ಶ್ರೀ ದುರ್ಗಾದೇವಿ ರಥೋತ್ಸವಕ್ಕೆ ಗವಿಮಠ ಶ್ರೀಗಳು ಚಾಲನೆ 

Get real time updates directly on you device, subscribe now.

ಕೊಪ್ಪಳ : ನಗರದ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್ ಬಳಿ ಚಲವಾದಿ ಓಣಿಯಲ್ಲಿ ಶುಕ್ರವಾರ ಆಯುಧ ಪೂಜೆ ದಿನದಂದು ಶ್ರೀ ದುರ್ಗಾದೇವಿ ಪ್ರಥಮ ರಥೋತ್ಸವಕ್ಕೆ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು.  ನಂತರ ಆಶೀರ್ವಚನ ನೀಡಿ ದುರ್ಗಾ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಪ್ರಥಮ ರಥೋತ್ಸವದಲ್ಲಿ ಪಾಲ್ಗೊಂಡಿದ್ದೀರಿ ಎಲ್ಲರೂ ಸಂತೋಷದಿಂದ ಜಾತ್ರೆ ಮಾಡುವಂತೆ ಶುಭ ಹಾರೈಸಿದರು.
ದುರ್ಗಾದೇವಿ ರಥೋತ್ಸವದಲ್ಲಿ ಸಾವಿರಾರು ಜನ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಶ್ರೀಗವಿಸಿದ್ದೇಶ್ವರ ಅರ್ಬನ್ ಬ್ಯಾಂಕ್ ಅಧ್ಯಕ್ಷರಾದ ರಾಜಶೇಖರಗೌಡ ಆಡೂರು,ಓಣಿಯ ಮುಖಂಡರಾದ ಗವಿಸಿದ್ದಪ್ಪ ಬೆಲ್ಲದ,ಸಿದ್ದರಾಮಪ್ಪ  ಹೊಸಮನಿ,ಜಗದೀಶ್ ಚಲವಾದಿ,ಹನುಮಂತಪ್ಪ ಬಂಗಾಳಿ ಗಿಡದ,ಗವಿಸಿದ್ದಪ್ಪ ಚಲವಾದಿ, ಸೇರಿದಂತೆ ಓಣಿಯ ಗುರು ಹಿರಿಯರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!