ವೈದ್ಯ ಸಮಾವೇಶ ಹಾಗೂ ಉಚಿತ ಚಿಕಿತ್ಸಾ ಶಿಬಿರ

Get real time updates directly on you device, subscribe now.

ಶ್ರೀ ಪ.ಪೂ ಲಿಂ. ಶರಣ ಬಸವಾರ್ಯ ತಾತನವರ ೧೫ನೇ ವರ್ಷದ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಅಕ್ಟೋಬರ್-೨೪ ಗುರುವಾರ ಯಶಸ್ವಿಯಾಗಿ ಜರುಗಿದ
ಗಂಗಾವತಿ: ಅಕ್ಟೋಬರ್-೨೪ ಗುರುವಾರದಂದು ನಗರದ ಹೊಸಳ್ಳಿ ರಸ್ತೆಯಲ್ಲಿರುವ ಕನ್ನಡ ಜಾಗೃತಿ ಭವನದಲ್ಲಿ ಶ್ರೀ ಪ.ಪೂ ಲಿಂ. ಶರಣ ಬಸವಾರ್ಯ ತಾತನವರ ೧೫ನೇ ವರ್ಷದ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ (ರಿ) ಅರಳಹಳ್ಳಿ, ಶ್ರೀ ಹಾನಗಲ್ಲ ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ ಮತ್ತು ಕನ್ನಡ ಜಾಗೃತಿ ಸಮಿತಿ (ರಿ) ಗಂಗಾವತಿ, ಕನ್ನಡ ಜಾಗೃತಿ ಸಮಿತಿ ಹಾಗೂ ಆತ್ರೇಯ ಆಯುರ್ವೇದ ಪ್ರತಿಷ್ಠಾನ (ರಿ), ಸ್ಪೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಡಾ. ಎಸ್.ವಿ ಸವಡಿ ಆಯುರ್ವೇದ ಆಸ್ಪತ್ರೆ, ಪ್ರಸಾದ ಲೋಕಸೇವಾ ಟ್ರಸ್ಟ್ (ರಿ), ಪ್ರಸಾದ್ ಗ್ಲೋಬಲ್ ಆಸ್ಪತ್ರೆ ಶ್ರೀ ಮಲ್ಲಿಕಾರ್ಜುನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಅಮರ ಮಕ್ಕಳ ಆಸ್ಪತ್ರೆ ಮತ್ತು ನಕ್ಷತ್ರ ಸಾಹಿತ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ಸಂಡೂರು ಇವರುಗಳ ಸಹಯೋಗದಲ್ಲಿ ವೈದ್ಯ ಸಮಾವೇಶ ಹಾಗೂ ಉಚಿತ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ನಕ್ಷತ್ರ, ಸಾಹಿತ್ಯ, ಶೈಕ್ಷಣಿಕ & ಸಾಂಸ್ಕೃತಿಕ ಟ್ರಸ್ಟ್ (ರಿ) ಸಂಸ್ಥಾಪಕರಾದ ಡಾ. ಷಣ್ಮುಖಸ್ವಾಮಿ ಕಡ್ಡಿಪುಡಿ ವಕೀಲರು ಪ್ರಕಟಣೆಯಲ್ಲಿ ತಿಳಿಸಿದರು.
ಶ್ರೀ ಪ.ಪೂ ಶರಣಬಸವ ದೇವರು ಇವರ ನೇತೃತ್ವದಲ್ಲಿ ನಡೆದ ಈ ಶಿಬಿರದ ಇದರ ಉದ್ಘಾಟನೆಯನ್ನು ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಲ್ಯಾಪ್ರೋಸ್ಕೋಪಿಕ್ ತಜ್ಞರಾದ ಡಾ|| ಸಿದ್ಧರಾಮೇಶ, ದಂತ ವೈದ್ಯರಾದ ಡಾ|| ಶಿವಕುಮಾರ ಮಾಲಿಪಾಟೀಲ್, ಮಾಜಿ ಕಾಡಾ ಅಧ್ಯಕ್ಷರಾದ ಬಿ.ಹೆಚ್.ಎಂ ತಿಪ್ಪೇರುದ್ರಸ್ವಾಮಿ, ಮಾಜಿ ಜಿ.ಪಂ ಸದಸ್ಯ ಹೆಚ್.ಎಂ. ಸಿದ್ರಾಮಯ್ಯಸ್ವಾಮಿಯವರು ಮಾಡಿದರು.
ಮುಖ್ಯ ಅತಿಥಿಗಳಾಗಿ ಕೊಟ್ಟೂರೇಶ್ವರ ಸ್ಕ್ಯಾನಿಂಗ್ ಸೆಂಟರ್‌ನ ರೇಡಿಯೋಲಾಜಿಸ್ಟ್ ಡಾ|| ಕಾರ್ತಿಕ್ ಜಂಬುನಾಥಗೌಡ, ಡಾ|| ಶ್ವೇತಾ, ಡಾ|| ಸುಷ್ಮಾ, ಡಾ|| ಜಿ. ಚಂದ್ರಪ್ಪ ಆಸ್ಪತ್ರೆಯ ಡಾ|| ಸ್ನೇಹಲತಾ ಗದ್ದಡಕಿ, ಹೊಟ್ಟೆ ಮತ್ತು ಕರುಳು ರೋಗಗಳ ಆಯುರ್ವೇದ ತಜ್ಞರಾದ ಡಾ|| ಮೋಹನ್ ಜಿ., ಶ್ವಾಸಕೋಶ ರೋಗಗಳ ಆಯುರ್ವೇದ ತಜ್ಞರಾದ ಡಾ|| ವಿನೋದಕುಮಾರ ಆರ್.ಹೆಚ್., ಕನಕಗಿರಿಯ ಅಮರೇಶ ಚಿತ್ತರಕಿ ರವರುಗಳು ಪಾಲ್ಗೊಂಡಿದ್ದರು.
ಈ ಉಚಿತ ಚಿಕಿತ್ಸಾ ಶಿಬಿರದಲ್ಲಿ ಸುಮಾರು ೩೫೦ ಜನರು ಚಿಕಿತ್ಸೆಯನ್ನು ಪಡೆದುಕೊಂಡರು. ನಂತರ ವೈದ್ಯರಿಗೆ ಅಭಿನಂದನಾ ಪತ್ರ ನೀಡುವ ಮೂಲಕ ಗೌರವಿಸಲಾಯಿತು. ಈ ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಸಾದದ ಸೇವೆಯನ್ನು ಕನಕಗಿರಿಯ ಪ್ರಸಾದ ಗ್ಲೋಬಲ್ ಆಸ್ಪತ್ರೆಯ ಶ್ರೀಮತಿ ಡಾ|| ಸಹನಾ, ಶ್ರೀ ಡಾ|| ಸಿದ್ಧರಾಮೇಶ ಇವರಿಂದ ಕಲ್ಪಿಸಲಾಗಿತ್ತು.
ಕಾರ್ಯಕ್ರಮದ ನಿರೂಪಣೆಯನ್ನು ಆಫ್ರೀನ್, ವಂದನಾರ್ಪಣೆಯನ್ನು ವಕೀಲರಾದ ಡಾ. ಷಣ್ಮುಖಸ್ವಾಮಿ ಕಡ್ಡಿಪುಡಿಯವರು ಮಾಡಿದರು

Get real time updates directly on you device, subscribe now.

Comments are closed.

error: Content is protected !!