ಕೊಪ್ಪಳ ತಾಲೂಕ ಭಾಗ್ಯನಗರದಲ್ಲಿ ನೂತನ ಯುವಕರ ಸೇರ್ಪಡೆ ಹಾಗೂ ಪದಾಧಿಕಾರಿಗಳ ಆಯ್ಕೆ
ಕೊಪ್ಪಳ,ಅ.04: ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ಶುಕ್ರವಾರದಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರ ಹೋರಾಟಗಳನ್ನು, ಕರವೇ ತತ್ವ-ಸಿದ್ಧಾಂತಗಳನ್ನು ಮೆಚ್ಚಿ, ಕರವೇ ನಗರ ಘಟಕಕ್ಕೆ ನೂತನ ಕಾರ್ಯಕರ್ತರ ಸೇರ್ಪಡೆ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಅವರು ಅಧ್ಯಕ್ಷತೆವಹಿಸಿ ಮಾತನಾಡಿ ತಮ್ಮ ಪಟ್ಟಣದಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಅಭಿವೃದ್ಧಿಪರ ಹೋರಾಟಗಳನ್ನು, ನಾಡು-ನುಡಿ, ಜಲ-ಗಡಿ, ಭಾಷೆಗೆ ಧಕ್ಕೆಯಾದಾಗ ಸಂಘಟನಾತ್ಮಕವಾಗಿ ಪ್ರತಿಭಟಿಸುವಲ್ಲಿ ಶ್ರಮವಹಿಸಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂತನ ನಗರ ಘಟಕದ ಅಧ್ಯಕ್ಷರಾಗಿ ವಿರೇಶ ಶೇಖರಪ್ಪ ಮುಂಡಾಸದ, ಉಪಾಧ್ಯಕ್ಷರಾಗಿ ದೇವೆಂದ್ರಪ್ಪ ಹಲಬಗರ, ಪ್ರಧಾನ ಕಾರ್ಯದರ್ಶಿಯಾಗಿ ಯಲ್ಲಪ್ಪ ಬಂಡಿ, ಕಾರ್ಯದರ್ಶಿಯಾಗಿ ಪ್ರಕಾಶ ಜೋಷಿ, ಸಂಘಟನಾ ಕಾರ್ಯದರ್ಶಿಯಾಗಿ ಸತೀಶ ಸಾವಜಿ, ಮಂಜುನಾಥ ಶೇಡದ, ವಿರೇಶ ಗೋಪಾಲಪ್ಪ ಮುಂಡಾಸದ ಆಯ್ಕೆಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಹನುಮಂತ ಬೆಸ್ತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಪಟ್ಟಣ ಪಂಚಾಯತ ಸದಸ್ಯರಾದ ಪರಶುರಾಮ ನಾಯಕ, ಮಾಜಿ ಸದಸ್ಯರಾದ ವಿಜಯ ಪಾಟೀಲ, ನಿವೃತ್ತ ಶಿಕ್ಷಕರಾದ ದೇವೆಂದ್ರಪ್ಪ ಚಿತ್ರಗಾರ, ಪಟ್ಟಣದ ಹಿರಿಯರಾದ ಹನುಮಂತ ಉಡುಪಿ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.