ಕ್ರೀಡೆಯು ಜೀವನದ ಅವಿಭಾಜ್ಯ ಅಂಗವಾಗಿದೆ:ಹೇಮಲತಾ ನಾಯಕ

0

Get real time updates directly on you device, subscribe now.


ಕೊಪ್ಪಳ: ಕ್ರೀಡೆ ಎಂಬುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಹೇಮಲತಾ ನಾಯಕ ಹೇಳಿದರು.
ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ತಾಲೂಕ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ,ಕ್ರೀಡೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದೆ.ಶಾಲಾ ಮಕ್ಕಳು ಕೂಡಾ ಕೇವಲ ಓದು-ಬರಹಕ್ಕೆ ಮಾತ್ರ ಸಿಮಿತವಾಗಿರಬಾರದು.ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಮಕ್ಕಳು ದೈಹಿಕವಾಗಿ ಸದೃಡವಾಗಿರುವುದರ ಜೊತೆಯಲ್ಲಿ ಮಾನಸಿಕವಾಗಿ ಕೂಡಾ ಸದೃಡಗೊಳಿಸುತ್ತದೆ.ತೀರ್ಪುಗಾರರರು ಕೂಡಾ ಉತ್ತಮ ಪ್ರತಿಭೆಯನ್ನು ಆಯ್ಕೆ ಮಾಡಬೇಕು ಅಂದಾಗ ಮಾತ್ರ ಅವರು ಮುಂದಿನ ಹಂತದ ಸ್ಪರ್ಧೇಯನ್ನು ಸರಿಯಾದ ರೀತಿಯಲ್ಲಿ ಎದುರಿಸುವ ಸಾಮರ್ಥವಿರುತ್ತದೆ.ಮಕ್ಕಳು ಸೋಲು-ಗೆಲುವುಗಳನ್ನು ಸಮಾನವಾದ ರೀತಿಯಲ್ಲಿ ಸ್ವೀಕರಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕ್ರಯ್ಯಾ.ಟಿ.ಎಸ್.ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ,ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಶಂಕರಗೌಡ ಮಾಲಿಪಾಟೀಲ,ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಾಕೀರ ಹುಸೇನ,ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಹೊಳಿಬಸಯ್ಯಾ,ಕಾರ್ಯದರ್ಶಿ ಬಾಳಪ್ಪ ಕಾಳೆ,ತಾಲೂಕ ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ,ಮಲ್ಲಪ್ಪ ಗುಡದನ್ನವರ,ಅನ್ನಪೂರ್ಣ ಅಸ್ಕಿ,ರಮೇಶ ಹಳ್ಳಿ ಮುಂತಾದವರು ಹಾಜರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: