ತುಚ್ಛವಾಗಿ ಕಾಣುವ ಪೌರಾಯಕ್ತರ ವಿರುದ್ಧ ಉಗ್ರ ಹೋರಾಟ: ಜೆ. ಭಾರದ್ವಜ್

Get real time updates directly on you device, subscribe now.

ಗಂಗಾವತಿ: ದಶಕಗಳಿಂದಲೂ ನೆನೆಗುದಿಗೆ ಬಿದ್ದಿರುವ ಆಟೋ ನಗರದ ವಿನ್ಯಾಸ ಬದಲಾಯಿಸಿ ಪೌರಾಯುಕ್ತ ವಿರುಪಾಕ್ಷ ಮೂರ್ತಿ ೩೦ಕ್ಕು ಹೆಚ್ಚು ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಇರಾದೆ ಹೊಂದಿದ್ದಾರೆ ಎಂದು ಕಾರ್ಮಿಕ ಮುಖಂಡ ಜೆ.ಭಾರಧ್ವಜ್ ಅಕ್ರೋಶ ವ್ಯಕ್ತಪಡಿಸಿದರು.
ಅವರು ಸೋಮವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ೨೦೧೪ ರಲ್ಲಿದ್ದ ಡಿಸಿ ಮೋಹನ್ ಆದೇಶ ದಿಕ್ಕರಿಸಿ, ಮತ್ತೆ ಇತ್ತೀಚಿಗೆ ನ್ಯಾಯಾಲಯದ ನೀಡಿದ ನಿರ್ದೇಶನವನ್ನು ಕಡೆಗಣಿಸಿ ಪೌರಾಯುಕ್ತರು ಏಕಪಕ್ಷೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಈಗಾಗಲೆ ರಸ್ತೆಗೆ ಆಟೋ ನಗರದ ಕೆಲವರ ಪ್ಲಾಟ್‌ಗಳಲ್ಲಿನ ಸ್ಥಳ ಬಿಟ್ಟುಕೊಡಲಾಗಿದೆ ಮತ್ತೆ ನೀರಿನ ಟ್ಯಾಂಕ್ ಕಟ್ಟಲು ನಿವೇಶನ ಸ್ಥಳವಕಾಶ ಒದಗಿಸಲಾಗಿದೆ ಆದರೂ ನಗರಸಭೆ ಸದಸ್ಯರಿಗೆ ಇರುವ ಅಧಿಕಾರ ದಾಹದಿಂದಾಗಿ ಆಟೋ ನಗರದ ನಿವಾಸಿಗಳಿಗೆ ಪ್ಲಾಟ್ ದೊರೆಯುತ್ತಿಲ್ಲ ತೀವ್ರ ಸಂಕಷ್ಟದಲ್ಲಿರುವ ಈ ಜನರ ಒಳಿತಿಗಾಗಿ ಸ್ಥಳೀಯ ಶಾಸಕ ಜನಾರ್ದನರೆಡ್ಡಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕ್ರಮಕ್ಕೆ ಮುಂದಾಗಬೇಕೆಂದು ಭಾರದ್ವಜ್ ಒತ್ತಾಯಿಸಿದರು.
ಆಟೋ ನಗರ ಸಂಚಾಲಕ ದೊರೇರಾಜು ಮಾತನಾಡಿ, ಪೌರಾಯುಕ್ತ ವಿರುಪಾಕ್ಷ ಮೂರ್ತಿಯವರ ನಡೆಯನ್ನು ನಾವು ಖಂಡಿಸುತ್ತೇವೆ, ಕಾರ್ಮಿಕರಿಗೆ ಕಿಂಚತ್ತು ಬೆಲೆ ಕೊಡುವುದಿಲ್ಲ, ಕೀಳಾಗಿ ನೋಡುತ್ತಿರುವುದು ಖೇದಕರ, ದಶಕಗಳ ಹಿಂದೆ ನಾವು ಮುಕ್ಕುಂದಿ ಕುಟುಂಬದಿಂದ ಭೂಮಿ ಖರೀದಿಸಿ ಲೇಔಟ್ ಮಾಡಿಕೊಡಲು ನಗರಸಭೆಗೆ ರಿಜಿಸ್ಟರ್ ಮಾಡಿಕೊಡಲಾಗಿತ್ತು, ಕಾರ್ಮಿಕರೇ ಹಣ ಕೊಟ್ಟು ಭೂಮಿ ಖರೀದಿಸಿದ್ದು, ಆದರೆ ನಗರಸಭೆ ಪೌರಾಯುಕ್ತರು ಬದಲಾದಂತೆ ಮಾಹಿತಿ ಕೊರತೆಯಿಂದ ಮೆಕಾನಿಕ್‌ಗಳಿಗೆ ತುಂಬಾ ಸತಾಯಿಸುತ್ತಿದ್ದಾರೆ ೯೦ಕ್ಕು ಹೆಚ್ಚು ಕುಟುಂಬಗಳು ತುಂಬಾ ಕಷ್ಟದಲ್ಲಿ ಜೀವನ ನಡೆಸುತ್ತಿರುವ ಆಟೋ ನಗರದ ನಿವಾಸಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದು ಶೀಘ್ರ ಬಗೆಹರಿಸಿ ಕಾರ್ಮಿಕರು ಅಲ್ಲಿ ಜೀವಿಸಲು ಅನುವು ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮೆಕಾನಿಕ್ ಬಿ.ಶ್ರೀನಿವಾಸ್, ಬಿ.ಪ್ರಕಾಶ್, ಮೆಕಾನಿಕ್ ಲಾರಿ ಮೆಕಾನಿಕ್ ಹಾಗು ಭಾಷು ಟ್ರಾಕ್ಟರ್ ಇತರರಿದ್ದರು.

 

Get real time updates directly on you device, subscribe now.

Comments are closed.

error: Content is protected !!
%d bloggers like this: