ಮಹಿಳೆಯರಿಗೆ ಗರ್ಭಾಶಯ ಕ್ಯಾನ್ಸರ್ ಕುರಿತು ಆರೋಗ್ಯ ಮಾಹಿತಿ ತಪಸಣಾ ಶಿಬಿರ
ಕೊಪ್ಪಳ ಅ ೨೬: ಮಹಿಳೆಯರಿಗೆ ಗರ್ಭಾಶಯ ಕ್ಯಾನ್ಸರ್ ಕುರಿತು ಆರೋಗ್ಯ ಮಾಹಿತಿ ಹಾಗು ಆರೋಗ್ಯ ತಪಸಣಾ ಶಿಬಿರವು ಕೊಪ್ಪಳದ ಸೆಕ್ಯೂರ್ ಆಸ್ಪತ್ರೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಆಯೋಜಿಸಲಾಗಿತ್ತು.
ಕೊಪ್ಪಳ ಪಶ್ಚಿಮ ತಾಲೂಕಿನ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಡಿಯಲ್ಲಿ ಗರ್ಭಕೋಶ ಕೊರಳಿನ ಕ್ಯಾನ್ಸರ್ ಬಗ್ಗೆ ಮಾಹಿತಿ ಮತ್ತು ತಪಾಸಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜೆಸಿಐ ಅಧ್ಯಕ್ಷೆ ಶ್ರೀಮತಿ ಗೀತಾ ಪಾಟೀಲ್ ಉದ್ಘಾಟಿಸಿದರು.
ಸೆಕ್ಯೂರ್ ಆಸ್ಪತ್ರೆಯ ವೈದ್ಯರಾದ ಭಾಗ್ಯಶ್ರೀರವರು ಗರ್ಭಕೋಶ ಕೊರಳಿನ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದರು. ವೈದ್ಯರಾದ ಭವಾನಿ ಪ್ರಸಾದ್ ಅವರು ಕಾರ್ಯಕ್ರಮದಲ್ಲಿ ಆರೋಗ್ಯ ಸಮಸ್ಯೆ ಆರೋಗ್ಯ ಕಾಳಜಿ ಕುರಿತು ಮಾತನಾಡಿದರು. ಪ್ರಾದೇಶಿಕ ವಿಭಾಗದ ಜ್ಞಾನವಿಕಾಸ ಯೋಜನಾಧಿಕಾರಿ ಕುಮಾರಿ ಸುಧಾ ಆರೋಗ್ಯ ತಪಾಸಣೆಯ ಮಹತ್ವ ಹಾಗೂ ಸದುಪಯೋಗ ಪಡೆದುಕೊಳ್ಳುವ ಬಗ್ಗೆ ಕಾಲಕಾಲಕ್ಕೆ ಸರಿಯಾದ ತಪಾಸಣೆ ಮಾಡಿಕೊಳ್ಳುವ ಮುಖಾಂತರ ಮಹಿಳೆಯರು ತಮ್ಮ ಆರೋಗ್ಯ ರಕ್ಷಣೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ತಿಳಿಸಿದರು. ಸೆಕ್ಯೂರ್ ಆಸ್ಪತ್ರೆಯ ಮುಖ್ಯಸ್ಥರಾದ ಭುವನೇಶ್ವರಿ ತಪಾಸಣೆ ಮಾಡಿಕೊಳ್ಳಲು ಯಾವುದೇ ಹಿಂಜರಿಕೆ ಭಯ ಬೇಡ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಕ್ತದ ಒತ್ತಡ. ಸಕ್ಕರೆ ಕಾಯಿಲೆಯ ಬಗ್ಗೆ ಪರೀಕ್ಷೆ ಮಾಡಿ ಸಲಹೆ. ಚಿಕಿತ್ಸೆ ನೀಡಿದರು.
Comments are closed.