ಮರಕುಂಬಿ ಪ್ರಕರಣ : 98 ಜನರಿಗೆ ಜೀವಾವಧಿ, ಮೂವರಿಗೆ ಐದು ವರ್ಷ ಶಿಕ್ಷೆ

Get real time updates directly on you device, subscribe now.

ಕೊಪ್ಪಳ : ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ

ದಲಿತರ ಮೇಲೆ ದೌರ್ಜನ್ಯ ಪ್ರಕರಣದಲ್ಲಿ 98 ಅಪರಾಧಿಗಳಿಗೆ ಜೀವಾವದಿ ಶಿಕ್ಷೆ ಹಾಗೂ ಮೂವರು ಅಪರಾಧಿಗಳಿಗೆ ೫ ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ. ಈ ಕುರಿತು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಂದ ಆದೇಶ ನೀಡಿದ್ದಾರೆ. ಅಕ್ಟೋಬರ್ 21 ರಂದು ಅಪರಾಧಿಗಲು ಎಂದು  ಘೋಷಣೆ ಮಾಡಿದ್ದ ನ್ಯಾಯಾಧೀಶರು ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.

101 ಅಪರಾಧಿಗಳ ಪೈಕಿ 98 ಅಪರಾಧಿಗಳಿಗೆ ಜೀವಾವದಿ ಶಿಕ್ಷೆ ಮೂವರು ಅಪರಾಧಿಗಳಿಗೆ ಐದು ವರ್ಷ ಕಠೀಣ ಶಿಕ್ಷೆ ಜೀವಾವಧಿ ಶಿಕ್ಷೆ ವಿಧಿಸಿದ 98 ಆರೋಪಿಗಳಿಗೆ ತಲಾ ಐದು ಸಾವಿರ ದಂಡ ಮೂವರು ಅಪರಾಧಿಗಳಿಗೆ ತಲಾ ಎರಡು ಸಾವಿರ ದಂಡ ವಿಧಿಸಲಾಗಿದೆ.2014 ರ ಆಗಸ್ಟ್ 28 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ನಡೆದಿದ್ದ ಗಲಾಟೆ‌ ಪ್ರಕರಣದಲ್ಲಿ ಅಟ್ರಾಸಿಟಿ,ಹಲ್ಲೆ, ಜೀವ ಬೆದರಿಕೆ ಪ್ರಕರಣ ದಾಖಲಾಗಿತ್ತು.

ಗಂಗಾವತಿ ನಗರದಲ್ಲಿ ಪವರ್ ಸಿನಿಮಾ ನೋಡಲು ಮರಕುಂಬಿ ಗ್ರಾಮದ ಮಂಜುನಾಥ ಮತ್ತು ಸಂಗಡಿಗರು ಹೋಗಿದ್ದರು.
ಈ ಸಮಯದಲ್ಲಿ ಮಂಜುನಾಥ ಮೇಲೆ ಹಲ್ಲೆಯಾಗಿತ್ತು
ತಮ್ಮೂರಿನ ದಲಿತರೇ ಹಲ್ಲೆ ಮಾಡಿಸಿದ್ದಾರೆ ಎಂದು ಮಂಜುನಾಥ ಗ್ರಾಮದ ಜನರಿಗೆ ಹೇಳಿದ್ದ ಗ್ರಾಮದ ಜನರು ದಲಿತರ ಮೇಲೆ ಹಲ್ಲೆ ಮಾಡಿದ್ದರು ಅನೇಕರ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು , ಹಲ್ಲೆ ಮಾಡಲಾಗಿತ್ತು. ಈ ಬಗ್ಗೆ ಭೀಮೇಶ್ ಅನ್ನೋರು‌ ದೂರು ನೀಡಿದ್ದರು. ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಹೋರಾಟಗಳ ನಡೆದಿದ್ದವು.
ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುದೀರ್ಘ ವಿಚಾರಣೆ ನಂತರ ೨೧ರಂದು ೧೦೧ ಜನರು ಅಪರಾಧಿಗಳು ಎಂದು ಸಾಭೀತಾಗಿತ್ತು. ಶಿಕ್ಷೆಯ ಪ್ರಮಾಣ ಇಂದು ನ್ಯಾಯಾಧೀಶರು ಘೋಷಣೆ ಮಾಡಿದ್ರು.ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಕೊಪ್ಪಳ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿದ್ದ ಅಪರಾಧಿಗಳ ಕುಟುಂಬಸ್ಥರ ಕಣ್ಣಿರು ಹಾಕಿದ್ರು.

  • ಈ ತೀರ್ಪು ಎಲ್ಲರಿಗು ಪಾಠವಾಗಬೇಕು,  ದಲಿತರ ಮೇಲಿನ ದೌರ್ಜನಗಳು ಕೊನೆಯಾಗಬೇಕು –

ಜೆ ಭಾರದ್ವಾಜ್ ಹೋರಾಟಗಾರ

Get real time updates directly on you device, subscribe now.

Comments are closed.

error: Content is protected !!