ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ : ರಸ್ತೆ ಬದಿಗೆ ನುಗ್ಗಿದ ಬಸ್
ಕೊಪ್ಪಳ : ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಬದಿಗೆ ನುಗ್ಗಿದ ಘಟನೆ ತಾಲೂಕಿನ ಕರ್ಕಿಹಳ್ಳಿ ಹತ್ತಿರ ಇಂದು ಮಧ್ಯಾಹ್ನ ನಡೆದಿದೆ.
ಎಂದಿನಂತೆ ಇಂದು ಕೊಪ್ಪಳದಿಂದ ಕರ್ಕಿಹಳ್ಳಿಗೆ ಬಸ್ ಬರುತ್ತಿತ್ತು, ಕರ್ಕಿಹಳ್ಳಿಗೆ ತೆರಳುವ ಮುನ್ನ ಮಾರ್ಗ ಮಧ್ಯೆ ಘಟನೆ ನಡೆದಿದೆ.
ಈ ಘಟನೆಯಲ್ಲಿ ಅದೃಷ್ಟವಷಾತ್ ಎಲ್ಲರ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ್ದು, ಬಸ್ ರಸ್ತೆ ಬದಿಗೆ ನುಗ್ಗಿದೆ ಎಂದು ತಿಳಿದು ಬಂದಿದೆ.
ರಸ್ತೆ ದುರಸ್ಥಿಗೆ ಆಗ್ರಹ : ಮತ್ತೊಂದೆಡೆ ಕರ್ಕಿಹಳ್ಳಿ-ಹಿರೇಬಗನಾಳ, ಕುಣಿಕೇರಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಯಾವೊಬ್ಬ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ತಲೆಕೆಡಿಸಿಕೊಂಡಿಲ್ಲ. ಈ ಭಾಗದಲ್ಲಿ ಗ್ರಾಮಸ್ಥರು ಸಾಕಷ್ಟು ಬಾರಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ರಸ್ತೆ ದುರಸ್ತಿಗೊಳಿಸಬೇಕಿದೆ.
Comments are closed.