ನಾಟಕ ಸ್ಪರ್ಧೆಯಲ್ಲಿ ಡಾವಣಗೇರಿಗೆ ಪ್ರಥಮ

0

Get real time updates directly on you device, subscribe now.

ಕೊಪ್ಪಳ  :  ತಾಲೂಕಿನ ಮುನಿರಾಬಾದ್ ಡಯಟ್ ನಲ್ಲಿ ನಡೆದ ವಿಭಾಗಮಟ್ಟದ ನಾಟಕ ಸ್ಪರ್ಧೆಯಲ್ಲಿ  ಡಾವಣಗೇರಿ ಜಿಲ್ಲೆಯ ಮಾವಿನಕಟ್ಟಿ ಸರ್ಕಾರಿ ಪ್ರೌಢ ಶಾಲೆಯ ತಂಡ ಪ್ರಥಮ ಸ್ಥಾನ ಪಡೆದಿದೆ.

ದ್ವಿತೀಯ ಸ್ಥಾನವನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಸರ್ಕಾರಿ ಪ್ರೌಢ ಶಾಲೆಯ ತಂಡ ಪಡೆದಿದೆ. ಯಲಬುರ್ಗಾ ತಾಲೂಕಿನ ಮಂಗಳೂರು ಪಬ್ಲಿಕ್ ಶಾಲೆಯ ತಂಡ ತೃತಿಯ ಸ್ಥಾನ ಪಡೆದಿದೆ.

 ವಿಭಾಗ ಮಟ್ಟದ ನಾಟಕ ಸ್ಪರ್ಧೆಯಲ್ಲಿ 7 ಜಿಲ್ಲೆಯ ತಂಡಗಳು ಭಾಗವಹಿಸಿದ್ದವು.

ಉತ್ತಮ ನಟ ಪ್ರಶಸ್ತಿಯನ್ನು ಕೆಪಿಎಸ್ ಶಾಲೆಯ  ವಿಜಯ ನಿಂಗಾಪುರ ಪಡೆದಿದ್ದಾರೆ. ಉತ್ತಮ ನಟಿ ಪ್ರಶಸ್ತಿಯನ್ನು ಕುರಗೋಡ ಗುರುಶಾಂತಪ್ಪ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಂಗೀತಾ, ಉತ್ತಮ ರಚನಾಕಾರ, ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಡಾವಣಗೇರೆ ಜಿಲ್ಲೆಯ ಮಾವಿನಕಟ್ಟಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಡಾ. ವೆಂಕಟೇಶ್ವರ ಕೆ. ಅವರು ಪಡೆದುಕೊಂಡಿದ್ದಾರೆ.

ನಿರ್ಣಾಯಕಾರಿಯಾಗಿ ಉಪನ್ಯಾಸಕರಾದ ಬಸವಂತಯ್ಯ ಎಚ್. ಶಿಕ್ಷಕ ಗುರುರಾಜ ಎಲ್. ರಾಮಣ್ಣ ಮಡಿವಾಳ ಕಾರ್ಯನಿರ್ವಹಿಸಿದ್ದಾರೆ.

ಉದ್ಘಾಟನಾ ಸಮಾರಂಭ – ವಿಭಾಗಮಟ್ಟದ ನಾಟಕ ಸ್ಪರ್ಧೆಯ ಸಮಾರಂಭವನ್ನು  ಡಯಟ ಪ್ರಾಚಾರ್ಯರಾದ ದೊಡ್ಡಬಸಪ್ಪ ನೀರಲಕೇರಿ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಆಯುಬ್ ಖಾನ್ , ಉಪಾಧ್ಯಕ್ಷರು ಸೌಭಾಗ್ಯ ನಾಗರಾಜ, ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಪ್ರ ಕಾ. ಮಾರ್ತಂಡರಾವ್   ದೇಸಾಯಿ, ವಿಜಯಗರ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ವಿಜಯಕುಮಾರ, ಡಯಟ್  ಹಿರಿಯ ಉಪನ್ಯಾಸಕರಾದ ಎಚ್.ಆರ್. ಪನಮೇಶಲು, ನಿರ್ಮಮಾ ಬಿ., ಮೈತ್ರಾದೇವಿ ರಡ್ಡೇರ, ಪ್ರಾಣೇಶ ಎಂ., ಕೃಷ್ಣಾ , ರೇಖಾ ಜಿ., ಶೇಖಣ್ಣ ಸಿ., ಕಾರ್ಯಕ್ರಮದ ನೋಡಲ್ ಅಧಿಕಾರಿ ರಾಜೇಂದ್ರ ಬೆಳ್ಳಿ, ಡಯಟ್ ಸಿಬ್ಬಂದಿ ಸೇರಿದಂತೆ ಮೊದಲಾದವರು ಇದ್ದರು.

 ಕೊಪ್ಪಳ ತಾಲೂಕಿನ ಮುನಿರಾಬಾದ್ ಡಯಟನ್ ನಡೆದ ವಿಭಾಗಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಡಾವಣಗೇರಿಯ ತಂಡ.

 ಕೊಪ್ಪಳ ತಾಲೂಕಿನ ಮುನಿರಾಬಾದ್ ಡಯಟನ್ ನಲ್ಲಿ ನಡೆದ ವಿಭಾಗಮಟ್ಟದ ನಾಟಕ ಸ್ಪರ್ಧೆಯ ಉದ್ಘಾಟನಾ ಸಮಾರಂಭ.

Get real time updates directly on you device, subscribe now.

Leave A Reply

Your email address will not be published.

error: Content is protected !!