ಕಾಂಗ್ರೆಸ್ ಮುಖಂಡ , ಉದ್ಯಮಿ ಅರ್ಜುನ್ ಸಾ ಕಾಟ್ವಾ ಇನ್ನಿಲ್ಲ

Get real time updates directly on you device, subscribe now.

ಕೊಪ್ಪಳ : ನಗರದ ಉದ್ಯಮಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಅರ್ಜುನ್ ಕಾಟ್ವಾ ದುರಂತ ಅಂತ್ಯ ಕಂಡಿದ್ದಾರೆ.   ನಿನ್ನೆ ಸಂಜೆ ಕೊಪ್ಪಳದ ಹುಲಿ ಕೆರೆಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.

ಕಾಂಗ್ರೆಸ್ನ ಸಕ್ರಿಯ ಕಾರ್ಯಕರ್ತರಾಗಿದ್ದ ಅರ್ಜುನ್ ಸರ್ ಸಾಕಷ್ಟು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ಸಹ ತೊಡಗಿಸಿಕೊಂಡಿದ್ದರು. ರೈತರು ಅಪಾರ ಕುಟುಂಬವನ್ನು ಬಂದು ಬಳಗವನ್ನು ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಈ ರೀತಿಯಿದೆ.

ಇಂದು ದಿನಾಂಕ: 08-10-2024 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿದಾರರಾದಸಂಜಯ ತಂದೆ ಅರ್ಜುನಸಾ ಕಾಟಾವ ವ; 35 ಜಾ; ಕ್ಷತ್ರೀಯ [ಸಾವುಜಿ] ಉ:ವ್ಯಾಪಾರ ಸಾ॥ ಎಲ್.ಐ.ಸಿ ಹತ್ತಿರ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ದೂರುದಾರರ ತಂದೆಯು ಇತ್ತಿಚಿಗೆ ವಯೊ ಖಾಯಿಲೆ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಈ ಬಗ್ಗೆ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿದ್ದು, ಆದರೆ ಗುಣಮುಖರಾಗಿರಲಿಲ್ಲ. ಆದ್ಯಾಗೂ ಸಹ ದೂರುದಾರರ ತಂದೆಯು ಆಗಾಗ ಮನೆಯಿಂದ ಹೊರಗಡೆ ಹೋಗಿ ದಿನಸಿ ಮತ್ತು ಇತರೇ ಸಾಮಾನುಗಳನ್ನು ಮನೆಗೆ ತರುತ್ತಿದ್ದರು. ಅದೇ ರೀತಿ ಇಂದು ದಿನಾಂಕ; 08-10-2024 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ದೂರುದಾರರ ತಂದೆಯು ಕೊಪ್ಪಳ ನಗರದಲ್ಲಿ ಹೋಗಿ ಬರುತ್ತೆನೆಂದು ಹೇಳಿ ಹೋಗಿದ್ದು, ನಂತರ ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ದೂರುದಾರರ ತಂದೆಯು ತನ್ನ ಮೊಬೈಲ ಸ್ವಿಚ್ಚಾಫ್ ಮಾಡಿಕೊಂಡಿದ್ದು ದೂರುದಾರರು ಮತ್ತು ದೂರುದಾರರ ತಮ್ಮ ಇಬ್ಬರು ಕೂಡಿ ತಮ್ಮ ತಂದೆಯನ್ನು ನಗರದಲ್ಲಿ ಇತರೇ ಕಡೆಗೆ ಹೋಗಿ ಹುಡಕಾಡಿದ್ದು ನಂತರ ಸಂಜೆ 7-15 ಗಂಟೆಯ ಸುಮಾರಿಗೆ ಕೊಪ್ಪಳ ನಗರದ ಹುಲಿಕೆರೆಯಲ್ಲಿ ದೂರುದಾರರ ತಂದೆಯ ಶವವು ಕಂಡುಬಂದಿದ್ದು, ದೂರುದಾರರ ತಂದೆಯು ಮಾನಸಿಕವಾಗಿ ಕುಗ್ಗಿ, ಹುಲಿಕೆರೆಯಲ್ಲಿ ಧುಮಕಿ ಮೃತಪಟ್ಟಿದ್ದು, ಸದರಿ ದೂರುದಾರರ ತಂದೆಯ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ ಕಾರಣ ಮುಂದಿನ ಕ್ರಮಜರುಗಿಸಬೇಕೆಂದು ನೀಡಿದ ದೂರಿನ ಸಾರಾಂಶ ಮೇಲಿಂದ ಠಾಣಾ ಯುಡಿಆರ್ ನಂ 29/2024 ಕಲಂ 194 ಬಿ.ಎನ್‌ಎಸ್.ಎಸ್ ರೀತ್ಯಾ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Get real time updates directly on you device, subscribe now.

Comments are closed.

error: Content is protected !!