ಅ.೧೨, ೧೩ ದೇಸಿ ಜಗಲಿ ಕಥಾಕಮ್ಮಟ ಗ್ರಾಮೀಣ ಪ್ರತಿಭೆಗಳ ಶೋಧನಾ ಶಿಬಿರ: ಪವನ ಕುಮಾರ್ ಗುಂಡೂರು

Get real time updates directly on you device, subscribe now.


ಗಂಗಾವತಿ: ವೀರಲೋಕ ಪುಸ್ತಕ ಸಂಸ್ಥೆಯು ಸಾಹಿತಿಗಳ ಸಂಖ್ಯೆ ವೃದ್ಧಿಸಲು ರಾಜ್ಯದಾದ್ಯಂತ ನಗರ ಸೇರಿದಂತೆ ಗ್ರಾಮೀಣ ಪ್ರತಿಭೆಗಳ ಶೋಧನೆ ನಡೆಸುತ್ತಿದ್ದು ಇದಕ್ಕೆ ಪೂರಕವಾಗಿ ಅಗಸ್ಟ್ ೧೨, ೧೩ ರಂದು ಇಲ್ಲಿನ ವಿದ್ಯಾನಗರದ ಅಮರಗಾರ್ಡನಲ್ಲಿ ಎರಡು ದಿನಗಳ ಕಾಲ ದೇಶಿ ಜಗಲಿ ಕಥಾ ಕಮ್ಮಟ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ಕಥಾ ಕಮ್ಮಟ ಸಂಚಾಲಕ ಪವನ್ ಕುಮಾರ್ ಗುಂಡೂರು ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಕಥೆ ಬರವಣಿಗೆಗೆ ಪೂರಕ ವಾತವರಣೆ ಇಲ್ಲದ ಕಾರಣ ಪ್ರತಿಭೆಳನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು, ಶಿಬಿರಾರ್ಥಿಗಳಿಗೆ ಕಥೆ ಬರೆಯುವ ಕುರಿತು ತರಬೇತಿ ಹಾಗು ಸಮರ್ಥ ವ್ಯಕ್ತಿಗಳಿಂದ ಉಪನ್ಯಾಸ ಇನ್ನಿತರ ಭಿನ್ನ ಕಾರ್ಯಕ್ರಮಗಳ ಮೂಲ ಆಸಕ್ತಿ ವೃದ್ಧಿಸಲಾಗುವುದು ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯರಾದ ಚಿದಾನಂದ ವಾಲಿಯವರು ಕಥಾ ಕಮ್ಮಟ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತರಾದ ಮಂಜುನಾಯಕ ಚಳ್ಳೂರು, ಕಥಾ ಕಮ್ಮಟದ ನಿರ್ದೇಶಕರಾಗಿ ಲಿಂಗರೆಡ್ಡಿ ಆಲೂರು, ಸಂಪನ್ಮೂಲ ವ್ಯಕ್ತಿಗಳಾಗಿ ಪತ್ರಕರ್ತ ಶರಣಪ್ಪ ಚಾಚಲಾಪುರ, ಅಕ್ಬರ್ ಸಿ ಕಾಲಿಮಿರ್ಚಿ, ಕಲಿಗಣನಾಥ ಗುಡುದೂರು, ಪ್ರವೀಣ್ ಪೊ.ಪಾಟೀಲ್ ಪಾಲ್ಗೊಳ್ಳುವರು ಎಂದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ್ ಅಂಗಡಿ ಮಾತನಾಡಿ, ವಿಶೇಷ ಉಪನ್ಯಾಸಕರಾಗಿ ಚನ್ನಬಸಪ್ಪ ಚಿಕಲರಾಗಿ ಭಾಗವಹಿಸುವರು, ಈ ಕಥಾ ಕಮ್ಮಟದಲ್ಲಿ ಪಾಲ್ಗೊಳ್ಳುವವರ ಅತ್ಯುತ್ತಮ ಕಥೆಗಳನ್ನು ಆಯ್ಕೆಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು, ಶಿಬಿರದಲ್ಲಿ ಪಾಲ್ಗೊಳ್ಳಲು ೧೮ ರಿಂದ ೩೫ ವಯೋಮಾನ ನಿಗದಿ ಮಾಡಲಾಗಿದ್ದು, ಗ್ರಾಮೀಣ ಪ್ರದೇಶದ ಕಥೆಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು, ಎರಡು ದಿನಗಳ ಕಾಲ ಶಿಬಿರ ನಡೆಸಲಾಗುತ್ತಿದ್ದು ೩೦ ಜನರಿಗೆ ಮಾತ್ರ ಶಿಬರದಲ್ಲಿ ಪಾಲ್ಗೊಳ್ಳಲು ಅವಕಾಶ ವಿದೆ, ಆಸಕ್ತರು ಪವನ್ ಕುಮಾರ್ ಗುಂಡೂರು ೯೯೮೬೬೨೧೮೮೦, ಶ್ರೀನಿವಾಸ್ ಅಂಗಡಿ ೯೯೦೨೪೭೫೧೭೩ ಹಾಗು ಮಮ್ತಾಜ್ ಬೇಗಂ ೯೯೮೬೬೬೬೦೭೫ ಈ ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಿದರು. ಈ ಸಂದರ್ಭದಲ್ಲಿ ಸಾಹಿತಿಳಾದ ಲಿಂಗರೆಡ್ಡಿ ಆಲೂರು, ಡಾ.ಅಮರೇಶ್, ಮಮತಾಜ್ ಬೇಗಂ ಇದ್ದರು.

Get real time updates directly on you device, subscribe now.

Comments are closed.

error: Content is protected !!