸಾಧ್ಯವಿಲ್ಲ ಎನ್ನುವ ಹಂತದಲ್ಲಿ ಡಾಕ್ಟರ್ ಬಸವರಾಜ್ ಅವರು ಶಸ್ತ್ರಚಿಕಿತ್ಸೆಯ ಮೂಲಕ ಕಡಿಮೆ ಖರ್ಚಿನಲ್ಲಿ, ಬೇಗನೆ ಗುಣಮುಖವಾಗುವಂತೆ ಮಾಡಿ ಎಲ್ಲರಂತೆ ನಾನು ಇಂದು ನನ್ನ ದೈನಂದಿಕ ಚಟುವಟಿಕೆಗಳನ್ನು ಮಾಡಿಕೊಳ್ಳಲು, ಉದ್ಯೋಗವನ್ನು ಮಾಡಲು ಸಾಮಾನ್ಯರಂತೆ ನಡೆಯಲು ಮಾಡಿ ನನ್ನ ಜೀವನಕ್ಕೆ ಹೊಸ ರೂಪ ನೀಡಿದ್ದಾರೆ ಎಂದು ತಿಳಿಸಿದರು.

ಎಂ ಎಸ್ ಪಿ ಎಲ್ ಸಂಸ್ಥೆಯ ವಿಭಾಗದ ಮುಖ್ಯಸ್ಥರಾದ ವೀರೇಶ ಮಾತನಾಡಿ ಸಂಧಿವಾತ ರೋಗದ ನಡಿಗೆ ಕಾರ್ಯಕ್ರಮಕ್ಕೆ ನೂರಕ್ಕೂ ಹೆಚ್ಚು ರೋಗಿಗಳು ಗುಣಮುಖವಾಗಿ ನಡಿಗೆಯ ಮೂಲಕ ಒಂದುವರೆ ಕಿಲೋಮೀಟರ್ ವರೆಗೆ ನಡೆದು ಬಂದಿರುವುದು ಡಾಕ್ಟರ್ ಬಸವರಾಜ್ ಅವರ ಚಿಕಿತ್ಸೆ ಮತ್ತು ಆರೈಕೆಯ ಕಾರಣದಿಂದ ಇಷ್ಟೆಲ್ಲ ಸಾಧ್ಯವಾಗಿದೆ ಎಂದು ತಿಳಿಸಿದರು ಇಂತಹ ಕಾರ್ಯಕ್ರಮದಲ್ಲಿ ಎಂ ಎಸ್ ಪಿ ಎಲ್ ಸಂಸ್ಥೆಯು ಸಹಯೋಗ ಮಾಡಿರುವುದು ನಮ್ಮ ಸಂಸ್ಥೆಗೆ ಹೆಮ್ಮೆ ತರುವ ವಿಚಾರವಾಗಿದೆ ತಿಳಿಸಿದರು.

