ದಾಳಿಂಬೆ ಬೆಳೆಯನ್ನು ಕ್ಲಸ್ಟರ್ ಡೆವಲಪ್‌ಮೆಂಟ್ ಯೋಜನೆಯ ಅಡಿಯಲ್ಲಿ ಸೇರಿಸಲು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಕ್ಯಾವಟರ್

Get real time updates directly on you device, subscribe now.

ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ರನ್ನು ದೆಹಲಿಯಲ್ಲಿ ಬೇಟಿ ಮಾಡಿದ ಡಾ. ಬಸವರಾಜ್ ಎಸ್ ಕ್ಯಾವಟರ್

ಕೊಪ್ಪಳ ಜಿಲ್ಲೆಯ ದಾಳಿಂಬೆ ಬೆಳೆಯನ್ನು ಕ್ಲಸ್ಟರ್ ಡೆವಲಪ್‌ಮೆಂಟ್ ಯೋಜನೆಯ ಅಡಿಯಲ್ಲಿ ಸೇರಿಸಲು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಕೊಪ್ಪಳ ಜಿಲ್ಲೆಯು 5,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ದಾಳಿಂಬೆ ಬೆಳೆಯುತ್ತಿರುವುದನ್ನು ಗಮನಿಸಲಾಗಿದ್ದು.
ಭವಿಷ್ಯದಲ್ಲಿ ಇದು 15,000 ಹೆಕ್ಟೇರ್‌ಗೆ ತಲುಪುವ ನಿರೀಕ್ಷೆಯಿದೆ. ಈ ಮಹತ್ವದ ಕೃಷಿಯ ಹೊರತಾಗಿಯೂ, ಜಿಲ್ಲೆಯು ಸರಿಯಾದ ಕೃಷಿ ಪದ್ಧತಿಗಳ ಸೀಮಿತ ಲಭ್ಯತೆ ಮತ್ತು ಮಾರುಕಟ್ಟೆ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಸವಾಲುಗಳನ್ನು ಇಂದಿಗೂ ಎದುರಿಸುತ್ತಿವೆ.

ಕೊಪ್ಪಳ ಜಿಲ್ಲೆಯನ್ನು ಪ್ರಸ್ತುತ ದಾಳಿಂಬೆಯ ಕ್ಲಸ್ಟರ್ ಡೆವಲಪ್‌ಮೆಂಟ್ ಯೋಜನೆ (ಸಿಡಿಪಿ)ಯಲ್ಲಿ ಸೇರಿಸಲಾಗಿಲ್ಲ ಮತ್ತು ಅದರಿಂದ ಕಾರ್ಯಕ್ರಮದ ಅಡಿಯಲ್ಲಿ ಪ್ರೋತ್ಸಾಹ ಮತ್ತು ಸರಿಯಾದ ಬೆಂಬಲ ಬೆಲೆ ಕೂಡ ರೈತರಿಗೆ ಸಿಗುತ್ತಿಲ್ಲ.

ಕೊಪ್ಪಳದ ರೈತರಿಗೆ ಸಾಕಷ್ಟು ಅನಾನುಕೂಲತೆ ಉಂಟಾಗುತ್ತಿರುವುದನ್ನೂ, ವಿಶೇಷವಾಗಿ ಬೆಳೆ ಇಳುವರಿಯನ್ನು ಸುಧಾರಿಸಲು ಕೊಪ್ಪಳದಲ್ಲಿ ದಾಳಿಂಬೆ ಬೇಸಾಯದ ಸಾಮರ್ಥ್ಯ ಮತ್ತು ಸಾಕಷ್ಟು ಮೂಲಸೌಕರ್ಯ ಹಾಗೂ ಬೆಂಬಲದ ಕೊರತೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು, ಕೊಪ್ಪಳ ಜಿಲ್ಲೆಯನ್ನು ಸಿಡಿಪಿಗೆ ಸೇರಿಸಲು ಮತ್ತು ಪರಿಗಣಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ಕೇಂದ್ರ ಕೃಷಿ ಸಚಿವರಾದ  ಶಿವರಾಜ್ ಸಿಂಗ್ ಚೌಹಾಣ್ ರನ್ನೂ ನವದೆಹಲಿಯ ಸಚಿವಾಲಯದಲ್ಲಿ ಬೇಟಿಯಾಗಿ ಕೊಪ್ಪಳ ರೈತರ ಪರಿಸ್ಥಿತಿಯನ್ನು ಸಚಿವರಿಗೆ ತಿಳಿಸಿ ಮನವಿ ಪತ್ರ ಸಲ್ಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!