ಸಮಾಜದ ಸಂಘಟನೆ ನಿಷ್ಕ್ರಿಯ : ಪುನರ್ ರಚನೆಗಾಗಿ ಸಭೆ ಯಮನೂರಪ್ಪ ನಾಯಕ
ದಿ 22ರಂದು ವಾಲ್ಮೀಕಿ ನಾಯಕ ಮಹಾಸಭಾ ಸಂಘದ ಬೃಹತ್ ಸಭ
ಕೊಪ್ಪಳ : ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಂಘದ ಬೃಹತ್ ಸಭೆ ಇದೇ ದಿನ 22 ರ ರವಿವಾರದಂದು ಕೊಪ್ಪಳ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಬೆಳಗ್ಗೆ 10.30 ಗಂಟೆಗೆ ಜರುಗಲಿದೆ ಎಂದು ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಯಮನೂರಪ್ಪ ನಾಯಕ ಹೇಳಿದ್ರು.
ಪತ್ರಿಕಾ ಭವನ್ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ನಮ್ಮ ಸಮಾಜದ ಸಂಘಟನೆ ಕುಂಠಿತಗೊಂಡಿದೆ ಮಹಿಳೆಯರ ಮೇಲೆ ದೌರ್ಜನ್ಯಗಳು ಹಾಗೂ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗುತ್ತಿದೆ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣಗಳು ನಡೆದರು ಯಾವುದೇ ಹೋರಾಟ ಹಮ್ಮಿಕೊಂಡಿಲ್ಲ ಸಂಘದ ಜಿಲ್ಲಾಧ್ಯಕ್ಷರಾದ ಟಿ ರತ್ನಾಕರ್ ಅವರು ಸಮಾಜ ಸಂಘಟಿಸುವಲ್ಲಿ ಸಂಘಟನೆ ಮಾಡುವಲ್ಲಿ ಸರಿಯಾದ ರೀತಿಯಲ್ಲಿ ಶ್ರಮಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಜಿಲ್ಲೆಯಲ್ಲಿ ಸಮಾಜದ ಸಂಘಟನೆ ಪುನರ್ ರಚಿಸಲಾಗುವುದು ಹೊಸ ಜಿಲ್ಲಾ ಸಮಿತಿಯನ್ನು ಅಸ್ತಿತ್ವಕೆ ತರಲಾಗುವುದು ಈ ಕಾರಣಕ್ಕಾಗಿ ಸಮಾಜದ ಸಭೆ ಕರೆಯಲಾಗಿದ್ದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಭೆ ಯಶಸ್ವಿಗೊಳಿಸಬೇಕೆಂದು ಯಮನೂರಪ್ಪ ನಾಯಕ್ ಮನವಿ ಮಾಡಿಕೊಂಡಿದ್ದಾರೆ.
ಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ, ಸುರೇಶ್ ಡೊಣ್ಣಿ ತಾಲೂಕ ಅಧ್ಯಕ್ಷ ಶರಣಪ್ಪ ನಾಯಕ್ ಮುಖಂಡರಾದ ಶೇಖಣ್ಣ ಇಂದರ್ಗಿ ಗವಿಸಿದ್ದಪ್ಪ ದೊಡ್ಡಮನಿ ರಮೇಶ್ ಕುಣಿಕೇರಿ ಕರಿಯಪ್ಪ ಬಿಡ್ನಾಳ ರವಿಕುಮಾರ್ ಬನ್ನಿಕೊಪ್ಪ ಉಪಸ್ಥಿತರಿದ್ದರು.
Comments are closed.