14 ವರ್ಷಗಳ ಹಿಂದೆ ಜೈಲಿನಿಂದ ಪರಾರಿಯಾಗಿದ್ದ ಆರೋಪಿಯ ಪತ್ತೆ

Get real time updates directly on you device, subscribe now.

:

ಗಂಗಾವತಿ:  ಕೊಪ್ಪಳ ಜಿಲ್ಲೆ, ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ.31/2009 ಕಲಂ 392, 397 ಐ.ಪಿ.ಸಿ. ಹಾಗೂ 25 (ಬಿ),3 & 7 ಆರ್ಮ ಆ್ಯಕ್ಟ್ 1959 ಕಾಯ್ದೆ ಪ್ರಕರಣದಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಅಬೀದಖಾನ್ ಸಲ್ಮಾನಖಾನ್, ಅವೀದ್ ತಂದೆ ಮುರಖಾನ ವಯ-32ವರ್ಷ ಸಾ:ಬರಿಸ್ತಾ, ಜಿ: ಪ್ರತಾಪಗಡ್ (ಯು.ಪಿ) ಇವನು 2010ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದು, ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 87/2010 ಕಲಂ 224 ಸಂಗಡ 34 ಐಪಿಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿ ಪರಾರಿಯಾದ ಆಪಾದಿತರ ಪತ್ತೆ ಕುರಿತು ವಿಶೇಷ ಪತ್ತೆ ತಂಡ ರಚಿಸಲಾಗಿತ್ತು.
ಪರಾರಿ ಇದ್ದ ವನ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದಾಗ ಆಪಾದಿತನು ಉತ್ತರ ಪ್ರದೇಶ ರಾಜ್ಯದ ಭದ್ವೀ ಪೊಲೀಸ್ ಠಾಣೆಯ ಗುನ್ನೆ ನಂ- 156/2016 ಕಲಂ:395, 397, 328 ಐಪಿಸಿ ಪ್ರಕರಣದಲ್ಲಿ ದಸ್ತಗಿರಿಯಾಗಿ ಉತ್ತರ ಪ್ರದೇಶದ ರಾಯಬರೇಲಿಯ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಮೇರೆಗೆ ಸದರಿಯವನ ಮೇಲೆ ಬಾಡಿ ವಾರೆಂಟ್ ಪಡೆದು ದಿನಾಂಕ: 05-10-2024 ರಂದು 8 ಗಂಟೆಗೆ ರಾಯಬರೇಲಿ ತಲುಪಿ ಅಲ್ಲಿಯ ಜಿಲ್ಲಾ ಕಾರಾಗೃಹದಿಂದ ವಶಕ್ಕೆ ಪಡೆದುಕೊಂಡು ಅಗತ್ಯ ಕಾನೂನು ಪ್ರಕ್ರಿಯೆ ಜರುಗಿಸಿ ಆಪಾದಿತನನ್ನು ಗಂಗಾವತಿಗೆ ಕರೆದುಕೊಂಡು ಬಂದಿದ್ದು ಇರುತ್ತದೆ.ಸುಮಾರು 14 ವರ್ಷಗಳ ಹಿಂದೆ ಜೈಲಿನಿಂದ ಪರಾರಿಯಾಗಿದ್ದ ಆರೋಪಿಯ ಪತ್ತೆ ಕುರಿತು ಹೇಮಂತ್ ಕುಮಾರ್ ಆರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು,ಮತ್ತು ಸಿದ್ದಲಿಂಗಪ್ಪಗೌಡ ಪಾಟೀಲ್ ಡಿ.ವೈಎಸ್.ಪಿ. ಗಂಗಾವತಿ ರವರ ಮಾರ್ಗದರ್ಶನದಲ್ಲಿ ಪ್ರಕಾಶ ಮಾಳಿ ಪಿಐ ಗಂಗಾವತಿ ನಗರ ಠಾಣೆ ರವರ ನೇತೃತ್ವದಲ್ಲಿ ಆಪಾದಿತನನ್ನು ಕರೆತರಲು ಹೊರರಾಜ್ಯಕ್ಕೆ ಹೋಗಿದ್ದ ಅಜೀಜಸಾಬ ಎ.ಎಸ್.ಐ, ಶಿವಶರಣ ಎ.ಎಸ್.ಐ, ಮರಿಶಾಂತಗೌಡ, ವಿಶ್ವನಾಥ ಗಂಗಾವತಿ ನಗರ ಪೊಲೀಸ್ ಠಾಣೆ ರವರಿಗೆ ಡಾ: ರಾಮ್ ಎಲ್. ಅರಸಿದ್ದಿ, ಪೊಲೀಸ್ ಅಧೀಕ್ಷಕರು, ಕೊಪ್ಪಳ, ರವರು ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿರುತ್ತಾರೆ.

Get real time updates directly on you device, subscribe now.

Comments are closed.

error: Content is protected !!