ಸಮಸ್ಯೆ ಪರಿಹಾರಕ್ಕೆ ಆತ್ಮಹತ್ಯೆ ಒಂದೇ ಕಾರಣವಲ್ಲ; ಪರಿಹಾರ ಇದ್ದೇ ಇರುತ್ತದೆ -ಡಾ. ಶಿವಾನಂದ ವ್ಹಿ.ಪಿ.
ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮದಲ್ಲಿ ಸಲಹೆ
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಅವರು ಮಾತನಾಡಿ, ಪ್ರತಿ ವರ್ಷ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ನಡೆಯುತ್ತದೆ. ಈ ವರ್ಷದ ಘೋಷವಾಕ್ಯ ಆತ್ಮಹತ್ಯೆಯ ನಿರೂಪಣೆಯನ್ನು ಬದಲಾಯಿಸೋಣ ಎಂಬುದಾಗಿದೆ. ಈ ಕಾರ್ಯಕ್ರಮದ ಉದ್ದೇಶ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟುವ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದಾಗಿದೆ ಎಂದು ತಿಳಿಸಿದರು.
ಆತ್ಮಹತ್ಯೆಯ ಘಟಣೆಗಳು ಬೆಳೆಯುತ್ತಿರುವ ಸಮಸ್ಯೆಯಾಗಿದೆ. ವರ್ಷದಿಂದ ವರ್ಷಕ್ಕೆ ಆಘಾತಕಾರಿ ಬೆಳವಣಿಗೆಯನ್ನು ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರಪಂಚದಲ್ಲಿ ಪ್ರತಿ 40 ಸೆಕೆಂಡ್‌ಗಳಿಗೆ ಒಬ್ಬರಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ 15-29 ವರ್ಷ ವಯಸ್ಸಿನ ಜನರ ಸಾವಿಗೆ ಆತ್ಮಹತ್ಯೆ ಪ್ರಮುಖ ಕಾರಣವಾಗಿದೆ. ಬಿಡುವಿಲ್ಲದ ಜೀವನ ಶೈಲಿಯ ಕಾರಣದಿಂದ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆ ಸಮಸ್ಯೆಗೆ ಮಾನಸಿಕ ರೋಗದ ತಜ್ಞರ ಬಳಿ ಭೇಟಿ ನೀಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಸಮಸ್ಯೆ ಪರಿಹಾರಕ್ಕೆ ಆತ್ಮಹತ್ಯೆ ಒಂದೇ ಕಾರಣವಲ್ಲ; ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ನಮ್ಮ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ಮಾನಸಿಕ ಕಿನ್ನತೆಯಿಂದ ಹೊರಬರಲು ಯಾವುದಾದರೂ ಒಂದು ಚಟುವಟಿಕೆಯಲ್ಲಿ ತೊಡಗಿರಬೇಕು. ಸಮಾಜದಲ್ಲಿ ಚಿಕ್ಕ-ಚಿಕ್ಕ ವಿಷಯಕ್ಕೂ ಆತ್ಮಹತ್ಯೆ ಪ್ರಸಂಗಗಳು ನಡೆಯುತ್ತವೆ. ಆತ್ಮಹತ್ಯೆ ಮಾಡಿಕೊಳ್ಳುವ ಮೂನ್ನ 02 ನಿಮಿಷ ನಮ್ಮ ಕುಟುಂಬದ ಬಗ್ಗೆ ಯೋಚಿಸಬೇಕು. ಒಬ್ಬಂಟಿಯಾಗಿರಬಾರದು. ಮಾನವ ಸಂಗಜೀವಿ, ಮಾನಸಿಕ ಕಿನ್ನತೆಯಿಂದ ಹೊರಬರಲು ಸಹದ್ಯೋಗಿಗಳ ಜೊತೆ ಬೆರೆಯುವುದು, ಸಂಗೀತ ಕೇಳುವುದು, ದಿನಾಲೂ ಬೆಳಿಗ್ಗೆ ಯೋಗಾಸನ, ದ್ಯಾನ ಮಾಡುವುದು, ಪೌಷ್ಠಿಕ ಆಹಾರ ಸೇವನೆ ಮುಂತಾದ ಒಳ್ಳೆಯ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಂಡು ಜೀವನ ಸಾಗಿಸಬೇಕು. ರೈತರಾಗಲಿ, ನಿರುದ್ಯೋಗಿಗಳಾಗಲಿ, ಕೌಟುಂಬಿಕ ಸಮಸ್ಯ ಉಳ್ಳವರು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ತಿಳಿಸಿದರು.
ಈ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಅರಿವು ಮೂಡಿಸುವ ಕಾರ್ಯಕ್ರಮಗಳಾಗಬೇಕು ಎಂದು ಸಲಹೆ ಮಾಡಿದರು.
ಡೆಂಗೆ ನಿಯಂತ್ರಣ, ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ, ಹದಿ-ಹರೆಯದವರ ಆರೋಗ್ಯದ ಮಹತ್ವ, ಪೋಷಣ್ ಮಾಸಾಚರಣೆ ಮತ್ತು ಮಂಕಿಪಾಕ್ಸ್ ಖಾಯಿಲೆ ನಿಯಂತ್ರಣ ಕುರಿತು ಇದೆ ವೇಳೆ ಸಲಹೆ ನೀಡಲಾಯಿತು.
ಎಸ್.ಟಿ.ಎಸ್ ಕೃಷ್ಣಾಜೀ ಅವರು ಕ್ಷಯರೋಗ ನಿರ್ಮೂಲನೆ ಮತ್ತು ಹೆಚ್.ಐ.ವಿ/ಏಡ್ಸ್ ನಿಯಂತ್ರಣ ಕುರಿತು ಪಿಪಿಟಿ ಮೂಲಕ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗುನ್ನಾಳ ಪಾ.ಆ.ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ.ದಯಾನಂದಸ್ವಾಮಿ, ಕಾಲೇಜಿನ ಪ್ರಾಂಶುಪಾಲರಾದ ರೇವಣಸಿದ್ದಯ್ಯ ಮಾಲಗಿತ್ತಿ, ವಿಭಾಗಾಧಿಕಾರಿಗಳಾದ ಲಕ್ಷö್ಮಣ ಕುಂಟೆ ಹಾಗೂ ಚಂದ್ರಶೇಖರ ಸುಂಕದ, ಕಚೇರಿ ಅಧೀಕ್ಷಕರಾದ ಕರಿಬಸಪ್ಪ, ಸಹ-ಉಪನ್ಯಾಸಕರು, ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಲ್ಲಯ್ಯ, ಶ್ರೀಮತಿ ಕಾವೇರಿ, ಸ.ಆ.ಅಧಿಕಾರಿಗಳಾದ ಶ್ರೀಮತಿ ಅನುಸುಯಾ, ಆಶಾ ಕಾರ್ಯಕರ್ತೆಯರು, ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.
Comments are closed.