ವಾರ್ತಾ ಇಲಾಖೆಯ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಕೊಪ್ಪಳದ ಇಬ್ಬರಿಗೆ ರಾಜ್ಯಮಟ್ಟದ ಬಹುಮಾನ
ಹಂಪಿ ಕನ್ನಡ ವಿವಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿರುವ ಕೊಪ್ಪಳ ತಾಲ್ಲೂಕಿನ ಗೊಂಡಬಾಳ ಗ್ರಾಮದ ಪ್ರವೀಣ್ ನಿಂಗಪ್ಪ ಕಿತ್ನೂರ್ ಅವರು ಬರೆದ ಗಾಂಧೀಜಿಯವರ ಸ್ವರಾಜ್ ಮತ್ತು ಆರ್ಥಿಕ ಚಿಂತನೆಗಳು ಪ್ರಬಂಧವು ವಾರ್ತಾ ಇಲಾಖೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಪದವಿ/ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಅದೇ ರೀತಿ ತುಮಕೂರು ವಿವಿಯ ಎಂ.ಎ.ಪತ್ರಿಕೋದ್ಯಮ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಕುಷ್ಟಗಿ ತಾಲ್ಲೂಕಿನ ಎಂ.ಗುಡದೂರ ಗ್ರಾಮದ ಶರಣಪ್ಪ ಅವರು ಬರೆದ “ದೇಶ ನಿರ್ಮಾಣದಲ್ಲಿ ಗಾಂಧೀಜಿಯವರ ಜಾತ್ಯಾತೀತ ನಿಲುವುಗಳು” ಪ್ರಬಂಧವು ದ್ವಿತೀಯ ಸ್ಥಾನ ಪಡೆದಿದೆ.
ಬೆಂಗಳೂರಿನ ವಾರ್ತಾಸೌಧದಲ್ಲಿ ಅಕ್ಟೋಬರ್ 2ರಂದು ನಡೆದ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕ್ರಮವಾಗಿ ತಲಾ 31 ಸಾವಿರ ರೂ. ಹಾಗೂ 21 ಸಾವಿರ ರೂ.ನಗದು ಹಾಗೂ ಪುರಸ್ಕಾರ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವಿಸಿದರು.
ಶಾಸಕ ರಿಜ್ವಾನ್ ಅರ್ಷದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ವಾರ್ತಾ ಇಲಾಖೆ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕಚಂದ್ರ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ ಅವರು ಇದ್ದರು.
Comments are closed.