ಹಿರಿಯ ವಕೀಲರಾದ ಭೂಸನೂರಮಠ ಮಾತನಾಡಿ ನನ್ನ ತಾಯಿಗೆ ನೂರ ಇಪ್ಪತ್ತು ವರ್ಷ ನೂರು ವರ್ಷದ ಸಂದರ್ಭದಲ್ಲಿ ಡಾಕ್ಟರ್ ಬಸವರಾಜ ಅವರು ಚಿಕಿತ್ಸೆ ನೀಡಿ, ತಾಯಿಯನ್ನ ಸಂಧಿವಾತ ರೋಗದಿಂದ ಗುಣಮುಖವಾಗುವಂತೆ ಮಾಡಿರುವುದು ನಮ್ಮ ಕುಟುಂಬದ ಪಾಲಿನ ದೈವವನ್ನು ಉಳಿಸಿದಂತಾಗಿದೆ ಎಂದರು. ವಯಸ್ಸಾದ ವೃದ್ಧರಿಗೆ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಿನ ಕೆಲಸವಾಗಿದ್ದರೂ ಕೂಡ ನೂರು ವರ್ಷ ದಾಟಿರುವ ನನ್ನ ತಾಯಿಗೆ ಶಸ್ತ್ರಚಿಕಿತ್ಸೆ, ಯಶಸ್ವಿಗೊಳಿಸಿ ಗುಣಮುಖವಾಗುವಂತೆ ಮಾಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ ಕೆ ಎಸ್ ಆಸ್ಪತ್ರೆ ಮುಖ್ಯಸ್ಥರಾದ ಡಾ ಬಸವರಾಜ್ ಕ್ಯಾವಟರ ಅವರು ಮಾತನಾಡಿ ನಾನು ಬೆಂಗಳೂರಿನಲ್ಲಿ ಮತ್ತು ವಿದೇಶಗಳಲ್ಲಿ ಕೆಲಸ ಮಾಡುತ್ತಿರುವಾಗ ಸಂಧಿವಾತ ರೋಗಕ್ಕೆ ಒಳಗಾದಂತ ನೋವನ್ನ ತಾಳಲಾರದಿರುವಂತ ಹಲವಾರು ವ್ಯಕ್ತಿಗಳು ನನ್ನನ್ನು ಸಂಪರ್ಕಿಸುತ್ತಿದ್ದರು. ಅವರಿಗೆ ಬೆಂಗಳೂರಿಗೆ ಬರುವಂತೆ ತಿಳಿಸಿ ಬೆಂಗಳೂರಿನಲ್ಲಿ ಅವರಿಗೆ ಚಿಕಿತ್ಸೆಯನ್ನು ನೀಡುತ್ತಿದ್ದೆ. ನಮ್ಮ ಭಾಗದ ಜನರಿಗೆ ಅನುಕೂಲವಾಗಲೆಂದು ಕೆ ಎಸ್ ಆಸ್ಪತ್ರೆಯನ್ನು ಪ್ರಾರಂಭಿಸಿ ಸಾವಿರಾರು ರೋಗಿಗಳಿಗೆ ಕಡಿಮೆ ಖರ್ಚಿನಲ್ಲಿ, ಬೇಗನೆ ಗುಣಮುಖವಾಗುವ. ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ರಹಿತವಾಗಿ ರೋಗಿಗಳು ಗುಣಮುಖವಾಗುವಂತೆ ಮಾಡಿದ್ದೇನೆ. ಇದೊಂದು ಸವಾಲಿನ ಕೆಲಸವಾಗಿದ್ದರೂ ಕೂಡ ಈ ಭಾಗದ ಜನರ ಸೇವೆ ಮಾಡುವುದು ನನಗೆ ಒದಗಿದ ಸೌಭಾಗ್ಯ ಎಂದು ಭಾವಿಸಿ ಚಿಕಿತ್ಸೆಯನ್ನು ನೀಡುತ್ತಿದ್ದೇನೆ. ಸಂಧಿವಾತಕ್ಕೆ ಒಳಗಾದರೂ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಒಂದೇ ಮದ್ದಲ್ಲ, ಶಸ್ತ್ರ ಚಿಕಿತ್ಸೆ ರಹಿತವಾಗಿ, ಔಷಧಿಗಳ ಮೂಲಕ, ಫಿಜಿಯೋಥೆರಪಿಯ ಮೂಲಕ, ಇತರ ವಿಧಾನಗಳ ಮೂಲಕ ಕಡಿಮೆ ಮಾಡಬಹುದು ಎಂಬುದನ್ನು ಸಾವಿರಾರು ರೋಗಿಗಳಿಗೆ ಮನವರಿಕೆ ಮಾಡಿ. ಸಂಧಿವಾತ ರೋಗಕ್ಕೆ ಕಡಿಮೆಯಾಗಲು ನೋವಿನಿಂದ ಬಳಲುತ್ತಿರುವವರು ಜನ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಸಾಧ್ಯವಾದಷ್ಟು