ಇಂದು ಇನ್ನರ್ ವೀಲ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

Get real time updates directly on you device, subscribe now.

ಕುಷ್ಟಗಿ. ಜು.18; 2023-24 ನೇ ಅವಧಿಯ ಇನ್ನರ್ ವೀಲ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜು.19 ಬುಧವಾರ ಬೆಳಗ್ಗೆ 12:45 ಗಂಟೆಗೆ ಇಲ್ಲಿನ ಎನ್.ಸಿ.ಎಚ್ ಪ್ಯಾಲೇಸ್ ನಲ್ಲಿ ಆಯೋಜಿಸಲಾಗಿದೆ ಎಂದು ನೂತನ ಅಧ್ಯಕ್ಷೆ ಶಾರದಾ ಶೆಟ್ಟರ್ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಇನ್ನರ್ ವೀಲ್ ಕ್ಲಬ್ ಪಾಸ್ಟ್ ಡಿಸ್ಟಿಕ್ ಚೇರಮನ್ ಸವಿತಾ ಶಿವಕುಮಾರ ಅವರು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಶಾಸಕ ದೊಡ್ಡನಗೌಡ ಪಾಟೀಲ್, ಲಕ್ಷ್ಮೀ ದೇವಿ ಪಾಟೀಲ್, ಡಿಸ್ಟಕ್ ಎಡಿಟರ್ ಪಾರ್ವತಿ  ಪಳೂಟಿ, 2022-23 ಸಾಲಿನ ಅಧ್ಯಕ್ಷೆ ಸುಮಾ ಬ್ಯಾಳಿ, ಕಾರ್ಯದರ್ಶಿ ಗೌರಮ್ಮ ಕುಡತಿನಿ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನರ್ ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪಟ್ಟಿ ಅಧ್ಯಕ್ಷರಾಗಿ ಶಾರದಾ ಶೆಟ್ಟರ್, ಉಪಾಧ್ಯಕ್ಷರಾಗಿ ಸುವರ್ಣ ಬಳೂಟಗಿ, ಐ.ಪಿ.ಪಿ ಸುಮಾ ಬ್ಯಾಳಿ, ಕಾರ್ಯದರ್ಶಿಯಾಗಿ ವಂದನಾ ಗೋಗಿ, ಖಜಾಂಚಿಯಾಗಿ ಗೌರಮ್ಮ ಕುಡತಿನಿ, ಐಎಸ್ಓ ಗೌರಮ್ಮ ಅಂಗಡಿ, ಜಂಟಿ ಕಾರ್ಯದರ್ಶಿಯಾಗಿ ಶಿಲ್ಪಾ ಸುಂಕದ, ಎಡಿಟರ್ ಮೇಘಾ ದೇಸಾಯಿ, ಶಶಿಕಲಾ ಬಯ್ಯಾಪೂರ, ಪ್ರಭಾ ಬಂಗಾರಶೆಟ್ಟರ್, ಪಾರ್ವತಿ ಪಳೂಟಿ, ಡಾ.ವೇದಾ ಪಾಟೀಲ್, ಡಾ.ಕುಮದಾ ಪಲ್ಲೇದ, ಸುದೀಪ್ತಾ ಕಾಖಂಡಿಕಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: