ಕೊಪ್ಪಳಕ್ಕೆ ಸಿಎಂ ತುಂಗಭದ್ರಾ ಜಲಾಶಯಕ್ಕೆ ಭಾಗಿನ , ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭೇಟಿ, ಪರಿಶೀಲನೆ.
ಕೊಪ್ಪಳ : ಸೆಪ್ಟೆಂಬರ್ 22ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳಕ್ಕೆ ಭೇಟಿ ನೀಡಲಿದ್ದಾರೆ. ತುಂಗಭದ್ರಾ ಜಲಾಶಯಕ್ಕೆ ಭಾಗಿನ ಅರ್ಪಿಸಿ, ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕಳೆದ ಒಂದು ತಿಂಗಳದ ಹಿಂದೆ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಂ. 19 ರ ಚೈನ್ ಲಿಂಕ್ ಕಟ್ ಆಗಿ 60-70 ಟಿಎಂಸಿ ನೀರು ಡ್ಯಾಮ್ ನಿಂದು ಹರಿದು ರೈತರಲ್ಲಿ ಆತಂಕ ಮೂಡಿಸಿತ್ತು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಭೇಟಿ ನೀಡಿ ಕೂಡ ಪರಿಶೀಲನೆ ನಡೆಸಿ ಗೇಟ್ ಅಳವಡಿಸುವ ಕುರಿತು ಸಭೆಯನ್ನು ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸೀನಿಯರ್ ಇಂಜಿನಿಯರ್ ಕನ್ನಯ್ಯ ನಾಯ್ಡು ಅವರ ನೇತೃತ್ವದ ತಂಡ ತಾಂತ್ರಿಕ ಗೇಟ್ ಅಳವಡಿಕೆ ಮಾಡುವಲ್ಲಿ ಯಶಸ್ವಿ ಆಗಿತ್ತು.ದೇಶದಲ್ಲೇಡೆ ಈ ಕುರಿತು ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು.
ಮತ್ತೆ ಉತ್ತಮ ಮಳೆ ಆಗಿದ್ದರಿಂದ ಮತ್ತೆ ಡ್ಯಾಮ್ ತುಂಬಿದೆ. ಮಾನ್ಯ ಮುಖ್ಯಮಂತ್ರಿಗಳು ಹಿಂದೆ ಗೇಟ್ ಪರಿಶೀಲನೆಗೆ ಆಗಮಿಸಿದ್ದ ವೇಳೆ ಮತ್ತೆ ತುಂಗಭದ್ರಾ ಭದ್ರ ಡ್ಯಾಮ್ ತುಂಬುತ್ತೆ ನಾನೇ ಬಂದು ಭಾಗಿನ ಅರ್ಪಿಸುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದ್ದರೂ. ಅದರಂತೆ ಮಾನ್ಯ ಮುಖ್ಯಮಂತ್ರಿಗಳು ಸೆಪ್ಟೆಂಬರ್ 22ಕ್ಕೆ ಭಾಗಿನ ಅರ್ಪಿಸಲಿದ್ದಾರೆ.
ಕಾರ್ಮಿಕರಿಗೆ ಸನ್ಮಾನ : ಕ್ರಸ್ಟ್ ಗೇಟ್ ಅಳವಡಿಸುವಲ್ಲಿ ಶ್ರಮ ಪಟ್ಟಿರುವ 150ಕ್ಕೂ ಅಧಿಕ ಕಾರ್ಮಿಕರಿಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಅವರಿಗೆ ಸನ್ಮಾನ ನೆರವೇರಿಸುವುದರ ಮುಖಾಂತರ ಅವರ ಕಾರ್ಯಕ್ಕೆ ಗೌರವ ಸಲ್ಲಿಸಲಿದ್ದಾರೆ.
ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು : ಕೊಪ್ಪಳ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಮಾಡಿಸಲು ಜಿಲ್ಲೆಯ ನಾಯಕರು ತೀರ್ಮಾನಿಸಿದ್ದು ಅದರಂತೆ ಮುಖ್ಯಮಂತ್ರಿಗಳು ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಲಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳ : ಮುನಿರಬಾದ್ ನಲ್ಲಿರುವ ಪ್ರೌಢ ಶಾಲೆಯ ಆವರಣದಲ್ಲಿ.
ಮುತ್ತುರಾಜ್ ಹಾಲವರ್ತಿ
Comments are closed.