ಹಜರತ್ ರಾಜಾಬಾಗ್ ಸವಾರ್ ದರ್ಗಾದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡಕ್ಕೆ 10 ಲಕ್ಷ ಅನುದಾನ-ಸಂಸದ ರಾಜಶೇಖರ್ ಹಿಟ್ನಾಳ್

Get real time updates directly on you device, subscribe now.

ಕೊಪ್ಪಳ ,ಅ 25, ನಗರದ ಹಜರತ್ ರಾಜಾಬಾಗ್ ಸವಾರ್ ದರ್ಗಾದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಸಂಸದರ ನಿಧಿಯಿಂದ 10 ಲಕ್ಷ ರೂ ಅನುದಾನ ನೀಡುವದಾಗಿ ಸಂಸದ ಕೆ ರಾಜಶೇಖರ್ ಹಿಟ್ನಾಳ್ ಭರವಸೆ ನೀಡಿದರು,

ಅವರು ಶುಕ್ರವಾರ ಬೆಳಗ್ಗೆ ನಗರದ ಹಜರತ್ ರಾಜಾಬಾಗ್ ಸವಾರ್ ದರ್ಗಾ ಆವರಣದಲ್ಲಿ ದರ್ಗಾದ ವತಿಯಿಂದ ನೂತನವಾಗಿ ನಿರ್ಮಾಣ ಗೊಳ್ಳುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಏರ್ಪಡಿಸಿದ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ ಸಮಾಜದ ಅಭಿವೃದ್ಧಿ ಪರ ಕೆಲಸಗಳಿಗೆ ಸಂಪೂರ್ಣ ಸಹಕಾರ ನೀಡುವದಾಗಿ ಹೇಳಿದರು,
ಸಮಾರಂಭದ ಅಧ್ಯಕ್ಷತೆ ವಹಿಸಿದ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಹಿರಿಯ ನ್ಯಾಯವಾದಿ ಎಸ್ ಆಸಿಫ್ ಅಲಿ ಮಾತನಾಡಿ ದರ್ಗಾ ಕಮಿಟಿಯ ಪದಾಧಿಕಾರಿಗಳು ಉತ್ತಮ ಅಭಿವೃದ್ಧಿಪರ ಕೆಲಸ ಮಾಡಿರುವುದು ಸಂತಸದ ವಿಷಯವಾಗಿದೆ, ಅವಧಿ ಮುಗಿದರು ಉತ್ತಮ ಕಾರ್ಯಗಳನ್ನು ಪೂರ್ಣಗೊಳ್ಳಲು ಸಮಾಜ ಬಾಂಧವರು ಕಾಲಾವಕಾಶ ನೀಡಿರುವುದು ಅದರ ತಕ್ಕಂತೆ ಪದಾಧಿಕಾರಿಗಳು ಶ್ರಮಿಸಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಎಂದರು,
ಸಮಾರಂಭದ ಸಾನಿಧ್ಯ ವಹಿಸಿದ ಮುಸ್ಲಿಂ ಧರ್ಮ ಗುರು ಹಾಗೂ ಯು ಸೂಫಿಯ ಮಸೀದಿ ಖತೀಬ್ ಇಮಾಮ್ ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹಮದ್ ಖಾದ್ರಿ ತಸ್ಕಿನಿ ಮಾತನಾಡಿ ಸಮಾಜದ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಸಂಘ ಸಂಸ್ಥೆಗಳು ಜನ ಪ್ರತಿನಿಧಿಗಳು ಶ್ರಮಿಸಬೇಕು ಉತ್ತಮ ಕಾರ್ಯಗಳಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು, ದರ್ಗಾ ಕಮಿಟಿಯ ಅಧ್ಯಕ್ಷ ಮೌಲಾ ಹುಸೇನ್ ಜಮೆದಾರ್ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಅಧಿಕಾರ ಅವಧಿಯಲ್ಲಿ ಸಮಾಜದ ಹಿರಿಯರು ಜನಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡಿರುವುದರಿಂದ ಇಂತಹ ಉತ್ತಮ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಿದೆ ತಮಗೆ ಪ್ರೋತ್ಸಾಹ ನೀಡಿದ ಪ್ರತಿಯೊಬ್ಬರಿಗೂ ಅಭಿನಂದಿಸುವದಾಗಿ ಅವರು ಹೇಳಿದರು, ಸಮಾರಂಭದಲ್ಲಿ ಹಿರಿಯ ನ್ಯಾಯವಾದಿ ಅಬ್ದುಲ್ ಅಜಿಜ್ ಚೌಧಾಯಿ, ನಿವೃತ್ತ ಉಪ ತಹಶೀಲ್ದಾರ್ ಲಾಯಕ್ ಅಲಿ ಸಮಾಜದ ಮುಖಂಡರಾದ ಇಬ್ರಾಹಿಂ ಸಾಬ್ ಅಡ್ಡ ವಾಲೆ, ಹಿರಿಯ ನ್ಯಾಯವಾದಿ ಪೀರಾ ಹುಸೇನ್ ಹೊಸಳ್ಳಿ, ಹುಸೇನ್ ಪೀರ ಚಿಕನ್ ಮಾನ್ವಿ ಪಾಷಾ ಸಿರಾಜ್ ಕೋಲ್ಕಾರ್ ಕರೀಂ ಸಾಬ್ ಗಚ್ಚಿನಮನಿ ಸೈಯದ್ ರಹಮತ್ ಹುಸೇನಿ ಆಯುಬ್ ಸಾಬ್ ಅಡ್ಡೆ ವಾಲೆ, ನಗರಸಭಾ ಸದಸ್ಯಅಜೀಮ್ ಅತ್ತಾರ್ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್ ನ್ಯಾಯವಾದಿ ಗೈಬು ಸಾಬ್ ಚಟ್ನಿ ಯುವ ನಾಯಕರಾದ ಸಲೀಂ ಮಂಡಲಗಿರಿ ಮೆಹಬಮೂದ ಹುಸೇನಿ ಬಲ್ಲೆ ಶಾಬುದ್ದೀನ್ ಸಾಬ್ ನೂರ್ ಬಾಷಾ ಸೈಯದ್ ನಾಸಿರುದೀ ನ್ ಹುಸೇನಿ ,ಖಾದರ್ ಸಾಬ್ ಕುದುರೆಮೋತಿ ,ಸಿಎಂ ಮುಸ್ತಫಾ ಹುಂಚಿ ಗಿಡ ಮೊಹಮ್ಮದ್ ಸಾಬ್ ಕಳ್ಳಿಮನಿ, ಸಮಧ ಸಿದ್ದಿಕಿ, ಅಬ್ಬಾಸ್ ಅಲಿ ಖಾಜಿ, ಆರ್ ಎಂ ರಫಿ, ಗಫಾರ್ ಸಾಬ್ ದೀಡಿ,ಅಂಜುಮನ್ ಕಮಿಟಿ ಅಧ್ಯಕ್ಷ ಆಸಿಫ್ ಕರ್ಕಿಹಳ್ಳಿ, ಯಜದಾನಿ ಪಾಷಾ ಖಾದರಿ, ಅಕ್ತರ್ ಫಾರೂಕಿ, ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಆರಂಭದಲ್ಲಿ ಹಾಫಿಜ್ ಮುಹಿಯುದ್ದೀನ್ ರವರು ಕುರಾನ್ ಪಠಣ ಮಾಡಿದರು ,ಸಮಾಜದ ಯುವ ನಾಯಕ ಸಲೀಂ ಅಳವಂಡಿ ಅವರು ಕಾರ್ಯಕ್ರಮ ನಿರೂಪಿಸಿದರು, ದುರ್ಗಾ ಕಮಿಟಿಯ ಕಾರ್ಯದರ್ಶಿ ಅಬ್ದುಲ್ ಗನಿ ವಕೀಲರು ಆರಂಭದಲ್ಲಿ ಸ್ವಾಗತಿಸಿದರೆ ಖಾಜಾವಲಿ ಬನಿಕೊಪ್ಪ ರವರು ಕೊನೆಯಲ್ಲಿ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!