ಕಿನ್ನಾಳದ ೬೩ನೇ ವಾರ್ಷಿಕ ಮಹಾಸಭೆ: ರಾಜ್ಯದಲ್ಲಿಯೇ ಮಾದರಿ ಸಹಕಾರ ಸಂಘ- ಅಮರೇಶ ಉಪಲಾಪುರ
ಕೊಪ್ಪಳ, ೧೨- ಸಹಕಾರ ಸಂಸ್ಥೆಗೆ ರೈತರೆ ಉಸಿರಾಗಿದ್ದು ೬೨ ವರ್ಷಗಳಿಂದ ರೈತರಿಗೆ ಸ್ಪಂದಿಸುತ್ತಾ ರಾಜ್ಯದಲ್ಲಿಯೇ ಮಾದರಿ ಸಹಕಾರ ಸಂಘ ನಮ್ಮದಾಗಿದ್ದು ಇದು ಎಲ್ಲಾ ಸದಸ್ಯರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಇಪ್ಕೋ ಆರ್‌ಜಿಬಿ ಸದಸ್ಯ ಅಮರೇಶ ಉಪಲಾಪುರ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಕಿನ್ನಾಳದ ೬೩ನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತಿದ್ದರು.
ಕಿನ್ನಾಳ ಗ್ರಾಮ ಇಲ್ಲಿಯ ಗೊಂಬೆ ಕಲೆ ಹಾಗೂ ಕೃಷಿ ಸಹಕಾರ ಸಂಘದಿಂದ ಹೆಸರುವಾಸಿಯಾಗಿದ್ದು ನಮ್ಮ ಸಂಘದಿಂದ ಕೃಷಿ ಸಾಲ ೭ಕೋಟಿ ೮೦ ಲಕ್ಷ, ಕೃಷಿಯೇತರ ಸಾಲ ೩೫ ಕೋಟಿ ೫೮ಲಕ್ಷ, ೭೮ಲಕ್ಷ ಠೇವಣಿ ಹೊಂದಿದ್ದು ರೈತರ ಉಸಿರಾಗಿ ಸೇವೆ ಸಲ್ಲಿಸುತ್ತಿದೆ.
ಸಂಘದಲ್ಲಿ ೩೮೦೦ ಸದಸ್ಯರಿದ್ದೂ ಅವರ ಸಹಕಾರ ತ್ಯಾಗದಿಂದ ೪ ರಜ್ಯ ಮಟ್ಟದ ಪ್ರಶಸ್ತಿ ಸೇರಿದಂತೆ ಒಟ್ಟು ೨೪ ಪ್ರಶಸ್ತಗಳು ನಮ್ಮ ಸಹಕಾರಿಗೆ ಲಬಿಸಿದ್ದು ಇದು ಎಲ್ಲಾ ಸದಸ್ಯರಿಗೆ ಸಲ್ಲಬೇಕಾದ ಗೌರವಾಗಿದೆ ಎಂದು ಹೇಳಿದರು.
ರೈತರು ಹಾಗೂ ಸದಸ್ಯರು ಸಾಲವನ್ನು ಪಡೆದು ಸಕಾಲಕ್ಕೆ ಮರುಪಾವತಿ ಮಾಡಿ ಸಂಘದ ಅಭಿವೃದ್ದಿಗೆ ಶ್ರಮಿಸುವಂತೆ ವಿನಂತಿಸಿಕೊಂಡರು.
ಸಭೆಯಲ್ಲಿ ಮು.ಕಾ.ನಿ ಚಂದ್ರಶೇಖರ ಕುದರಿಮೋತಿ ಮಾತನಾಡಿ, ಸಂಘದ ಆಡಳಿತವನ್ನು ಸುಗಮವಾಗಿ ಹಾಗೂ ಪ್ರಗತಿದಾಯಕವಾಗಿ ನಡೆಸಿಕೊಂಡು ಹೋಗಲು ಕಾರಣಿಭೂತರಾದ ಸಂಘದ ಎಲ್ಲಾ ಸದಸ್ಯರುಗಳಿಗೆ ಅಭಿವೃದ್ದಿಯ ಕೀರ್ತೀ ಸಲ್ಲುತ್ತದೆ ಎಂದರು.
ಒಪ್ಪಿಗೆ : ವಾರ್ಷಿಕ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆಯ ಮೇರೆಗೆ ಲಾಭಾಂವಶದ ೨೭ ಲಕ್ಷ ರೂ. ಹಣವನ್ನು ಗೋಡಾನಿನ ಕಪೌಂಡ ನಿರ್ಮಾಣ ಹಾಗೂ ಸಂಘದಿಂದ ಜನೌಷಧಿ ಕೇಂದ್ರ ಪ್ರಾರಂಭಿಸಲು ಒಪ್ಪಿಗೆ ಸೂಚಿಸಿದರು.
ಉದ್ಘಾಟನೆ : ಸಂಘದಿಂದ ಇಂದಿನಿಂದ ಲಭ್ಯವಾಗುವಂತೆ ಕಾಮನ್ ಸರ್ವಿಸ್ ಸೆಂಟರ್ ಉದ್ಘಾಟಿಸಲಾಯಿತು.
ಚೆಕ್ ವಿತರಣೆ : ಇಪ್ಕೋ ಕಂಪನಿಯ ಗೊಬ್ಬರ ಪಡೆದು ಅಕಾಲಿಕ ಮರಣ ಹೋಂದಿದ ರೈತ ಮಲ್ಲಪ್ಪ ಹುದ್ದಾರ ಕುಟುಂಬಕ್ಕೆ ೧ ಲಕ್ಷ ಚೆಕ್ ನೀಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ರವೀಂದ್ರನಾಥ ಕೋಲ್ಕಾರ ವಹಿಸಿದ್ದರು. ವೇದಿಕೆಯ ಮೇಲೆ ಉಪಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ಕಾರಬ್ಯಾಳಿ, ನೀರ್ದೆಶಕರಾದ ವಿರಭದ್ರಪ್ಪ ಗಂಜಿ, ಮಹಾದೇವಯ್ಯ ಹಿರೇಮಠ, ಕೆ.ಮಲ್ಲಿಕಾರ್ಜುನ, ಬಸವರಾಜ ಚಿಲವಾಡಗಿ, ವಿರುಪಾಕ್ಷಪ್ಪ ಐತಾಪೂರ, ನಿಂಗಪ್ಪ ಕುಣಿ, ಮೊನೇಶ ಕಳ್ಳಿಮನಿ, ಈರಣ್ಣ ವಾಲ್ಮೀಕಿ, ಮಾಲ ಹಡಗಲಿ, ಬ್ಯಾಂಕ್ ಪ್ರತಿನಿಧಿ ಶಿವುಕುಮಾರ ಮೇಳಿ, ಗ್ರಾ. ಪಂ. ಅಧ್ಯಕ್ಷ ಕರಿಯಮ್ಮ ಉಪ್ಪಾರ, ಇಪ್ಕೋ ವೆವಸ್ಥಾಪಕ ರಾಘವೇಂದ್ರ ಇತರರು ಇದ್ದರು.
Comments are closed.