ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

0

Get real time updates directly on you device, subscribe now.

 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ದಿಡ್ಡಿಕೇರಿಯ ಅಲ್ಪಸಂಖ್ಯಾತರ ಮೌಲಾನ ಆಜಾದ ಮಾದರಿ ಶಾಲೆಯಲ್ಲಿ ಖಾಲಿ ಇರುವ ಗಣಿತ ವಿಷಯ ಶಿಕ್ಷಕರ-1 ಹುದ್ದೆ, ಇಂಗ್ಲೀಷ್ ವಿಷಯ ಶಿಕ್ಷಕರ-1 ಹುದ್ದೆ ಹಾಗೂ ಉರ್ದು ವಿಷಯ ಶಿಕ್ಷಕರ-1 ಹುದ್ದೆಗೆ ಕಾರ್ಯನಿರ್ವಹಿಸಲು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ..
ಗಣಿತ ವಿಷಯಕ್ಕೆ ಬಿಎಸ್ಸಿ/ಬಿ.ಎಡ್ ಹಾಗೂ ಇಂಗ್ಲೀಷ್ ಮತ್ತು ಉರ್ದು ವಿಷಯಗಳಿಗೆ ಬಿ.ಎ/ಬಿ.ಎಡ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ನೇರವಾಗಿ ಅಲ್ಪ ಸಂಖ್ಯಾತರ ಮೌಲಾನ ಆಜಾದ ಮಾದರಿ ಪದವಿ ಪೂರ್ವ ಕಾಲೇಜನಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ತಮ್ಮ ಎಲ್ಲಾ ದಾಖಲಾತಿಗಳೊಂದಿಗೆ ಅಕ್ಟೋಬರ್ 24 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಅಲ್ಪ ಸಂಖ್ಯಾತರ ಮೌಲಾನ ಆಜಾದ ಮಾದರಿ ಶಾಲೆಯ ದೂ.ಸಂ: 9019755641 ಗೆ ಸಂಪರ್ಕಿಸಬಹುದಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Get real time updates directly on you device, subscribe now.

Leave A Reply

Your email address will not be published.

error: Content is protected !!