ಟಿಪ್ಪು ಸುಲ್ತಾನ್ ಜಯಂತೋತ್ಸವ ಅದ್ದೂರಿಯಾಗಿ ಆಚರಿಸೋಣ – ಬಾಬು ಸಾಬ್ ಮಕಾಂದಾರ್
ಕೊಪ್ಪಳ : ಟಿಪ್ಪು ಸುಲ್ತಾನ್ ಜಯಂತೋತ್ಸವ ಅದ್ದೂರಿಯಾಗಿ ಆಚರಿಸೋಣ ಎಂದು ಕೊಪ್ಪಳ ಮುಸ್ಲಿಮ್ ಪಂಚ್ ಕಮಿಟಿಗಳ ಒಕ್ಕೂಟದ ಅಧ್ಯಕ್ಷ ಬಾಬು ಸಾಬ್ ಮಕಾಂದಾರ್ ಹೇಳಿದರು.
ನಗರದ ಮರ್ದಾನ್ ಎ ಗೈಬ್ ದರ್ಗಾದ ಭವನದಲ್ಲಿ ಟಿಪ್ಪು ಸುಲ್ತಾನ್ ಜಯಂತೋತ್ಸವ ಆಚರಣೆಯ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಾಬು ಸಾಬ್ ಮಕಾಂದಾರ್ ಮುಂದುವರೆದು ಮಾತನಾಡಿ ಹುಲಿಯಂತೆ ಜೀವಿಸಿದ ಟಿಪ್ಪು ಸುಲ್ತಾನ್ ರವರ ಜನ್ಮ ದಿನ ಆಚರಣೆ ಇಲ್ಲಿ ಸೇರಿದ ನೀವೆಲ್ಲರೂ ಕಾರ್ಯಕ್ರಮ ಹುಲಿಯಂತೆ ಸಿದ್ದತೆ ನಡೆಸಿ ಯಶಸ್ವಿಗೊಳಿಸಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ದೇಶವನ್ನು ಅನೇಕ ಮುಸ್ಲಿಮ್ ರಾಜರು ಆಳಿದರು, ಅವರೆಲ್ಲರನ್ನೂ ಬಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ,ಜಾತಿ ಭೇದ ಇಲ್ಲದೆ, ಪಕ್ಷಪಾತ ಮಾಡದೆ ಸರ್ವ ಧರ್ಮದವರಿಗೂ ಒಳ್ಳೆಯ ಆಡಳಿತ ನೀಡಿದ್ದು, ಮಹತ್ತರ ಸಾಧನೆಗಳನ್ನು ಮಾಡಿರುವ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ನಾಡಿನ ಕನ್ನಡಿಗ ಟಿಪ್ಪು ಸುಲ್ತಾನ್ ರವರ ಜಯಂತೋತ್ಸವ ಆಚರಣೆಯನ್ನು ಅಪವಾದ ಬಾರದಂತೆ ಎಲ್ಲರೂ ಶಿಸ್ತು ಬದ್ಧವಾಗಿ ರಾಜ್ಯಕ್ಕೆ ಮಾದರಿಯಾಗುವಂತೆ ಆಚರಿಸಿ,ಎಂಟು ನೂರು ವರ್ಷಗಳಿಗೂ ಹೆಚ್ಚು ಕಾಲ ಭಾರತ ದೇಶವನ್ನು ಆಳಿದ ಮುಸ್ಲಿಮ್ ರಾಜರುಗಳು ಈ ದೇಶಕ್ಕೆ ವಿಶ್ವವಿದ್ಯಾಲಯಗಳು, ಕಾಲೇಜುಗಳು ನೀಡದೆ ಇರುವುದರಿಂದ ಇವತ್ತು ನಮ್ಮಲ್ಲಿ ಶಿಕ್ಷಣದ ತುಂಬಾ ಕೊರತೆ ಇದೆ, ಬರುವ ಪೀಳಿಗೆಗಾಗಿ ಈಗಿನ ಮುಖಂಡರಾದರೂ ಶಿಕ್ಷಣ ಸಂಸ್ಥೆಗಳನ್ನು ತೆರೆದು ಪ್ರತಿಯೊಬ್ಬರಿಗೂ ಶಿಕ್ಷಣ ಕೊಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ದೇವರಾಜ್ ಅರಸ್ ಕಾಲೋನಿಯ ಮುಸ್ಲಿಂ ಪಂಚ್ ಕಮಿಟಿ ಅಧ್ಯಕ್ಷ ಸೈಯ್ಯದ್ ನಾಸಿರ್ ಕಂಠಿ ಮಾತನಾಡಿ ಜಗತ್ತಿನಲ್ಲಿ ಮೊದಲ ಕ್ಷಿಪಣಿ ತಯಾರಿಸಿದ ಟಿಪ್ಪು ಸುಲ್ತಾನ್ ಜಯಂತೋತ್ಸವ ಸಂಭ್ರಮದಿಂದ ಆಚರಿಸೋಣ, ಯಾರೇ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿದರೆ ಅದರಲ್ಲೂ ನಾವೆಲ್ಲ ಭಾಗವಹಿಸುತ್ತೇವೆ,ನಮ್ಮಲ್ಲೂ ಎಲ್ಲರನ್ನೂ ಒಳಗೊಂಡು ಆಚರಣೆ ಮಾಡೋಣ ಎಂದು ಹೇಳಿದರು.