ಮಟ್ಟಿಗೆ ಮಾಡಿದ್ದೇನೆ. ತಮ್ಮೆಲ್ಲರ ಸಹಕಾರ ಇರಲೆಂದು ಇವತ್ತಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ತಮ್ಮೆಲ್ಲರಿಗೂ ವಂದನೆಗಳನ್ನು ತಿಳಿಸುತ್ತೇನೆ. ನೂರಕ್ಕೂ ಹೆಚ್ಚು ಸಂಧಿವಾತದಿಂದ ಗುಣಮುಖವಾದ ರೋಗಿಗಳು ಒಂದೂವರೆ ಕಿಲೋಮೀಟರ್ ಯಾವುದೇ ಸಹಾಯವಿಲ್ಲದೆ ನಡೆಗೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದನ್ನ ನೋಡಿ ನನಗೆ ಆಶ್ಚರ್ಯ ಮತ್ತು ಸಂತೋಷವಾಯಿತು. ನನ್ನ ಚಿಕಿತ್ಸೆಯ ಕಾರಣದಿಂದ ಇಷ್ಟೆಲ್ಲಾ ರೋಗಿಗಳು ಗುಣಮುಖರಾದರು ಎಂಬ ಸಂತೃಪ್ತಿಯ ಭಾವ ನನ್ನಲ್ಲಿ ಮೂಡಿದೆ. ಮುಂದಿನ ಚಿಕಿತ್ಸೆಗೆ ಮತ್ತೊಂದು ಹೊಸ ಪ್ರಯತ್ನಕ್ಕೆ ಉತ್ಸಾಹವನ್ನು ತರಿಸಿದೆ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು.

ನಡಿಗೆ ಜಾತಾದಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಎನ್ಎಸ್ಎಸ್ ಮತ್ತು ಎನ್ ಸಿ ಸಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, ಶ್ರೀ ಮರಿಶಾಂತವೀರ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳು, ಶ್ರೀ ಗವಿಸಿದ್ದೇಶ್ವರ ನರ್ಸಿಂಗ್ ಆಫ್ ಕಾಲೇಜಿನ ವಿದ್ಯಾರ್ಥಿಗಳು, ಶ್ರೀಮತಿ ಶಾರದಮ್ಮ ಕೊತ್ಬಾಳ ಕಾಲೇಜಿನ ಬಿಸಿಎ ಮತ್ತು ಬಿಬಿಎ ವಿದ್ಯಾರ್ಥಿಗಳು, ನ್ಯಾಷನಲ್ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ ವಿದ್ಯಾರ್ಥಿಗಳು, ಚಂದ್ರಮುಖಿ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಫೀನಿಕ್ಸ್ ಬಿ ಎಡ್ ಕಾಲೇಜಿನ ವಿದ್ಯಾರ್ಥಿಗಳು, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರುಗಳು, ಎನ್ಎಸ್ಎಸ್ ಅಧಿಕಾರಿಗಳು, ಕಾಲೇಜಿನ ಸಂಯೋಜಕರು, ಬಳ್ದೋಟ ಸಂಸ್ಥೆಯ ಸಿಬ್ಬಂದಿಗಳು, ಎಂ ಎಸ್ ಪಿ ಎಲ್ ಸಿಬ್ಬಂದಿಗಳು, ಕೆಎಸ್ಆರ್ ಟಿ ಸಿ ಸಿಬ್ಬಂದಿಗಳು, ಐಆರ್ ಬಿ ಮುನಿರಾಬಾದಿನ ಪೊಲೀಸ್ ಸಿಬ್ಬಂದಿಗಳು, ಕೆಎಸ್ ಕಾಲೇಜ್ ಆಫ್ ನರ್ಸಿಂಗನ ವಿದ್ಯಾರ್ಥಿಗಳು, ಕೆ ಎಸ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!