ಅಸಾಹಿತಿಗೆ ಅಧಿಕಾರ ಕೊಡಬಹುದಾದರೆ, ಸಮ್ಮೇಳನಾಧ್ಯಕ್ಷತೆ ಯಾಕಿಲ್ಲ?
ಕೊಪ್ಪಳ: ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರನ್ನು ಕನ್ನಡ ಕಟ್ಟುವರಿರಲಿ ಅದರಿಂದ ಯಾವುದೇ ತೊಂದರೆ ಇಲ್ಲ, ಹಾಗೆ ನೋಡಿದರೆ ಸಾಹಿತಿ ಸ್ವಂತಕ್ಕೆ ಬರೆಯುತ್ತಾನೆ, ಕನ್ನಡ ಕಟ್ಟುವ ವ್ಯಕ್ತಿ ಇಡೀ ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಲೋಕಕ್ಕೆ ಕೆಲಸ ಮಾಡುತ್ತಾನೆಯಾದ್ದರಿಂದ ಅಸಾಹಿತಿ ಆದರೂ ಕನ್ನಡ ಸಂಘಟಕರಿಗೆ ಅವಕಾಶ ಸಿಗಲಿ ಎಂದು ಕಸಾಪ ಆಜೀವ ಸದಸ್ಯ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಹೆಸರು ಹೇಳುವದು ಸಾಹಿತ್ಯ ಆದರೆ ಅಲ್ಲಿ ಈಗ ರಾಜಕೀಯ ಮಿತಿಮೀರಿದೆ, ಜಾತಿಯ ಜಾಢ್ಯ ಸಾಮಾನ್ಯ ಜನರಿಗಿಂತ ಜಾಸ್ತಿ ಇದೆ. ಒಬ್ಬ ನಿಜವಾದ ಸಂಘಟಕ ಅಹಿಂದ ಸಮುದಾಯದಿಂದ ಚುನಾವಣಾ ಕಣದಲ್ಲಿ ಇದ್ದರೆ ಅವರನ್ನು ನಾಯಿಗಿಂತ ಕೆಟ್ಟದಾಗಿ ನೋಡಲಾಗುತ್ತದೆ, ಮಾಧ್ಯಮಗಳು ಸಹ ಅವರನ್ನು ಬೆಂಬಲಿಸುವದಿಲ್ಲ ಎಂಬುದು ಸತ್ಯ. ಅದನ್ನು ಒಪ್ಪಿಕೊಳ್ಳುವ ಮನಸ್ಸನ್ನು ಹೊಂದಲಿ ಆಗ ಬದಲಾವನೆ ತರಬಹುದು.
ಸಾಹಿತ್ಯ ರಚನೆಯ ಮುಖ್ಯ ಉದ್ದೇಶ ಒಂದು ಪ್ರೀತಿಯ ಬೆಸುಗೆ ಇನ್ನೊಂದು ಬಹುಮುಖ್ಯ ಆಯಾಮ ಸಮಾನತೆ, ಸಹಬಾಳ್ವೆ, ಸದುದ್ದೇಶ, ಶಾಂತಿ ನೆಲೆ. ಆದರೆ ಅದೆಲ್ಲವೂ ಈಗ ಕೇವಲ ಪುಸ್ತಕದ ಬದನೆಕಾಯಿ ಎನ್ನುವ ರೀತಿ ಇದೆ.
ಸಾಹಿತ್ಯ ಮುಖ್ಯ ಎನ್ನುವದಾದರೆ ಪರಿಷತ್ತಿನ ಅಧ್ಯಕ್ಷ ಕಾರ್ಯದರ್ಶಿ ಹುದ್ದೆ ಆಯ್ಕೆಗೆ ಮಾನದಂಡ ರಚಿಸಿರಿ. ಚುನಾವಣೆ ಪೂರ್ವದಲ್ಲಿ ಒಂದು ಸ್ಪರ್ಧೆ ಅಥವಾ ಪರೀಕ್ಷೆ ಏರ್ಪಡಿಸಿರಿ. ಅಲ್ಲಿ ಒಂದು ಪ್ರಬಂಧ, ಲೇಖನ, ವರದಿ, ವ್ಯಕ್ತಿ ಚಿತ್ರ ಬರೆಯಲು ಹೇಳಿ. ಪಾಸಾದವರಿಗೆ ಚುನಾವಣೆ ನಿಲ್ಲಲು ಅವಕಾಶ ಕೊಡಿ. ಇಲ್ಲವಾದರೆ ಅಲ್ಲಿರುವ ರಾಜಕೀಯದ ಬಗ್ಗೆ ಮಾತನಾಡುವದನ್ನು ಬಿಟ್ಟು ಕೇವಲ ಮೂರು ದಿನದ ಸರಕಾರಿ ಹಣದ ಸಮ್ಮೇಳನದ ಕುರಿತು ವಿಪರೀತ ಚರ್ಚೆ ಅನಗತ್ಯ. ಇನ್ನು ಪರಿಷತ್ತಿಗೆ ಅಥವಾ ಸಮ್ಮೇಳನಾಧ್ಯಕ್ಷತೆಗೆ ಹಾಲಿ ಸರಕಾರಿ ನೌಕರರಿಗೆ ಅವಕಾಶ ಕೊಡಬಾರದು. ಒಂದೋ ಅವರು ತಮ್ಮ ನೌಕರಿಗೆ ಇಲ್ಲವೋ ಆಯ್ಕೆಯಾದ ಹುದ್ದೆಗೆ ಅನ್ಯಾಯ ಮಾಡುವದು ಶತಸಿದ್ಧ. ಇದನ್ನು ಕೂಡಲೇ ಪರಿಷತ್ ನಿಯಮದಲ್ಲಿ ತರಬೇಕು ಎಂದು ಮಂಜುನಾಥ ಜಿ. ಗೊಂಡಬಾಳ ಒತ್ತಾಯಿಸಿದ್ದಾರೆ.
Comments are closed.