ರಾಜೀವಗಾಂಧಿ ರಾಜ್ಯ ಮಟ್ಟದ ಎಕಲ ವಲಯ ಖೋ-ಖೋ ಪಂದ್ಯಾಟಗಳಲ್ಲಿ ೪ನೇ ಸ್ಥಾನ

Get real time updates directly on you device, subscribe now.


ದಾವಣಗೇರೆಯ ಜೆ ಜೆ ಎಮ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದಿ  ೨೧ ಮತ್ತು ೨೨ ರಂದು ಜರುಗಿದ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಎಕಲ ವಲಯ ಖೋ-ಖೋ ಪಂದ್ಯಾಟಗಳು ಮತ್ತು ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಖೋ-ಖೋ ತಂಡದ ಆಯ್ಕೆ ಪ್ರಕ್ರೀಯೆಯಲ್ಲಿ ಶ್ರೀ ಜಗದ್ಗುರು ಗವಿಸಿದ್ದೇ ಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಕೊಪ್ಪಳದ ಮಹಿಳಾ ತಂಡ ಅತ್ಯುತ್ತಮ ಆಟ ಪ್ರದರ್ಶಿಸಿ ೪ನೇ ಸ್ಥಾನ ವನ್ನು ಪಡೆದುಕೊಂಡಿದೆ. ಒಟ್ಟು ೨೭ ತಂಡಗಳು ಭಾಗವಹಿಸಿದ ಈ ಕ್ರೀಡಾಕೂಟದಲ್ಲಿ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ರಾಜ್ಯ ಮಟ್ಟದ ಶ್ರೇ? ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದವು. ಮಹಿಳಾ ತಂಡದ ಈ ಸಾಧನೆಗೆ ಹ? ವ್ಯಕ್ತ ಪಡಿಸಿದ ಎಸ್ ಜಿ ವಿ ವಿ ಟ್ರಸ್ಟಿನ ಸದಸ್ಯರಾದ ಮತ್ತು ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಅಧ್ಯಕ್ಷರಾದ ಸಂಜಯ ಕೋತಬಾಳ ಮಹಾವಿದ್ಯಾಲಯದಲ್ಲಿ ನಡೆದ ಪೋಟೊಸೆ?ನ್ ಸಂದರ್ಭದಲ್ಲಿ ಮಾತನಾಡುತ್ತಾ ದೇಶಿಯ ಆಟವಾದ ಖೋ-ಖೋದಂತಹ ಕ್ರೀಡೆಗಳಿಗೆ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನೀಡುತ್ತಿರುವ ಪ್ರೋತ್ಸಾಹ ತುಂಬಾ ಶ್ಲಾಘ್ಹನೀಯ ಇದರಿಂದ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ತಮ್ಮ ಕ್ರೀಡಾಪ್ರತಿಭೆ ತೋರಿಸುವ ಉತ್ತಮ ಅವಕಾಶ ಸಿಗುತ್ತದೆ. ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಉತ್ತಮ ತಂಡಗಳೊಂದಿಗೆ ಪೈಪೋಟಿ ನೀಡಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು ಮತ್ತು ತಂಡದ ಯಶಸ್ಸಿಗೆ ಕಾರಣರಾದ ಎಲ್ಲ ವಿದ್ಯಾರ್ಥಿನಿಯರಿಗೆ ಶುಭಹಾರೈಸಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಮಹಾಂತೇಶ ಸಾಲಿಮಠ ಮಾತನಾಡುತ್ತಾ ಕ್ರೀಡಾ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಸದೃಡತೆಗೆ ಸಹಾಯಕಾರಿ , ನಮ್ಮ ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಅತ್ಯುತ್ತಮ ಸಾಧನೆ ತೋರಿ ಮಹಾವಿದ್ಯಾಲಯಕ್ಕೂ ಮತ್ತೂ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದುಕೊಡಲಿ ಎಂದು ಆಶಿಸಿದರು. ಕ್ರೀಡಾ ಅಧಿಕಾರಿಗಳಾದ ಡಾ ಎಸ್ ಎಸ್ ಶಿರೂರಮಠ ಮಾತನಾಡುತ್ತಾ ದಾವಣಗೇರೆಯ ಜೆ ಜೆ ಎಮ್ ವೈದ್ಯಕೀಯ ಮಹಾವಿದ್ಯಾಲಯವು ಖೋ-ಖೋ ಕ್ರೀಡಾಕೂಟವನ್ನು ತುಂಬಾ ಅಚ್ಚುಕಟ್ಟಾಗಿ ನೇರವೆರಿಸಿದರು ಎಂದು ತಿಳಿಸಿದರು ಮತ್ತು ನಮ್ಮ ವಿದ್ಯಾರ್ಥಿನಿಯರು ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಖೋ-ಖೋ ತಂಡಕ್ಕೆ ಅಯ್ಕೆಯಾಗಲಿ ಎಂದು ಶುಭಹಾರೈಸಿದರು

Get real time updates directly on you device, subscribe now.

Comments are closed.

error: Content is protected !!