ಶ್ರೀಮತಿ ರುದ್ರಮ್ಮ ಹಾಸಿನಾಳರವರ ೨ ಕೃತಿಗಳ ಲೋಕಾರ್ಪಣೆ ಸಮಾರಂಭ
ಗಂಗಾವತಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗಂಗಾವತಿ, ಇವರಿಂದ ಅಕ್ಟೋಬರ್-೦೬ ರವಿವಾರ ಬೆಳಿಗ್ಗೆ ೧೦:೩೦ ಗಂಟೆಗೆ ಶ್ರೀಮತಿ ರುದ್ರಮ್ಮ ಹಾಸಿನಾಳರವರ ಬಸವ ಬೆಳಕಿನಲ್ಲಿ ಕವನ ಸಂಕಲನ ಹಾಗೂ ವಚನ ಹೊಳಹು ಭಾಗ-೨ ಈ ೦೨ ಕೃತಿಗಳ ಬಿಡುಗಡೆ ಸಮಾರಂಭವು ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಕುಷ್ಟಗಿಯ ಮಾಜಿ ಶಾಸಕರಾದ ಕೆ. ಶರಣಪ್ಪರವರು ಆಗಮಿಸಲಿದ್ದು, ಕೃತಿಗಳ ಲೋಕಾರ್ಪಣೆಯನ್ನು ಲಿಂಗಸ್ಗೂರಿನ ವಚನ ಚಿಂತಕರಾದ ಡಾ. ಗಂಗಮ್ಮ ಲಿಂಗಣ್ಣ ಸತ್ಯಂಪೇಟೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷರಾದ ಶರಣೇಗೌಡ ಪೊಲೀಸ್ ಪಾಟೀಲ್ ವಹಿಸಲಿದ್ದಾರೆ.
ಬಸವ ಬೆಳಕಿನಲ್ಲಿ ಕವನ ಸಂಕಲನ ಕೃತಿ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಸದಸ್ಯರಾದ ಅಜಮೀರ್ ನಂದಾಪುರ ಹಾಗೂ ಮತ್ತೊಂದು ಕೃತಿಯಾದ ವಚನ ಹೊಳಹು ಭಾಗ-೨ ವಚನ ವಿಶ್ಲೇಷಣೆ ಯ ಕುರಿತು ಸಿಂಧನೂರಿನ ಸರಕಾರಿ ಪದವಿ ಮಹಿಳಾ ವಿದ್ಯಾಲಯದ ಉಪನ್ಯಾಸಕರಾದ ಶ್ರೀಮತಿ ಕಟ್ಟಿ ವಿಜಯಲಕ್ಷ್ಮಿ ಗುರಿಕಾರ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಶರಣಬಸಪ್ಪ ಕೋಲ್ಕಾರ, ದಂತ ವೈದ್ಯರು ಹಾಗೂ ಸಾಹಿತಿಗಳಾದ ಡಾ|| ಶಿವಕುಮಾರ ಮಾಲಿಪಾಟೀಲ್, ಭಾಗವಹಿಸಲಿದ್ದು, ಕಸಾಪ ಗಂಗಾವತಿ ತಾಲೂಕ ಅಧ್ಯಕ್ಷರಾದ ಶ್ರೀನಿವಾಸ ಅಂಗಡಿ, ಹಾಗೂ ಕೃತಿಕಾರರಾದ ಶ್ರೀಮತಿ ರುದ್ರಮ್ಮ ಅಮರೇಶ ಹಾಸಿನಾಳ ಉಪಸ್ಥಿತರಿರಲಿದ್ದಾರೆ.
ಈ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಎಲ್ಲಾ ಸಾಹಿತ್ಯಾಸಕ್ತರು, ಕನ್ನಡ ಮನಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಸಾಪ ವಿನಂತಿಸಿವೆ.
Comments are closed.