ಮಹರ್ಷಿ ವಾಲ್ಮೀಕಿ ರವರು ಬರಿ ಆದಿ ಕವಿಯಲ್ಲ ಅವರು ಮನುಕುಲದ ಆದರ್ಶ ಕವಿಗಳು : ಗುಳಗಣ್ಣನವರ್

0

Get real time updates directly on you device, subscribe now.

ಇಂದು ದಿನಾಂಕ : 17/10/2024 ರಂದು ಬೆಳಗ್ಗೆ 11 : ಘಂಟೆಗೆ ಕೊಪ್ಪಳದ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಲಯದಲ್ಲಿ ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ರವರ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ನವೀನ್ ಕುಮಾರ್ ಈಶಣ್ಣ ಗುಲಗಣ್ಣನವರ್ ಮಾತನಾಡಿ ಮಹರ್ಷಿ ವಾಲ್ಮೀಕಿ ರವರು ಸಂಸ್ಕೃತದಲ್ಲಿ ಮೊಟ್ಟಮೊದಲಿಗೆ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿರುವ ಆದಿಕವಿ ಮಹರ್ಷಿ ವಾಲ್ಮೀಕಿ ಅವರನ್ನು ಮರೆಸಿಕೊಂಡು ಗೌರವಸಲ್ಲಿಸುವ ಮತ್ತು ಕಾವ್ಯದ ಮೂಲಕ ನೀಡಿರುವ ಆದರ್ಶ ಮೌಲ್ಯಗಳನ್ನು ಯುವ ಪೀಳಿಗೆಗೆ ತಿಳಿಸುವ ಹಿನ್ನೆಲೆಯಲ್ಲಿ ನಾವೆಲ್ಲರೂ ಶ್ರೀ  ವಾಲ್ಮೀಕಿ ರವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗುತ್ತದೆ.
ಮಹರ್ಷಿ ವಾಲ್ಮೀಕಿ ಅವರು ನೂರಾರು ಪಾತ್ರಗಳನ್ನು ಒಂದೇ ಕಾವ್ಯದಲ್ಲಿ ಸೃಷ್ಟಿಸಿ ಆ ಪಾತ್ರಗಳ ಮೂಲಕ ಮಾನವೀಯತೆ, ಸಮತೆ, ಮಮತೆ, ಭ್ರಾತೃತ್ವ, ಕರುಣೆ, ಪ್ರತಿಪಾದಿಸುವ ಮೂಲಕ ಮನುಕುಲದ ಉದ್ಧಾರಕ್ಕಾಗಿ ಮಾರ್ಗದರ್ಶನವನ್ನು ನೀಡಿದ್ದಾರೆ.
ರಾಮಾಯಣ ಮಹಾಕಾವ್ಯವು ಭಾರತದ ಚಿತ್ರಕಲೆ, ವಾಸ್ತು ಶಿಲ್ಪ, ಸಂಸ್ಕೃತಿ, ಇತಿಹಾಸ, ಪರಂಪರೆ, ನೃತ್ಯ, ನಾಟಕ, ರಂಗಭೂಮಿ, ಸಂಗೀತ, ಯಕ್ಷಗಾನ ಮುಂತಾದ ಕ್ಷೇತ್ರಗಳ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿದೆ ಎಂದರು.ಹೀಗೆ ಮಹರ್ಷಿ ವಾಲ್ಮೀಕಿ ರವರ ತತ್ವ ಆದರ್ಶ ನಮ್ಮೆಲ್ಲರಿಗೂ ಪ್ರೇರಕವಾಗಿರಲಿ ಅವರೊಬ್ಬ ಅಧಿಕವಿ ಅಲ್ಲ ಆದರ್ಶದ ಕವಿಗಳು ಎಂದು ನಾವೆಲ್ಲರೂ ಭಾವಿಸಿಕೊಳ್ಳಬೇಕು ಎಂದು ನವೀನ್ ಕುಮಾರ್ ಗುಳಗಣ್ಣನವರು ಮಾತನಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಹೆಸರೂರ್ , ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ವಿಜಯಕುಮಾರ್ ತಾಳಕೇರಿ, ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಗಣೇಶ್ ಹೊರತಟ್ನಾಳ, ನಗರ ಘಟಕ ಅಧ್ಯಕ್ಷರಾದ ರಮೇಶ್ ಕವಲೂರ್ ,   ಕನಕ ಮೂರ್ತಿ ಚಲವಾದಿ, ಶ್ರೀಮತಿ ಕೀರ್ತಿ ಪಾಟೀಲ್,   ದೇವರಾಜ್ ಹಾಲಸಮುದ್ರ,   ಸಂಗಮೇಶ ಹಿರೇಮಠ, ಅನೇಕ ಉಪಸ್ಥಿತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!