ಹಝರತ್ ಟಿಪ್ಪು ಸುಲ್ತಾನ್ ಜಯಂತೋತ್ಸವ ಆಚರಣೆ ವೇದಿಕೆಯ ಮುಖ್ಯಸ್ಥ ಅಬ್ದುಲ್ ಖೈಯ್ಯೂಮ್ ಬಳ್ಳಾರಿ ಮಾತನಾಡಿ ಭಾರತವನ್ನು ಸ್ವಾತಂತ್ರ್ಯ ದೇಶದ ಕನಸು ಕಂಡ ಮೊಟ್ಟ ಮೊದಲ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಹುಲಿ ಜಯಂತಿಯನ್ನು ಸಭೆಯಲ್ಲಿ ಸೇರಿದ ತಾವೆಲ್ಲರೂ ಹುಲಿಗಳಂತೆ ಆಚರಿಸಬೇಕು, ಶೀಘ್ರದಲ್ಲೇ ಟಿಪ್ಪು ಸುಲ್ತಾನ್ ಜಯಂತೋತ್ಸವ ಕಾರ್ಯಕ್ರಮದ ಸ್ಥಳ
ಹಾಗೂ ದಿನಾಂಕ ನಿಗದಿಪಡಿಸಲಾಗುತ್ತದೆ ಎಂದು ಹೇಳಿದರು.
ಪಲ್ಟನ್ ಬಡಾವಣೆಯ ಪೀರ್ ಪಾಷಾ ಖಾದ್ರಿ ಮಸೀದಿಯ ಅಧ್ಯಕ್ಷ ಗೈಬು ಸಾಬ್ ಚಟ್ನಿ. ಹಝರತ್ ಗಂಜೆ ಶಹೀದ್ ಬಾಬಾ ದರ್ಗಾ ಕಮಿಟಿಯ ಅಧ್ಯಕ್ಷ ಸೈಯ್ಯದ್ ಮಹೆಬೂಬ್ ಮಚ್ಚಿ. ಅಲ್ ಮದತ್ ಎಜುಕೇಶನ್ ಎಜುಕೇಶನ್ ಆ್ಯಂಡ್ ವೆಲ್ಫೇರ್ ಸಂಸ್ಥೆಯ ಮುಖಂಡ ಸಿರಾಜ್ ಕೋಲ್ಕಾರ್ ಮುಂತಾದವರು ಕಾರ್ಯಕ್ರಮಕ್ಕೆ ಬೆಂಬಲಿಸಿ ಮಾತನಾಡಿದರು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ತಾಲೂಕಾ ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ. ಮುಖಂಡ ಬಶೀರ್ ಅಹಮದ್ ದಫೇದಾರ್ ಟೈಲರ್. ಅಯ್ಯುಬ್ ಬಹದ್ದೂರ ಖಾನ್. ಶ್ರೀಶೈಲ್ ನಗರದ ಮುಸ್ಲಿಮ್ ಪಂಚ್ ಕಮಿಟಿಯ ಕಾರ್ಯದರ್ಶಿ ಹಝರತ್ ಅಲಿ. ರಿಯಲ್ pಎಸ್ಟೇಟ್ ಉದ್ಯಮಿ ನಝೀರ್ ಅಹ್ಮದ್ ಆದೋನಿ. ತೌಸೀಫ್ ಮಾಳೆಕೊಪ್ಪ. ಫಾರೂಕ್ ಅತ್ತಾರ್. ಅರ್ಷದ್ ಶೇಖ್. ಸೈಯ್ಯದ್ ಹಯಾತ್ ಪೀರ್ ಹುಸೇನಿ (ಶೇರು). ನಿಜಾಮುದ್ದೀನ್ ಮಾಳೆಕೊಪ್ಪ. ಸಲೀಮ್ ಖಾದ್ರಿ ಮುಂತಾದ ಅನೇಕರು ಭಾಗವಹಿಸಿದ್ದರು.
Comments are closed.