ಶಿಕ್ಷಣ ವ್ಯವಸ್ಥೆಯಿಂದ ಅಲ್ಪಸಂಖ್ಯಾತರು.ಮುಸ್ಲಿಮರು, ದಲಿತರು ಬಹಳ ಹಿಂದುಳಿದಿದ್ದಾರೆ – ಅಮ್ಜದ್ ಪಟೇಲ್

0

Get real time updates directly on you device, subscribe now.

ಕೊಪ್ಪಳ : ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಿಂದ ಅಲ್ಪಸಂಖ್ಯಾತರು. ಮುಸ್ಲಿಮರು, ದಲಿತರು ಬಹಳ ಹಿಂದುಳಿದಿದ್ದಾರೆ ಎಂದು ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
    ನಗರದ ಫಿರ್ದೋಸ್ ಸಾಂಸ್ಕೃತಿಕ, ಕ್ರೀಡಾ ಹಾಗೂ ತರಬೇತಿ ಸಂಸ್ಥೆಯಿಂದ ದಿವಂಗತ ನಿವೃತ್ತ ಶಿಕ್ಷಕ ಹಾಜಿ ಮೊಹಮ್ಮದ್ ವಹಿದುದ್ದೀನ್ ಅಹ್ಮದ್ ಇವರ ಸ್ಮರಣಾರ್ಥ ಫಿರ್ದೋಸ್ ಮಸೀದಿಯ ಹಾಲಿನಲ್ಲಿ ರವಿವಾರ ನಡೆದ ಖಿರಾಅತ್ ಖುರ್ ಆನ್ ಪಠಣ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮುಂದುವರೆದು ಮಾತನಾಡಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದಂತಹ ಸಂವಿಧಾನ ಆಶಯದಂತೆ ಎಲ್ಲರೂ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಪಡೆಯಬಹುದು. ಈ ಸಂಸ್ಥೆಯಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡುವ ಮೂಲಕ ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವಂತಹ ಕೆಲಸ ಇಂತಹ ಸಂಸ್ಥೆಗಳಿಂದ ಮಾತ್ರ ಮಾಡಲು ಸಾಧ್ಯ.
ಫಿರ್ದೋಸ್ ಸಾಂಸ್ಕೃತಿಕ ಕ್ರೀಡಾ ಹಾಗೂ ತರಬೇತಿ ಸಂಸ್ಥೆಯು ಸಮಾಜದ ಮಕ್ಕಳಿಗೆ ಯಾವ ರೀತಿ ತರಬೇತಿಯನ್ನು ನೀಡಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ನಮ್ಮ ದೇಶದಲ್ಲಿ  ಅರೇಬಿಕ್ ಶಿಕ್ಷಣ ಹಾಗೂ ಜಗತ್ತಿನ ಶಿಕ್ಷಣ ಆಗಿರಬಹುದು ಸರಿಯಾದ ನಿಟ್ಟಿನಲ್ಲಿ ನೀಡಲಾಗುತ್ತಿಲ್ಲ ಎಂದು ವಿಷಾದಿಸಿದರು ಅವರು ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಶಿಕ್ಷಣ ಮತ್ತು ತರಬೇತಿ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
   ಇನ್ನೊಬ್ಬ ವಿಶೇಷ ಆಹ್ವಾನಿತರಾಗಿದ್ದ ಹೊಸಪೇಟೆಯ ಮದರಸಾ ಎ ಹಿಮಾಯತುಲ್ ಇಸ್ಲಾಂ ಅರೇಬಿಕ್ ಕಾಲೇಜಿನ ಪ್ರಾಂಶುಪಾಲ ಹಾಫಿಝ್ ವ ಖಾರಿ ಮೊಹಮ್ಮದ್ ಹಿದಾಯತುಲ್ಲಾ ರಹೆಮಾನಿ ಮಾತನಾಡಿ ತಂದೆ ತಾಯಿ ಇಬ್ಬರೂ ಮಕ್ಕಳನ್ನು ಜನ್ಮ ನೀಡಿದ್ದಾರೆ. ಆದರೆ ಶಿಕ್ಷಕರು ವಿದ್ಯಾವನ್ನು ನೀಡಿ ಅವರ ಭವಿಷ್ಯವನ್ನು ರೂಪಿಸುತ್ತಾರೆ ಯಾವ ಶಿಕ್ಷಕರು ವಿದ್ಯಾರ್ಥಿಗಳ ವೈರಿಗಳಾಗಿರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳನ್ನು ಸಮಾನ ದೃಷ್ಟಿಯಿಂದ ನೋಡುತ್ತಾ ಅವರಿಗೆ ವಿದ್ಯಾ ದಾನ ನೀಡಿ ಉತ್ತಮ ನಾಗರಿಕರನ್ನಾಗಿ ತಯಾರಿಸುತ್ತಾರೆ ಎಂದು ಹೇಳಿದರು.
    ಮಸ್ಜಿದ್ ಎ ಫೈಝ್ ಇಮಾಮ್ ಎ ಖತೀಬ್ ಹಾಗೂ ಉರ್ದು ಉಪನ್ಯಾಸಕ ಮೌಲಾನಾ ಮೊಹಮ್ಮದ್ ಅಲಿ ಹಿಮಾಯಿತಿ ಪ್ರಸ್ತಾವಿಕವಾಗಿ ಮಾತನಾಡಿ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿರುವ ಸೃಜನಶೀಲ ಮತ್ತು ಪ್ರತಿಭೆಗಳನ್ನು ಹೊರ ತರಲು ಸಹಾಯಕವಾಗುತ್ತದೆ ಸ್ಪರ್ಧಾತ್ಮಕ ಲೋಕದಲ್ಲಿ ಸ್ಪರ್ಧೆ ಮಾಡಲು ಪ್ರೇರಣೆಯಾಗುತ್ತದೆ ಎಂದು ಹೇಳಿದರು.
   ಮದರಸಾ ಎ ಫಿರ್ದೋಸ್ ಉಲ್ ಉಲೂಮ್ ಅರೇಬಿಕ್ ಶಾಲೆಯ ಮುಖ್ಯೋಪಾಧ್ಯ ಮೌಲಾನಾ ಸಿರಾಜುದ್ದೀನ್ ರಶಾದಿ ಮಾತನಾಡಿ ಇಂತಹ ಸ್ಪರ್ಧೆಗಳಿಂದ ಮಕ್ಕಳಲ್ಲಿ ಉತ್ಸಾಹ ಹೆಚ್ಚುತ್ತದೆ ಮತ್ತು ಕಲಿಕೆಗೆ ಸಹಕಾರಿ, ಪ್ರವಾದಿ ಮೊಹಮ್ಮದ್ ಸ್ವ.ಅ. ರವರು ತೋರಿಸಿದ ದಾರಿಯನ್ನು ತಪ್ಪದೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸ್ಪರ್ಧಾಳುಗಳಿಗೆ ಕಿವಿ ಮಾತು ಹೇಳಿದರು.
   ಫಿರ್ದೋಸ್ ಮಸೀದಿಯ ಅಧ್ಯಕ್ಷ ಅಲಿ ಜನಾಬ್ ಉಸ್ಮಾನ್ ಅಲಿ ಖಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    ವೇದಿಕೆ ಮೇಲೆ ಹಿರಿಯ ಮುಖಂಡ ಬಹದ್ದೂರ್ ಖಾನ್. ಫಜಲ್ ಅಹಮದ್ ಖಾನ್. ಸುನ್ನಿ ಮುಸ್ಲಿಮ್ ಶಾದಿ ಮಹಲ್ ಕಮಿಟಿ ಅಧ್ಯಕ್ಷ ಅಝೀಝ್ ಎ. ಚೌಥಾಯಿ. ನಿವೃತ್ತ ಉಪನ್ಯಾಸಕ ಮೊಹಮ್ಮದ್ ಅನ್ವರ್. ನಗರಸಭೆ ಮಾಜಿ ಸದಸ್ಯ ಮಾನ್ವಿ ಪಾಶ. ಎಂ.ಪಾಷಾ ಕಾಟನ್. ಜಮೀರ್ ಅಹ್ಮದ್. ಫಿರ್ದೋಸ್ ಸಾಂಸ್ಕೃತಿಕ, ಕ್ರೀಡಾ ಹಾಗೂ ತರಬೇತಿ ಸಂಸ್ಥೆಯು ಖಜಾಂಚಿ ಮೊಹಮ್ಮದ ಎಜಾಝ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು.
     ಕಾರ್ಯಕ್ರಮದಲ್ಲಿ ಎಂ. ಬದಿಯುದ್ದೀನ್ (ನವೀದ್) ನಿರೂಪಿಸಿದರು. ಮೊಹಮ್ಮದ್ ಅಲಿ ಹಿಮಾಯಿತಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: